ಮಗನನ್ನು ಡ್ರೈವ್‌ಗೆ ಕರೆದೊಯ್ಯದ ಶೋಯೆಬ್‌ : ಆಗಿದ್ರೆ.. ಸಾನಿಯಾ ಡೈವೋರ್ಸ್‌ ಸುಳ್ಳಾ ..!

ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಮತ್ತು ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ವಿಚ್ಛೇದನದ ಸುದ್ದಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅಲ್ಲದೆ, ಡೈವೋರ್ಸ್‌ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಶೋಯೆಬ್‌ ತಮ್ಮ ಮಗನನ್ನು ಲಂಬೋರ್ಗಿನಿಯಲ್ಲಿ ಲಾಂಗ್‌ ಡ್ರೈವ್‌ ಕರೆದೊಯ್ಯುತ್ತಿರುವ ವಿಡಿಯೋ ಒಂದು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ.

Written by - Krishna N K | Last Updated : Dec 5, 2022, 05:07 PM IST
  • ಮಗನನ್ನು ಲಾಂಗ್‌ ಡ್ರೈವ್‌ಗೆ ಕರೆದೊಯ್ಯದ ಶೋಯೆಬ್‌ ಮಲಿಕ್‌
  • ಈ ಕುರಿತು ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ
  • ಇದನ್ನು ನೋಡಿದ ನೆಟ್ಟಿಗರು ಡೈವೋರ್ಸ್‌ ಸುದ್ದಿ ಸುಳ್ಳಾ ಎಂದು ತಲೆಕೆರೆದುಕೊಳ್ಳುತ್ತಿದ್ದಾರೆ
 ಮಗನನ್ನು ಡ್ರೈವ್‌ಗೆ ಕರೆದೊಯ್ಯದ ಶೋಯೆಬ್‌ : ಆಗಿದ್ರೆ.. ಸಾನಿಯಾ ಡೈವೋರ್ಸ್‌ ಸುಳ್ಳಾ ..! title=

Shoaib Sania Divorce : ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಮತ್ತು ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ವಿಚ್ಛೇದನದ ಸುದ್ದಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅಲ್ಲದೆ, ಡೈವೋರ್ಸ್‌ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಶೋಯೆಬ್‌ ತಮ್ಮ ಮಗನನ್ನು ಲಂಬೋರ್ಗಿನಿಯಲ್ಲಿ ಲಾಂಗ್‌ ಡ್ರೈವ್‌ ಕರೆದೊಯ್ಯುತ್ತಿರುವ ವಿಡಿಯೋ ಒಂದು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ.

ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಮಲಿಕ್ ನಿವೃತ್ತರಾಗಿದ್ದಾರೆ. ಸದ್ಯ ಲಂಕಾ ಪ್ರೀಮಿಯರ್ ಲೀಗ್ 2022 ನಲ್ಲಿ ಆಕ್ಷನ್‌ನಲ್ಲಿ ಭಾಗಿಯಾಗಲಿದ್ದಾರೆ. ಜಾಫ್ನಾ ಕಿಂಗ್ಸ್‌ ತಂಡದಲ್ಲಿ ಆಡಲಿದ್ದಾರೆ. ಇತ್ತೀಚಿಗೆ ಮಲಿಕ್ ತನ್ನ ಐಷಾರಾಮಿ ಆರೆಂಜ್‌ ಲಂಬೋರ್ಗಿನಿಯಲ್ಲಿ ಮಗ ಇಜಾನ್‌ನನ್ನು ಲಾಂಗ್‌ ಡ್ರೈವ್‌ಗೆ ಕರೆದೊಯ್ದಿದ್ದಾರೆ. ಈ ಕುರಿತು ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಡೈವೋರ್ಸ್‌ ಸುದ್ದಿ ಸುಳ್ಳಾ ಎಂದು ತಲೆಕೆರೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Team India : ಭಾರತದ ಕಳಪೆ ಪ್ರದರ್ಶನದಿಂದ ಕಂಗೆಟ್ಟ ಬಿಸಿಸಿಐ : ಈಗ ಟಿ20 ಟೀಂಗೆ ಹೊಸ 'BOSS'

ಮಂಗಳವಾರ (ಡಿ.6) ರಂದು ನಡೆಯಲಿರುವ LPL 2022 ರ ಆರಂಭಿಕ ಪಂದ್ಯದಲ್ಲಿ ಗಾಲೆ ಗ್ಲಾಡಿಯೇಟರ್ಸ್ ವಿರುದ್ಧ ಜಾಫ್ನಾ ಕಿಂಗ್ಸ್‌ಗಾಗಿ ಮಲಿಕ್ ಕಣಕ್ಕಿಳಿಯಲಿದ್ದಾರೆ. ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಬ್ಯುಸಿಯಾಗುವ ಮುನ್ನ ಮಗನ ಜೊತೆ ಲಾಂಗ್ ಡ್ರೈವ್ ಹೋಗುವ ಮೂಲಕ ಸಮಯ ಕಳೆದಿದ್ದಾರೆ. ಈ ಕುರಿತು ವಿಡಿಯೋವನ್ನು ಹಂಚಿಕೊಂಡಿರುವ ಶೋಯೆಬ್‌, ಎಲ್‌ಪಿಎಲ್‌ನಲ್ಲಿ ಬ್ಯುಸಿಯಾಗುವ ಮುನ್ನ ತಂದೆ ಮಗನ ಲಾಂಗ್‌ ಡ್ರೈವ್‌... ನಾವು ಸೀಟ್‌ ಬೆಲ್ಟ್‌ ಧರಿಸಿದ್ದೇವೆ. ನೀವೆಲ್ಲರೂ ಸೀಟ್ ಬೆಲ್ಟ್‌ ಹಾಕಿಕೊಳ್ಳಿ..." ಎಂದು ಮಲಿಕ್ ಶೀರ್ಷಿಕೆ ಬರೆದು ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ಇನ್ನು ಇತ್ತೀಚಿಗೆ ಶೋಯೆಬ್ ಮಲಿಕ್ ಮತ್ತು ಪಾಕಿಸ್ತಾನದ ನಟಿ ಆಯೇಶಾ ಒಮರ್ ಜೊತೆ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಈ ಕುರಿತು ಆಯೇಶಾ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ವಿಚ್ಛೇದನದ ಊಹಾಪೋಹಗಳ ಮಧ್ಯೆ, ಒಟಿಟಿ ಪ್ಲಾಟ್‌ಫಾರ್ಮ್ ಉರ್ದುಫ್ಲಿಕ್ಸ್ ನಲ್ಲಿ ಸಾನಿಯಾ ಮತ್ತು ಶೋಯೆಬ್ ತಮ್ಮ 'ದಿ ಮಿರ್ಜಾ ಮಲಿಕ್ ಶೋ' ಎಂಬ ಶೀರ್ಷಿಕೆಯ ಹೊಸ ಕಾರ್ಯಕ್ರಮದೊಂದಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News