ಶತ್ರುಘ್ನ ಸಿನ್ಹಾ ಮನೆಯಲ್ಲಿದ್ದ ಕಾನ್ಸ್ಟೇಬಲ್ ಬಂದೂಕಿನಿಂದ ಆಕಸ್ಮಿಕ ಫೈರಿಂಗ್

    

Last Updated : Jul 29, 2018, 06:35 PM IST
ಶತ್ರುಘ್ನ ಸಿನ್ಹಾ ಮನೆಯಲ್ಲಿದ್ದ ಕಾನ್ಸ್ಟೇಬಲ್ ಬಂದೂಕಿನಿಂದ ಆಕಸ್ಮಿಕ ಫೈರಿಂಗ್  title=

ಮುಂಬೈ: ಮುಂಬೈಯಲ್ಲಿ ಬಾಲಿವುಡ್ ನಟ ಮತ್ತು ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಅವರ ನಿವಾಸದಲ್ಲಿ ನಿಯೋಜಿಸಿರುವ ಪೊಲೀಸ್ ಕಾನ್ಸ್ಟೇಬಲ್ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಘಟನೆ ನಡೆದಿದೆ. ಆದರೆ ಯಾರಿಗೂ ಗಾಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯು ಶನಿವಾರ ಸಂಜೆ ಪಶ್ಚಿಮದ ಉಪನಗರಗಳಲ್ಲಿ ಒಂದಾದ ಜುಹೂನಲ್ಲಿರುವ ಸಿನ್ಹಾ ಅವರ ನಿವಾಸದಲ್ಲಿ ಸಂಭವಿಸಿದೆ. ಮಾಜಿ ಕೇಂದ್ರ ಸಚಿವ ಮತ್ತು ಹಾಲಿ ಸಂಸದರಾಗಿರುವ ಶತ್ರುಘ್ನ ಸಿನ್ಹಾ  ರಾಮಾಯಣ ಎನ್ನುವ ಕಟ್ಟಡ ಎಂಟನೆ ಮಹಡಿಯಲ್ಲಿ ವಾಸುತ್ತಿದ್ದರು ಎಂದು ಹೇಳಲಾಗಿದೆ. ಈ ಘಟನೆ ಸಂಭವಿಸಿದಾಗ ಅವರು ನಿವಾಸದಲ್ಲಿ ಇರಲಿಲ್ಲ ಎಂದು ಹೇಳಲಾಗಿದೆ.

ಸಿನ್ಹಾ ಅವರ ರಕ್ಷಣೆಗಾಗಿ ಕಾನ್ಸ್ಟೇಬಲ್ ನ್ನು ನಿಯೋಜಿಸಲಾಗಿತ್ತು ಎಂದು ತಿಳಿದುಬಂದಿದೆ.ಶತ್ರುಘ್ನ ಸಿನ್ಹಾ ಅವರು ಇತ್ತೀಚಿನ ದಿನಗಳಲ್ಲಿ  ಪ್ರಧಾನಿ ಮೋದಿಯವರ ಆಡಳಿತದ ವಿರುದ್ಧ ಬಹಿರಂಗ ಅಸಮಧಾನ ಹೊರಹಾಕುವ ಮೂಲಕ ಬಂಡಾಯವೆದ್ದಿದ್ದಾರೆ.

Trending News