ʼನನಗೆ ಇನ್ನೊಬ್ಬ ಮಗಳಿದ್ದಾಳೆʼ ಜಾನ್ವಿ.. ಖುಷಿ.. ಬಿಟ್ಟು ನಟಿ ಶ್ರೀದೇವಿಗೆ ಮತ್ತೊಬ್ಬ ಮಗಳಿದ್ದಾಳಾ?

Actress Sridevi: ದಿವಂಗತ ಬಾಲಿವುಡ್ ನಟಿ ಶ್ರೀದೇವಿ ತಮ್ಮ ವೃತ್ತಿಜೀವನದಲ್ಲಿ ಅನೇಕ ಸೂಪರ್ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇಂದು ಅವರು ನಮ್ಮೊಂದಿಗೆ ಇಲ್ಲದಿದ್ದರೂ, ಅವರು ತಮ್ಮ ಇಬ್ಬರು ಪುತ್ರಿಯರಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಅವರ ಸ್ಥಾನ ತುಂಬಲು ರೆಡಿಯಾಗುತ್ತಿದ್ದಾರೆ..  

Written by - Savita M B | Last Updated : Jul 11, 2024, 07:12 AM IST
  • ಸೌತ್‌ ನಟಿ ಶ್ರೀದೇವಿ 2018 ರಲ್ಲಿ ನಿಧನರಾದರು.
  • ಆದ್ರೆ ನಟಿಗೆ ಇಬ್ಬರಲ್ಲ ಮೂವರು ಹೆಣ್ಣು ಮಕ್ಕಳಿದ್ದಾರೆ ಗೊತ್ತಾ.
ʼನನಗೆ ಇನ್ನೊಬ್ಬ ಮಗಳಿದ್ದಾಳೆʼ ಜಾನ್ವಿ.. ಖುಷಿ.. ಬಿಟ್ಟು ನಟಿ ಶ್ರೀದೇವಿಗೆ ಮತ್ತೊಬ್ಬ ಮಗಳಿದ್ದಾಳಾ?  title=

Sridevi Three Daughters: ಸೌತ್‌ ನಟಿ ಶ್ರೀದೇವಿ 2018 ರಲ್ಲಿ ನಿಧನರಾದರು. ಆದರೆ ಮಕ್ಕಳು ಜಾನ್ವಿ ಮತ್ತು ಖುಷಿ ಇಂದಿಗೂ ಅವರನ್ನು ನೆನಪಿಸಿಕೊಳ್ಳುತ್ತಾರೆ. ನಟಿ ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಶ್ರೀದೇವಿಗೆ ಇಬ್ಬರು ಹೆಣ್ಣುಮಕ್ಕಳು ಎಂಬುದು ಬಹುತೇಕರಿಗೆ ಗೊತ್ತು. ಆದ್ರೆ ನಟಿಗೆ ಇಬ್ಬರಲ್ಲ ಮೂವರು ಹೆಣ್ಣು ಮಕ್ಕಳಿದ್ದಾರೆ ಗೊತ್ತಾ.

 ಈ ಸುದ್ದಿ ತಿಳಿದ ನಂತರ, ಶ್ರೀದೇವಿ ಅವರ ಅಭಿಮಾನಿಗಳಿಗೆ ಶಾಕ್‌ ಆಗಿದೆ.. ಹೌದು ನಟಿ ಶ್ರೀದೇವಿ ಅವರ ಮೂರನೇ ಮಗಳು ಪಾಕಿಸ್ತಾನಿ ನಟಿ ಸಜಲ್ ಅಲಿ.. ಹೇಗೆ ಅಂತೀರಾ ಇಲ್ಲಿದೆ ಉತ್ತರ.. 

ಇದನ್ನೂ ಓದಿ-ಸ್ಟಾರ್ ಹೀರೋ ಜೊತೆ ಲವ್‌.. ಕೊರಿಯೋಗ್ರಾಫರ್ ಜೊತೆ ಡೇಟಿಂಗ್.. ಕೊನೆಗೆ ಡೈರೆಕ್ಟರ್‌ನನ್ನು ಮದುವೆಯಾಗಿ ತಾಯಿಯಾದ ನಟಿ..!

 ಪಾಕಿಸ್ತಾನಿ ನಟಿ ಸಜಲ್ ಅಲಿಯನ್ನು ತನ್ನ ಮಗಳಂತೆ ಪರಿಗಣಿಸುವುದಾಗಿ ಶ್ರೀದೇವಿ ಸಂದರ್ಶನವೊಂದರಲ್ಲಿ ಹೇಳಿದ್ದರು. ಇವರಿಬ್ಬರೂ ಮಾಮ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಇದರಲ್ಲಿ ಶ್ರೀದೇವಿ ಸಜಲ್ ಅವರ ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ.

ಇದನ್ನೂ ಓದಿ-ನಟಿ ಸೌಂದರ್ಯ ಸಾವಿನ ಬಳಿಕ ಅವರ ಕೋಟಿ ಕೋಟಿ ಆಸ್ತಿ ಎನಾಯಿತು ಗೊತ್ತೆ..? ಆ ಇಬ್ಬರು...

ಮಾಮ್ ಚಿತ್ರದ ಶೂಟಿಂಗ್ ಸಮಯದಲ್ಲಿ ಶ್ರೀದೇವಿ ಮತ್ತು ಸಜಲ್ ಅಲಿ ನಡುವೆ ಉತ್ತಮ ಬಾಂಧವ್ಯವಿತ್ತು. ಚಿತ್ರದ ಶೂಟಿಂಗ್ ಸಮಯದಲ್ಲಿ ತಮ್ಮ ತೆರೆಯ ಮೇಲಿನ ಮಗಳು ಸಜಲ್ ಅಲಿ ಮತ್ತು ಅವರ ಇಬ್ಬರು ಪುತ್ರಿಯರ ನಡುವೆಯೂ ಉತ್ತಮ ಬಾಂಧವ್ಯ ಏರ್ಪಟ್ಟಿತು.. ಆದರೆ ಸಜಲ್ ಅವರ ತಾಯಿಯ ಹಠಾತ್ ಸಾವು ಆಕೆಯನ್ನು ಕಂಗಾಲಾಗಿಸಿತ್ತು.. ತನ್ನ ಮಗಳ ಚಿತ್ರವನ್ನು ನೋಡಲು ಸಹ ಸಾಧ್ಯವಾಗಲಿಲ್ಲ ಎಂದು ಶ್ರೀದೇವಿ ಬಹಿರಂಗಪಡಿಸಿದ್ದರು. ಇದರಿಂದಾಗಿ ಶ್ರೀದೇವಿ ಅವರನ್ನು ಮಗಳೆಂದು ಪರಿಗಣಿಸಲು ಆರಂಭಿಸಿದರು. ಸಜಲ್ ನನ್ನ ಮೂರನೇ ಮಗು.. ಈಗ, ನನಗೆ ಇನ್ನೊಬ್ಬ ಮಗಳು ಇದ್ದಾಳೆ ಎಂದು ನಾನು ಭಾವಿಸುತ್ತೇನೆ ಎಂದು ನಟಿ ಶ್ರೀದೇವಿ ಹೇಳಿದ್ದರಂತೆ.. 

ಶ್ರೀದೇವಿ ಸಾವಿನ ನಂತರ ಸಂದರ್ಶನವೊಂದರಲ್ಲಿ ಮಾತನಾಡಿದ ಸಜಲ್, "ಅವರು ನನ್ನ ತಾಯಿಯಂತಿದ್ದರು. ಸದ್ಯಕ್ಕೆ ನಾನು ಆಘಾತಕ್ಕೊಳಗಾಗಿದ್ದೇನೆ... ಮತ್ತೆ ನನ್ನ ತಾಯಿಯನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ" ಎಂದು ಹೇಳಿದ್ದರು.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News