ಧನ ಲಾಭಕ್ಕಾಗಿ ಯೋಗಿನಿ ಏಕಾದಶಿಯಂದು ನಿಮ್ಮ ರಾಶಿಗನುಸಾರವಾಗಿ ತಪ್ಪದೇ ಈ ಕೆಲಸ ಮಾಡಿ

Yogini Ekadashi 2023: ಹಿಂದೂ ಧರ್ಮದಲ್ಲಿ ಏಕಾದಶಿಗೆ, ಏಕಾದಶಿಯ ಉಪವಾಸಕ್ಕೆ ಬಹಳ ಮಹತ್ವವಿದೆ. ಪ್ರತಿ ವರ್ಷ ಆಷಾಢ ಮಾಸದದಲ್ಲಿ ಯೋಗಿನಿ ಏಕಾದಶಿಯನ್ನು ಆಚರಿಸಲಾಗುತ್ತದೆ. ಈ ದಿನ ಉಪವಾಸ ಆಚರಣೆಯಿಂದ ವಿಶೇಷ ಫಲ ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ ಆಗಿದೆ. 

Written by - Yashaswini V | Last Updated : Jun 12, 2023, 05:12 PM IST
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯೋಗಿನಿ ಏಕಾದಶಿಯ ದಿನ ನಿಯಮಾನುಸಾರ ವ್ರತಾಚರಣೆ ಆಚರಿಸುವುದರಿಂದ ಒಳ್ಳೆಯ ಫಲಗಳು ಪ್ರಾಪ್ತಿಯಾಗಲಿವೆ.
  • ಈ ದಿನ ರಾಶಿಗೆ ಅನುಸಾರವಾಗಿ ಕೆಲವು ಕೆಲಸಗಳನ್ನು ಮಾಡುವುದರಿಂದ ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ
  • ರಾಶಿಚಕ್ರದ ಪ್ರಕಾರ ಮಂತ್ರಗಳನ್ನು ಪಠಿಸುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ.
ಧನ ಲಾಭಕ್ಕಾಗಿ ಯೋಗಿನಿ ಏಕಾದಶಿಯಂದು ನಿಮ್ಮ ರಾಶಿಗನುಸಾರವಾಗಿ ತಪ್ಪದೇ ಈ ಕೆಲಸ ಮಾಡಿ  title=

Yogini Ekadashi 2023 Date: ಹಿಂದೂ ಧರ್ಮದಲ್ಲಿ ಉಪವಾಸ, ಏಕಾದಶಿಗೆ ವಿಶೇಷ ಪ್ರಾಮುಖ್ಯತೆ ಇದೆ. ಏಕಾದಶಿ ಉಪವಾಸ ಆಚರಣೆಯಿಂದ ಭಗವಾನ್ ವಿಷ್ಣುವಿನ ಜೊತೆಗೆ ತಾಯಿ ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಬಹುದು ಎಂಬುದು ನಂಬಿಕೆ ಆಗಿದೆ. ಅದರಲ್ಲೂ ಕೆಲವು ಏಕಾದಶಿಗಳಿಗೆ ಹೆಚ್ಚಿನ ಮಹತ್ವವಿದೆ. ಅವುಗಳಲ್ಲಿ ಯೋಗಿನಿ ಏಕಾದಶಿಯೂ ಒಂದು. 

ಹಿಂದೂ ಕ್ಯಾಲೆಂಡರ್ ಪ್ರಕಾರ, ಆಷಾಢ ಮಾಸದ ಕೃಷ್ಣ ಪಕ್ಷದ ಏಕಾದಶಿ ದಿನವನ್ನು ಯೋಗಿನಿ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನ ಉಪವಾಸ ವ್ರತಾಚರಣೆ ಆಚರಿಸುವುದರಿಂದ ಅಂತಹ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸಲಿದೆ. ಸಂಪತ್ತಿನ ದೇವತೆಯಾದ ತಾಯಿ ಮಹಾ ಲಕ್ಷ್ಮಿಯ ಅನುಗ್ರಹದಿಂದ, ಭಾರೀ ಸಂಪತ್ತು ಪ್ರಾಪ್ತಿಯಾಗಲಿದೆ ಎಂದು ನಂಬಲಾಗಿದೆ. 

ಇದನ್ನೂ ಓದಿ- Rahu Gochar 2023: ಮೀನ ರಾಶಿಯಲ್ಲಿ ರಾಹು- ಈ ರಾಶಿಯವರಿಗೆ ಬಂಪರ್ ಪ್ರಯೋಜನ

ಯೋಗಿನಿ ಏಕಾದಶಿ ಉಪವಾಸ ವ್ರತಾಚರಣೆ: 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯೋಗಿನಿ ಏಕಾದಶಿಯ ದಿನ ನಿಯಮಾನುಸಾರ ವ್ರತಾಚರಣೆ ಆಚರಿಸುವುದರಿಂದ ಒಳ್ಳೆಯ ಫಲಗಳು ಪ್ರಾಪ್ತಿಯಾಗಲಿವೆ. ಈ ದಿನ ರಾಶಿಗೆ ಅನುಸಾರವಾಗಿ ಕೆಲವು ಕೆಲಸಗಳನ್ನು ಮಾಡುವುದರಿಂದ, ರಾಶಿಚಕ್ರದ ಪ್ರಕಾರ ಮಂತ್ರಗಳನ್ನು ಪಠಿಸುವುದರಿಂದ ಜೀವನದಲ್ಲಿ  ತಲೆದೂರಿರುವ ನಾನಾ ಬಗೆಯ ಸಮಸ್ಯೆಗಳಿಂದ ಮುಕ್ತಿ ದೊರೆತು, ಸಂಪತ್ತು ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ. 

ಇದನ್ನೂ ಓದಿ- ನಾಲ್ಕು ರಾಶಿಯಲ್ಲಿ ರಾಜಯೋಗ ! ಇನ್ನು ಇಟ್ಟ ಹೆಜ್ಜೆಯಲ್ಲಿ ಸೋಲಿಲ್ಲ, ಕೈ ತುಂಬಾ ಸದ್ದು ಮಾಡುವುದು ಕಾಂಚಾಣ

ಸಂಪತ್ತಿನ ದೇವತೆಯ ಆಶೀರ್ವಾದಕ್ಕಾಗಿ ಯೋಗಿನಿ ಏಕಾದಶಿಯ ದಿನ ನಿಮ್ಮ ರಾಶಿ ಪ್ರಕಾರ ಈ ಕೆಲಸ ಮಾಡಿ:
ಮೇಷ ರಾಶಿ:  

ಯೋಗಿನಿ ಏಕಾದಶಿಯ ದಿನದಂದು ಮೇಷ ರಾಶಿಯ ಜನರು   'ಓಂ ಗೋವಿಂದಾಯ ನಮಃ' ಮತ್ತು 'ಓಂ ವಾಮನಾಯ ನಮಃ' ಮಂತ್ರಗಳನ್ನು ಪಠಿಸಬೇಕು. 

ವೃಷಭ ರಾಶಿ:  
ಯೋಗಿನಿ ಏಕಾದಶಿಯ ದಿನ, ಈ ರಾಶಿಯ ಜನರು 'ಓಂ ವಾಮನಾಯ ನಮಃ' ಮತ್ತು 'ಓಂ ಪದ್ಮನಾಭಾಯ ನಮಃ' ಮಂತ್ರಗಳನ್ನು ಜಪಿಸಿ. 

ಮಿಥುನ ರಾಶಿ:   
ಯೋಗಿನಿ ಏಕಾದಶಿಯಂದು ಮಿಥುನ ರಾಶಿಯವರು 'ಓಂ ಮಾಧವಾಯ ನಮಃ' ಮತ್ತು 'ಓಂ ನಾರಾಯಣಾಯ ನಮಃ' ಮಂತ್ರವನ್ನು ಪಠಿಸುವುದು ಒಳ್ಳೆಯದು. 

ಕರ್ಕಾಟಕ ರಾಶಿ: 
ಆಷಾಢ ಮಾಸದ ಕೃಷ್ಣ ಪಕ್ಷದ ಏಕಾದಶಿ ದಿನ ಕರ್ಕಾಟಕ ರಾಶಿಯ ಜನರು 'ಓಂ ಕೇಶವಾಯ ನಮಃ' ಮತ್ತು 'ಓಂ ಶ್ರೀಧರಾಯ ನಮಃ' ಎಂಬ ಮಂತ್ರವನ್ನು ಪಠಿಸುವುದರಿಂದ ವಿಶೇಷ ಫಲ ಪ್ರಾಪ್ತಿ. 

ಇದನ್ನೂ ಓದಿ- 

ಸಿಂಹ ರಾಶಿ:   
ಭಗವಾನ್ ಮಹಾವಿಷ್ಣುವಿನ ಆಶೀರ್ವಾದಕ್ಕಾಗಿ ಸಿಂಹ ರಾಶಿಯವರು 'ಓಂ ಪದ್ಮನಾಭಾಯ ನಮಃ' ಮತ್ತು 'ಓಂ ಹೃಷಿಕೇಶಾಯ ನಮಃ' ಎಂಬ ಮಂತ್ರಗಳನ್ನು ಜಪಿಸಬೇಕು. 

ಕನ್ಯಾ ರಾಶಿ: 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯೋಗಿನಿ ಏಕಾದಶಿಯಂದು ಕನ್ಯಾ ರಾಶಿಯ ಜನರು 'ಓಂ ಹೃಷಿಕೇಶಾಯ ನಮಃ' ಮತ್ತು 'ಓಂ ಶ್ರೀಧರಾಯ ನಮಃ' ಎಂಬ ಮಂತ್ರವನ್ನು ಜಪಿಸುವುದರಿಂದ ವಿಶೇಷ ಪ್ರಯೋಜನ ಲಭ್ಯವಾಗಲಿದೆ. 

ತುಲಾ ರಾಶಿ:  
ಯೋಗಿನಿ ಏಕಾದಶಿಯ ದಿನದಂದು ತುಲಾ ರಾಶಿಯವರು "ಓಂ ತ್ರಿವಿಕರ್ಮಾಯ ನಮಃ" ಮತ್ತು 'ಓಂ ಮಧುಸೂದನಾಯ ನಮಃ' ಪಠಣವು ವಿಶೇಷವಾಗಿ ಫಲ ನೀಡುತ್ತದೆ ಎಂದು ನಂಬಲಾಗಿದೆ. 

ವೃಶ್ಚಿಕ ರಾಶಿ:   
ವೈದಿಕ ಜ್ಯೋತಿಷ್ಯದ ಪ್ರಕಾರ, ಸಂಪತ್ತು ವೃದ್ಧಿಗಾಗಿ ವೃಶ್ಚಿಕ ರಾಶಿಯವರು ಯೋಗಿನಿ ಏಕಾದಶಿಯ ದಿನದಂದು  'ಓಂ ಕೇಶವಾಯ ನಮಃ' ಮತ್ತು 'ಓಂ ಶ್ರೀಧರಾಯ ನಮಃ' ಎಂಬ ಮಂತ್ರವನ್ನು ಪಠಿಸಿ. 

ಇದನ್ನೂ ಓದಿ- 

ಧನು ರಾಶಿ:  
ಯೋಗಿನಿ ಏಕಾದಶಿ ದಿನಾಂಕದಂದು ಧನು ರಾಶಿಯವರು  'ಓಂ ಮಾಧವಾಯ ನಮಃ' ಮತ್ತು 'ಓಂ ನಾರಾಯಣಾಯ ನಮಃ' ಮಂತ್ರಗಳನ್ನು ಪಠಿಸುವುದರಿಂದ ಮಂಗಳಕರ ಫಲಗಳು ಪ್ರಾಪ್ತಿ. 

ಮಕರ ರಾಶಿ:  
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯೋಗಿನಿ ಏಕಾದಶಿಯ ದಿನದಂದು ಮಕರ ರಾಶಿಯವರು  'ಓಂ ಪದ್ಮನಾಭಾಯ ನಮಃ' ಮತ್ತು 'ಓಂ ಮಧುಸೂದನಾಯ ನಮಃ' ಎಂಬ ಮಂತ್ರವನ್ನು ಜಪಿಸುವುದರಿಂದ ಜೀವನದಲ್ಲಿ ಗ್ತಲೆದೂರಿರುವ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ. 

ಕುಂಭ ರಾಶಿ:  
ಯೋಗಿನಿ ಏಕಾದಶಿಯ ದಿನದಂದು ಕುಂಭ ರಾಶಿಯವರು  'ಓಂ ಹೃಷೀಕೇಶಾಯ ನಮಃ' ಮತ್ತು 'ಓಂ ಶ್ರೀಧರಾಯ ನಮಃ' ಈ ಮಂತ್ರಗಳನ್ನು ಪಠಿಸುವುದರಿಂದ ಒಳ್ಳೆಯ ಫಲಗಳನ್ನು ಪಡೆಯುತ್ತಾರೆ. 

ಮೀನ ರಾಶಿ:  
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೀನ ರಾಶಿಯವರು ಯೋಗಿನಿ ಏಕಾದಶಿಯ ದಿನದಂದು 'ಓಂ ಮಾಧವಾಯ ನಮಃ' ಮತ್ತು 'ಓಂ ನಾರಾಯಣಾಯ ನಮಃ' ಮಂತ್ರವನ್ನು ಪಠಿಸುವುದರಿಂದ ಅದೃಷ್ಟವೇ ಬದಲಾಗಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News