Lucky Zodiac Sign: ಜನವರಿಯಲ್ಲಿ ಈ 5 ರಾಶಿಯವರ ಅದೃಷ್ಟವೇ ಬದಲಾಗಲಿದೆ!

Lucky Zodiac Signs: ಜನವರಿಯಲ್ಲಿ 4 ಗ್ರಹಗಳು ತಮ್ಮ ರಾಶಿಗಳನ್ನು ಬದಲಿಸುತ್ತಿವೆ. ಪರಿಣಾಮ ಜನವರಿ ತಿಂಗಳಿನಲ್ಲಿ 5 ರಾಶಿಯ ಜನರ ಅದೃಷ್ಟವೇ ಬದಲಾಗಿದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳಿದೆ.

Written by - Puttaraj K Alur | Last Updated : Dec 27, 2023, 12:05 PM IST
  • ಜನವರಿಯಲ್ಲಿ ಗ್ರಹಗಳ ಸಂಚಾರದಿಂದ ಹೊಸ ವರ್ಷವು ಮೇಷ ರಾಶಿಯವರಿಗೆ ಅದೃಷ್ಟ ತರಲಿದೆ
  • ಲಕ್ಷ್ಮಿ ನಾರಾಯಣ ಯೋಗದಿಂದ ವೃಷಭ ರಾಶಿಯವರು ಆದಾಯ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಾಣುವರು
  • ಕನ್ಯಾ ರಾಶಿಯವರಿಗೆ ಜನವರಿಯಲ್ಲಿ ಆದಾಯ ಹೆಚ್ಚಾಗಲಿದ್ದು, ಜೀವನದಲ್ಲಿ ಯಶಸ್ಸು ಸಿಗಲಿದೆ
Lucky Zodiac Sign: ಜನವರಿಯಲ್ಲಿ ಈ 5 ರಾಶಿಯವರ ಅದೃಷ್ಟವೇ ಬದಲಾಗಲಿದೆ!  title=
ಅದೃಷ್ಟದ ರಾಶಿಗಳು

ನವದೆಹಲಿ: ಹೊಸ ವರ್ಷ 2024ರ ಜನವರಿ ತಿಂಗಳಿನಲ್ಲಿ 4 ಗ್ರಹಗಳ ಸ್ಥಾನ ಬದಲಾವಣೆಯಾಗಲಿದ್ದು, ಲಕ್ಷ್ಮಿ ನಾರಾಯಣ ರಾಜಯೋಗ, ಬುಧಾದಿತ್ಯ ರಾಜಯೋಗದಂತಹ ಪ್ರಭಾವಶಾಲಿ ಯೋಗಗಳನ್ನುಂಡು ಮಾಡಲಿದೆ. ಬುಧನು ಜನವರಿ 2ರಂದು ವೃಶ್ಚಿಕ ರಾಶಿಗೆ ಚಲಿಸುತ್ತಾನೆ. ಬಳಿಕ ಜ.7ರಂದು ಧನು ರಾಶಿಗೆ ಪ್ರವೇಶಿಸುತ್ತಾನೆ. ಸೂರ್ಯ ಮತ್ತು ಬುಧನ ಸಂಗಮದಿಂದ ಬುಧಾದಿತ್ಯ ರಾಜಯೋಗವು ರೂಪುಗೊಳ್ಳುತ್ತದೆ. ಬಳಿಕ ಜ.15ರಂದು ಸೂರ್ಯನು ಮಕರ ರಾಶಿ ಪ್ರವೇಶಿಸಲಿದ್ದು, ಜ.18ರಂದು ಶುಕ್ರನು ಧನುರಾಶಿಗೆ ಪ್ರವೇಶಿಸಲಿದೆ. ಇದು ಧನು ರಾಶಿಯಲ್ಲಿ ಮಂಗಳ ಮತ್ತು ಶುಕ್ರನ ಸಂಯೋಗವನ್ನು ರೂಪಿಸುತ್ತದೆ. ಅಪಾರ ಸುಖ-ಸಂಪತ್ತು, ಗೌರವ-ಪ್ರತಿಷ್ಠೆಯನ್ನು ಪಡೆಯಲು ಇದು ಶುಭದಾಯಕವೆಂದು ಪರಿಗಣಿಸಲಾಗಿದೆ. ಜನವರಿ ತಿಂಗಳಿನಲ್ಲಿ ಯಾವ ರಾಶಿಯವರ ಅದೃಷ್ಟ ಬದಲಾಗಿದೆ ಅನ್ನೋದರ ಬಗ್ಗೆ ತಿಳಿಯಿರಿ.

ಮೇಷ ರಾಶಿ: ಜನವರಿಯಲ್ಲಿ ಗ್ರಹಗಳ ಸಂಚಾರದಿಂದ ಹೊಸ ವರ್ಷವು ಮೇಷ ರಾಶಿಯವರಿಗೆ ಅದೃಷ್ಟ ತರಲಿದೆ. ನಿಮ್ಮ ವೃತ್ತಿಜೀವನದಲ್ಲಿ ಬಯಸಿದ ಯಶಸ್ಸನ್ನು ಪಡೆಯುತ್ತೀರಿ. ವೈವಾಹಿಕ ಜೀವನ ಸಂತೋಷದಿಂದ ಕೂಡಿರುತ್ತದೆ. ಹಣಕಾಸು ಪರಿಸ್ಥಿತಿ ಸುಧಾರಿಸುತ್ತದೆ. ಹೊಸ ಆದಾಯದ ಮೂಲಗಳಿಂದ ಪ್ರಯೋಜನ ಪಡೆಯುತ್ತೀರಿ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ.

ವೃಷಭ ರಾಶಿ: ಜನವರಿಯಲ್ಲಿ ಲಕ್ಷ್ಮಿ ನಾರಾಯಣ ಯೋಗದ ಶುಭ ಪರಿಣಾಮಗಳಿಂದ ವೃಷಭ ರಾಶಿಯವರು ಆದಾಯ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಾಣುವರು. ನೀವು ಹೊಸ ವರ್ಷದಲ್ಲಿ ಮನೆ ಅಥವಾ ವಾಹನ ಖರೀದಿಸಲಿದ್ದೀರಿ. ನಿಮಗೆ ಬಡ್ತಿ ಅಥವಾ ಒಳ್ಳೆಯ ಸುದ್ದಿ ಸಿಗಲಿದೆ. ಮದುವೆಯಾದವರಿಗೆ ಮಕ್ಕಳಾಗಬಹುದು, ಒಂಟಿಯಾಗಿರುವವರಿಗೆ ಜೀವನ ಸಂಗಾತಿ ಸಿಗಬಹುದು. ಒಳ್ಳೆಯ ಆಲೋಚನೆಗಳು ನಿಮ್ಮ ಮನಸ್ಸಿಗೆ ಬರುತ್ತವೆ. ಹಣಕ್ಕೆ ಸಂಬಂಧಿಸಿದ ಯೋಜನೆಗಳಲ್ಲಿ ಲಾಭ ದೊರೆಯಲಿದೆ.

ಇದನ್ನೂ ಓದಿ: ಇದು ವಿಶ್ವದ ಅತ್ಯಂತ ದುಬಾರಿ ಮಸಾಲೆ..! ಇದನ್ನು ಮನೆಯಲ್ಲೇ ಬೆಳೆಯುವುದೇಗೆ?

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಜನವರಿಯಲ್ಲಿ ಆದಾಯ ಹೆಚ್ಚಾಗಲಿದೆ. ನಿಮ್ಮ ಜೀವನದಲ್ಲಿ ಯಶಸ್ಸಿನ ಸಾಧ್ಯತೆಗಳು ಹೆಚ್ಚಾಗುತ್ತವೆ. ನಿಮ್ಮ ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಆದಾಯ ಹೆಚ್ಚಿಸುವ ಹೊಸ ಮಾರ್ಗಗಳು ಅಭಿವೃದ್ಧಿಗೊಳ್ಳಲಿವೆ. ನೀವು ವ್ಯವಹಾರ ಮುನ್ನಡೆಸುವಲ್ಲಿ ಯಶಸ್ವಿಯಾಗುತ್ತೀರಿ. ಪ್ರತಿ ಕೆಲಸದಲ್ಲಿ ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಸೂರ್ಯ, ಬುಧ, ಶುಕ್ರನ ಸ್ಥಾನ ಬದಲಾವಣೆಯಿಂದ ಸಂಪತ್ತು ವೃದ್ಧಿಯಾಗುತ್ತದೆ. ವೃತ್ತಿ ಜೀವನದಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿದೆ. ನಿಮ್ಮ ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ ಮತ್ತು ಸಂಬಂಧಗಳು ಸುಧಾರಿಸುತ್ತವೆ. ಉದ್ಯೋಗ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಪಡೆಯುತ್ತೀರಿ. ಸ್ವೀಕರಿಸುತ್ತೀರಿ.

ಮಕರ ರಾಶಿ: ಜನವರಿಯಲ್ಲಿ ಗ್ರಹಗಳ ಸ್ಥಾನ ಬದಲಾವಣೆಯು ಮಕರ ರಾಶಿಯವರಿಗೆ ವಿಶೇಷ ಪ್ರಯೋಜನ ದೊರೆಯಲಿದೆ. ಬಹುಕಾಲ ಬಾಕಿಯಿರುವ ನಿಮ್ಮ ಕೆಲಸಗಳು ಪೂರ್ಣಗೊಳ್ಳಲಿವೆ. ಆದಾಯ ಹೆಚ್ಚಲಿದ್ದು, ಹೂಡಿಕೆಗಳು ಹಣಕಾಸಿನ ಆದಾಯ ನೀಡುತ್ತವೆ. ವಿದೇಶಕ್ಕೆ ಹೋಗಬಯಸುವವರಿಗೆ ಜನವರಿ ತಿಂಗಳು ಅನುಕೂಲಕರವಾಗಿದೆ. ಸಂಗಾತಿಯೊಂದಿಗೆ ಸಂತೋಷವಾಗಿರುತ್ತೀರಿ ಮತ್ತು ಆರೋಗ್ಯ ಸಮಸ್ಯೆಗಳಿಂದ ಮುಕ್ತಿ.

ಇದನ್ನೂ ಓದಿ: New Year Gift: ಹೊಸ ವರ್ಷದ ಗಿಫ್ಟ್ ನೀಡುವಾಗ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News