ನವದೆಹಲಿ: ಐಪಿಎಲ್ನಲ್ಲಿ ಮತ್ತೊಂದು ನೋ ಬಾಲ್ ವಿವಾದ ಸಖತ್ ಸೌಂಡ್ ಮಾಡುತ್ತಿದೆ. ನಿನ್ನೆ(ಏ.22) ರಾತ್ರಿ ನಡೆದ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 15 ರನ್‍ಗಳ ರೋಚಕ ಗೆಲುವು ಸಾಧಿಸಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರಾಜಸ್ಥಾನ್ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 222 ರನ್ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನತ್ತಿದ ದೆಹಲಿ ಕೊನೆ ಓವರ್ ವರೆಗೂ ಹೋರಾಟ ನಡೆಸಿ 15 ರನ್ ಗಳಿಂದ ಸೋಲು ಕಂಡಿತು.
ನೋ ಬಾಲ್ ವಿವಾದಕ್ಕೆ ಪಂತ್ ಗರಂ
ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ನೋ ಬಾಲ್ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಅಂತಿಮ ಓವರ್‌ನಲ್ಲಿ ನೋ ಬಾಲ್ ನೀಡದಿರುವ ಅಂಪೈರ್ ನಿರ್ಧಾರಕ್ಕೆ ಗಂರ ಆದ ರಿಷಭ್ ಪಂತ್ ಕೋಚ್ ಪ್ರವೀಣ್ ಆಮ್ರೆರನ್ನು ಪ್ರತಿಭಟಿಸಲು ಕಳುಹಿಸಿ ವಿವಾದಕ್ಕೆ ಗುರಿಯಾಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಅಂತೀರಾ..? ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ದೆಹಲಿ ಗೆಲುವಿಗೆ ಕೊನೆ ಓವರ್‌ನಲ್ಲಿ 36 ರನ್‍ಗಳ ಅವಶ್ಯವಿತ್ತು. ಒಬೆದ್ ಮೆಕಾಯ್ ಎಸೆದ ಕೊನೆ ಓವರ್ನ 3 ಎಸೆತಗಳನ್ನು ರಾವ್ಮನ್ ಪೊವೆಲ್ ಸಿಕ್ಸರ್‍ಗೆ ಅಟ್ಟಿದ್ದರು. ಈ ಮೂಲಕ ಸೋಲುವ ಪಂದ್ಯದಲ್ಲಿ ದೆಹಲಿಗೆ ಗೆಲುವಿನ ಆಸೆಯನ್ನು ಹೆಚ್ಚಿಸಿದ್ದರು. ಆದರೆ ಮೆಕಾಯ್ ಅವರ 3ನೇ ಎಸೆತ ವಿವಾದಕ್ಕೆ ಕಾರಣವಾಯಿತು.
ಇದನ್ನೂ ಓದಿ: Mumbai Indians : ಮುಂಬೈ ಟೀಂ ಮುಂದಿನ ಕ್ಯಾಪ್ಟನ್ ಪಟ್ಟಿಯಲ್ಲಿ ಈ 3 ಆಟಗಾರರ ಹೆಸರು!
ಯಾರ್ಕರ್ ಹಾಕಲು ಪ್ರಯತ್ನಿಸಿದ್ದ ಮೆಕಾಯ್ ಅವರ 3ನೇ ಎಸೆತವನ್ನು ಮಿಡ್ ವಿಕೆಟ್ನಲ್ಲಿ ಪೊವೆಲ್ ಸಿಕ್ಸರ್‍ಗೆ ಅಟ್ಟಿದ್ರು. ಆ ಬಾಲ್ ಫುಲ್ ಟಾಸ್ ಆಗಿದ್ದ ಕಾರಣ ಅದು ನೋ ಬಾಲ್ ಆಗಿತ್ತು. ಡಗೌಟ್ನಿಂದಲೇ ನಾಯಕ ರಿಷಭ್ ಪಂತ್ ಅವರು ಅಂಪೈರ್ಗಳಿಗೆ ‘ಇದು ಅನ್ಯಾಯ, ಅದು ನೋ ಬಾಲ್’ ಎಂದು ಸಿಗ್ನಲ್ ಕೊಟ್ಟಿದ್ದಾರೆ. ಪಂತ್ ಜೊತೆಗೆ ಪ್ರವೀಣ್ ಆಮ್ರೆ, ಶೇನ್ ವ್ಯಾಟ್ಸನ್ ಮತ್ತು ಡೇವಿಡ್ ವಾರ್ನರ್ ಸೇರಿ ಹಲವರು ನೋ ಬಾಲ್… ನೋ ಬಾಲ್… ಎಂದು ಹೇಳಿದ್ದರು.
I can feel #RishabhPant
People r saying he did wrong but I don’t feel it’s wrong…why can’t he check the No ball…why so much ego ??I never liked this umpire..he is als giving wrong decisions & going on ego trip
But now every1 blaming #Rishabh for this action #DC
#RRvsDC pic.twitter.com/tZ2kOZEz0e— Sonia #CSK #Dhoni (@SoniaVerma142) April 22, 2022
ಅದು ನೋ ಬಾಲ್ ಅಂತಾ ಪಂತ್ ಹೇಳುತ್ತಿದ್ದರೆ, ಅಂಪೈರ್ ಮಾತ್ರ ಇದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ. ಕ್ರೀಸ್ನಲ್ಲಿದ್ದ ಪೊವೆಲ್ ಸಹ ಅಂಪೈರ್ ಜೊತೆ ಮಾತನಾಡಿದ್ರೂ ಪ್ರಯೋಜನವಾಗಲಿಲ್ಲ. ಈ ವೇಳೆ ಫೀಲ್ಡ್ ಅಂಪೈರ್ ನಿತಿನ್ ಮೆನನ್ ಅದನ್ನು ಗುಡ್ ಬಾಲ್ ಅಂತಾ ಪರಿಗಣಿಸಿದರು. ನೋ ಬಾಲ್ ಮರು ಪರಿಶೀಲಿಸದ ಅಂಪೈರ್ ನಿರ್ಧಾರಕ್ಕೆ ಪಂತ್ ಗರಂ ಆದರು. ಕೂಡಲೇ ಕೈ ಮಾಡಿ ಕ್ರೀಸ್ನಲ್ಲಿದ್ದ ಪೊವೆಲ್ ಮತ್ತು ಕುಲ್ದೀಪ್ ಯಾದವ್ರನ್ನು ಮೈದಾನದಿಂದ ಡಗೌಟ್ಗೆ ವಾಪಸ್ ಬರುವಂತೆ ಸೂಚಿಸಿದರು.
ಇದನ್ನೂ ಓದಿ: Viral Video: ಯುಜ್ವೇಂದ್ರ ಚಹಾಲ್ ಹಾಗೂ ಧನಶ್ರೀ ವರ್ಮಾ ಡ್ಯಾನ್ಸ್ ಗೆ ಜೋಸ್ ಬಟ್ಲರ್ ಫಿದಾ!
ನೋ ಬಾಲ್ ಹೈಡ್ರಾಮಾ ವಿಚಾರವಾಗಿ ಅಂಪೈರ್ ಜೊತೆ ವಾಗ್ವಾದ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಪ್ರವೀಣ್ ಆಮ್ರೆ ಮೈದಾನದೊಳಗೆ ಹೋಗಿ ಅಂಪೈರ್ ಜೊತೆ ಮಾತನಾಡಲು ಪ್ರಯತ್ನಿಸಿದರು. ಆದರೆ, ಅಂಪೈರ್ಗಳು ಇದಕ್ಕೆ ಸಮ್ಮತಿಸಲಿಲ್ಲ. ನೀವು ಮೈದಾನ ಬಿಟ್ಟು ಹೊರಗಡೆ ಹೋಗಿ ಅಂತಾ ಅಂಪೈರ್ಗಳು ಆಮ್ರೆಗೆ ಸೂಚಿಸಿದರು. ನಿಯಮಗಳ ಪ್ರಕಾರ ಪಂದ್ಯ ನಡೆಯುವ ವೇಳೆ ಡಗೌಟ್ನಿಂದ ಆಟಗಾರರು ಮತ್ತು ಸಿಬ್ಬಂದಿ ಯಾವುದೇ ಕಾರಣಕ್ಕೂ ಮೈದಾನ ಪ್ರವೇಶಿಸುವಂತಿಲ್ಲ. ಆದರೆ, ರೂಲ್ಸ್ ಬ್ರೇಕ್ ಮಾಡಿ ಮೈದಾನ ಪ್ರವೇಶಿಸಿರುವ ಪ್ರವೀಣ್ ಆಮ್ರೆಗೆ ದಂಡ ವಿಧಿಸುವ ಸಾಧ‍್ಯತೆ ಇದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.