ನವದೆಹಲಿ: ಆರ್ಥಿಕ ಸುಧಾರಣೆಯ ಹರಿಕಾರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನಲೆಯಲ್ಲಿ ಹಲವಾರು ಗಣ್ಯರು ಅವರ ಜೊತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ, ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬಾರು ಅವರು ಮಾಜಿ ಪ್ರಧಾನಿ ಮಾನಸಿಂಗ್ ಅವರನ್ನು ಸ್ಮರಿಸುತ್ತಾ ಮನಮೋಹನ್ ಸಿಂಗ್ ಅವರಿಗೆ ಹಿಂದಿ ಓದುವುದು ಗೊತ್ತಿರಲಿಲ್ಲ.ಅವರ ಭಾಷಣಗಳನ್ನು ಗುರುಮುಖಿ ಅಥವಾ ಉರ್ದು ಭಾಷೆಯಲ್ಲಿ ಬರೆಯಲಾಗುತ್ತಿತ್ತು ಎಂದು ಹೇಳಿದ್ದಾರೆ.
2014 ರಲ್ಲಿ ಸಂಜಯ್ ಬಾರು ಅವರು ತಮ್ಮ ಪುಸ್ತಕದಲ್ಲಿ ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಹಿಂದಿ ಓದಲು ಬರುತ್ತಿರಲಿಲ್ಲ. ಅವರ ಎಲ್ಲಾ ಭಾಷಣಗಳನ್ನು ಉರ್ದುವಿನಲ್ಲಿ ಬರೆಯಲಾಗುತ್ತಿತ್ತು. ಮನಮೋಹನ್ ಸಿಂಗ್ ಹಿಂದಿಯಲ್ಲಿ ಮಾತನಾಡುತ್ತಿದ್ದರೂ ಅವರಿಗೆ ಹಿಂದಿಯಲ್ಲಿ ಓದಲು ಬರುತ್ತಿರಲಿಲ್ಲ, ಆದರೆ ಅವರಿಗೆ ಉರ್ದು ಭಾಷೆಯ ಮೇಲೆ ಹೆಚ್ಚಿನ ಹಿಡಿತವಿತ್ತು' ಎಂದು ಅವರು ಉಲ್ಲೇಖಿಸಿದ್ದಾರೆ.
Dr. #ManmohanSingh is no more. While he will be remembered for many things, one interesting fact about him was that he could not read the Devnagari script. Even the speeches that we have heard him deliver in Hindi were all written in #Urdu /Nastaliq script. Alvida sir!
اردو pic.twitter.com/nQK0JURQL5
— Mahtab महताब مہتاب (@MahtabNama) December 26, 2024
ಅವಿಭಜಿತ ಭಾರತದ (ಈಗಿನ ಪಾಕಿಸ್ತಾನ) ಪಂಜಾಬ್ ಪ್ರಾಂತ್ಯದ ಗಾಹ್ ಗ್ರಾಮದಲ್ಲಿ 1932 ರ ಸೆಪ್ಟೆಂಬರ್ 26 ರಂದು ಗುರುಮುಖ್ ಸಿಂಗ್ ಮತ್ತು ಅಮೃತ್ ಕೌರ್ ದಂಪತಿಗೆ ಜನಿಸಿದ ಮನಮೋಹನ್ ಸಿಂಗ್, 1948 ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ ಮೆಟ್ರಿಕ್ಯುಲೇಷನ್ ಪರೀಕ್ಷೆಯನ್ನು ಪೂರ್ಣಗೊಳಿಸಿದರು. ಅವರ ಶೈಕ್ಷಣಿಕ ವೃತ್ತಿಜೀವನವು ಅವರನ್ನು ಪಂಜಾಬ್‌ನಿಂದ ಯುಕೆಯ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಕರೆದೊಯ್ದಿತು, ಅಲ್ಲಿ ಅವರು 1957 ರಲ್ಲಿ ಅರ್ಥಶಾಸ್ತ್ರದಲ್ಲಿ ಪ್ರಥಮ ದರ್ಜೆ ಗೌರವ ಪದವಿಯನ್ನು ಪಡೆದರು. ಇದರ ನಂತರ, ಮನಮೋಹನ್ ಸಿಂಗ್ 1962 ರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ನಫೀಲ್ಡ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಡಿ.ಫಿಲ್ ಪದವಿ ಪಡೆದರು.
ಅವರು ಹಣಕಾಸು ಸಚಿವಾಲಯದ ಕಾರ್ಯದರ್ಶಿ, ಯೋಜನಾ ಆಯೋಗದ ಉಪಾಧ್ಯಕ್ಷರು, ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್, ಪ್ರಧಾನ ಮಂತ್ರಿಯ ಸಲಹೆಗಾರ ಮತ್ತು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಮನಮೋಹನ್ ಸಿಂಗ್ ಅವರ ರಾಜಕೀಯ ಜೀವನ:
ಅವರ ರಾಜಕೀಯ ಜೀವನವು 1991 ರಲ್ಲಿ ರಾಜ್ಯಸಭೆಯ ಸದಸ್ಯರಾಗುವ ಮೂಲಕ ಪ್ರಾರಂಭವಾಯಿತು, ಮುಂದೆ ಅವರು ರಾಜ್ಯಸಭೆಯಲ್ಲಿ ಅವರು 1998 ಮತ್ತು 2004 ರ ನಡುವೆ ವಿರೋಧ ಪಕ್ಷದ ನಾಯಕರಾಗಿದ್ದರು.ತದನಂತರ ಅವರು 2004 ರಿಂದ 2014 ರವರೆಗೆ ಎರಡು ಅವಧಿಗಳ ವರೆಗೆ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದರು.