IPL 2023: ಸೋತರೂ ಇತಿಹಾಸ ಸೃಷ್ಟಿಸಿದ ಕೆಎಲ್ ರಾಹುಲ್! ದಿಗ್ಗಜರ ಮಣಿಸಿ ಈ ವಿಷಯದಲ್ಲಿ ನಂಬರ್-1 ಸ್ಥಾನಕ್ಕೇರಿದ ಕನ್ನಡಿಗ

IPL 2023: ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಪಂದ್ಯವನ್ನು ಗೆಲ್ಲಲು ಸಾಧ್ಯವಾಗದಿದ್ದರೂ, ನಾಯಕ ಕೆಎಲ್ ರಾಹುಲ್ ಅತ್ಯುತ್ತಮ ಇನ್ನಿಂಗ್ಸ್ ಅಂದರೆ. 68 ರನ್‌’ಗಳ ಇನ್ನಿಂಗ್ಸ್‌ನಲ್ಲಿ ಅರ್ಧಶತಕವನ್ನು ಬಾರಿಸಿದರು. ಈ ಮೂಲಕ ಕನ್ನಡಿಗ ರಾಹುಲ್ ಅದ್ಭುತ ದಾಖಲೆ ಬರೆದಿದ್ದಾರೆ. ಭಾರತದ ಪರ ಟಿ20 ಕ್ರಿಕೆಟ್‌’ನಲ್ಲಿ ವೇಗವಾಗಿ 7000 ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾಗಿದ್ದಾರೆ.

Written by - Bhavishya Shetty | Last Updated : Apr 23, 2023, 12:05 AM IST
    • ಭಾರತದ ಪರ ಟಿ20 ಕ್ರಿಕೆಟ್‌’ನಲ್ಲಿ ವೇಗವಾಗಿ 7000 ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರ
    • ಈ ಹಿಂದೆ 212 ಇನ್ನಿಂಗ್ಸ್‌ಗಳಲ್ಲಿ 7000 ರನ್ ಪೂರೈಸಿದ ವಿರಾಟ್ ಕೊಹ್ಲಿ ಹೆಸರಿನಲ್ಲಿ ಈ ದಾಖಲೆ ಇತ್ತು.
    • ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
IPL 2023: ಸೋತರೂ ಇತಿಹಾಸ ಸೃಷ್ಟಿಸಿದ ಕೆಎಲ್ ರಾಹುಲ್! ದಿಗ್ಗಜರ ಮಣಿಸಿ ಈ ವಿಷಯದಲ್ಲಿ ನಂಬರ್-1 ಸ್ಥಾನಕ್ಕೇರಿದ ಕನ್ನಡಿಗ title=
KL Rahul

IPL 2023: ಐಪಿಎಲ್ 2023ರಲ್ಲಿ ಇಂದು ನಡೆದ ಬಹಳಷ್ಟು ರೋಚಕವಾಗಿತ್ತು. ಈ ಪಂದ್ಯದ ಕೊನೆಯ ಓವರ್‌ನಲ್ಲಿ ಗುಜರಾತ್ ಗೆಲುವನ್ನು ಸಾಧಿಸಿದೆ. ಕೊನೆಯ ಎಸೆತದಲ್ಲಿ 4 ವಿಕೆಟ್ ಕಬಳಿಸಿದ ಮೋಹಿತ್ ಶರ್ಮಾ ಗುಜರಾತ್ ಟೈಟಾನ್ಸ್ ತಂಡದ ಗೆಲುವಿನ ಹೀರೋ ಎನಿಸಿಕೊಂಡರು. ಅವರ ಸತತ ನಾಲ್ಕು ಎಸೆತಗಳಲ್ಲಿ 4 ವಿಕೆಟ್‌ಗಳು ಬಿದ್ದವು. ಆದರೆ, ಈ ಪಂದ್ಯದಲ್ಲಿ ಸೋಲಿನ ನಡುವೆಯೂ ಕೆಎಲ್ ರಾಹುಲ್ ಇತಿಹಾಸ ಸೃಷ್ಟಿಸಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: Virat Kohli: ವಿರಾಟ್’ಗೆ ಈ ತಿಂಡಿ ಅಂದ್ರೆ ಪಂಚಪ್ರಾಣ! ಇದನ್ನು ಸವಿಯಲೆಂದೇ ಈ ಸ್ಥಳಕ್ಕೆ ಓಡೋಡಿ ಬರ್ತಾರೆ ಕಿಂಗ್ ಕೊಹ್ಲಿ

ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಪಂದ್ಯವನ್ನು ಗೆಲ್ಲಲು ಸಾಧ್ಯವಾಗದಿದ್ದರೂ, ನಾಯಕ ಕೆಎಲ್ ರಾಹುಲ್ ಅತ್ಯುತ್ತಮ ಇನ್ನಿಂಗ್ಸ್ ಅಂದರೆ. 68 ರನ್‌’ಗಳ ಇನ್ನಿಂಗ್ಸ್‌ನಲ್ಲಿ ಅರ್ಧಶತಕವನ್ನು ಬಾರಿಸಿದರು. ಈ ಮೂಲಕ ಕನ್ನಡಿಗ ರಾಹುಲ್ ಅದ್ಭುತ ದಾಖಲೆ ಬರೆದಿದ್ದಾರೆ. ಭಾರತದ ಪರ ಟಿ20 ಕ್ರಿಕೆಟ್‌’ನಲ್ಲಿ ವೇಗವಾಗಿ 7000 ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾಗಿದ್ದಾರೆ. 197 ಇನ್ನಿಂಗ್ಸ್‌’ಗಳಲ್ಲಿ ಈ ಸಾಧನೆ ಮಾಡಿದರು. ಈ ಹಿಂದೆ 212 ಇನ್ನಿಂಗ್ಸ್‌ಗಳಲ್ಲಿ 7000 ರನ್ ಪೂರೈಸಿದ ವಿರಾಟ್ ಕೊಹ್ಲಿ ಹೆಸರಿನಲ್ಲಿ ಈ ದಾಖಲೆ ಇತ್ತು.

ಅತಿ ವೇಗವಾಗಿ 7000 ರನ್ ಗಳಿಸಿದ ಭಾರತೀಯ!

ಕೆಎಲ್ ರಾಹುಲ್ ಈಗ ಭಾರತದಿಂದ ಅತಿ ವೇಗವಾಗಿ 7000 ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇವರ ನಂತರ ವಿರಾಟ್ ಕೊಹ್ಲಿ (212 ಇನ್ನಿಂಗ್ಸ್) ಹೆಸರು ಬರುತ್ತದೆ. ಶಿಖರ್ ಧವನ್ (246 ಇನ್ನಿಂಗ್ಸ್) ಮೂರನೇ ಸ್ಥಾನದಲ್ಲಿದ್ದಾರೆ. ತದನಂತರ ಸುರೇಶ್ ರೈನಾ (251 ಇನ್ನಿಂಗ್ಸ್) ಹೆಸರಿದೆ. ಟೀಂ ಇಂಡಿಯಾ ನಾಯಕರಾಗಿರುವ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಅವರು ಈ ಮೈಲಿಗಲ್ಲನ್ನು ತಲುಪಲು 258 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: IPLನಲ್ಲಿ ವಿಫಲವಾದ್ರೂ ಟಿ20ಯಲ್ಲಿ ‘ಸೂರ್ಯ’ನೇ ಕಿಂಗ್: ಅಗ್ರಸ್ಥಾನದಲ್ಲಿ ಮತ್ತೆ ಟೀಂ ಇಂಡಿಯಾದ ಮಿ.360

ಗುಜರಾತ್’ಗೆ ಗೆಲುವು:

ಈ ರೋಚಕ ಪಂದ್ಯದಲ್ಲಿ ಮೋಹಿತ್ ಶರ್ಮಾ ಕೊನೆಯ ಓವರ್‌’ನಲ್ಲಿ ಗುಜರಾತ್ ಟೈಟಾನ್ಸ್‌’ಗೆ ಜಯ ತಂದುಕೊಟ್ಟರು. ಕೊನೆಯ ಓವರ್‌’ನಲ್ಲಿ ಲಕ್ನೋ ತಂಡಕ್ಕೆ 12 ರನ್‌’ಗಳ ಅಗತ್ಯವಿದ್ದು, ಕೆಎಲ್ ರಾಹುಲ್ (66) ಮತ್ತು ಆಯುಷ್ ಬದೋನಿ (8) ಕ್ರೀಸ್‌’ನಲ್ಲಿದ್ದರು. ಬೌಲಿಂಗ್ ಮಾಡಲು ಬಂದ ಮೋಹಿತ್ ಶರ್ಮಾ ಅವರ ಮೊದಲ ಎಸೆತದಲ್ಲಿ ರಾಹುಲ್ ಎರಡು ರನ್ ಗಳಿಸಿದರು. ಇದಾದ ಬಳಿಕ ಸತತ ನಾಲ್ಕು ಎಸೆತಗಳಲ್ಲಿ ಮೋಹಿತ್ ನಾಲ್ಕು ವಿಕೆಟ್ ಕಬಳಿಸಿದ್ದು, ಈ ಮೂಲಕ ಗುಜರಾತ್ 7 ರನ್‌’ಗಳ ಜಯ ಸಾಧಿಸಿತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News