ಇನ್ನೊಂದು ವಾರದಲ್ಲಿ ಈ ರಾಶಿಯವರ ಬದುಕು ಬಗಾರ.! ಕೈ ಹಿಡಿದು ಮುನ್ನಡೆಸುವ ಅಂಗಾರಕ

ಮಂಗಳನನ್ನು ಧೈರ್ಯ ಮತ್ತು ಶೌರ್ಯದ ಸಂಕೇತ ಎಂದು ಕರೆಯಲಾಗುತ್ತದೆ.  ಇನ್ನು 11 ದಿನಗಳಲ್ಲಿ ಮಂಗಳ ಗ್ರಹ ವೃಷಭ ರಾಶಿಯನ್ನು ಪ್ರವೇಶಿಸಲಿದೆ. ಇಲ್ಲಿಯವರೆಗೆ ಹಿಮ್ಮುಖ ಚಲನೆಯಲ್ಲಿದ್ದ ಮಂಗಳ ಇದೀಗ ನೇರ ಚಲನೆಗೆ ಆರಂಭಿಸಲಿದ್ದಾನೆ. 

ಬೆಂಗಳೂರು : ಮಂಗಳನನ್ನು ಧೈರ್ಯ ಮತ್ತು ಶೌರ್ಯದ ಸಂಕೇತ ಎಂದು ಕರೆಯಲಾಗುತ್ತದೆ.  ಇನ್ನು 11 ದಿನಗಳಲ್ಲಿ ಮಂಗಳ ಗ್ರಹ ವೃಷಭ ರಾಶಿಯನ್ನು ಪ್ರವೇಶಿಸಲಿದೆ. ಇಲ್ಲಿಯವರೆಗೆ ಹಿಮ್ಮುಖ ಚಲನೆಯಲ್ಲಿದ್ದ ಮಂಗಳ ಇದೀಗ ನೇರ ಚಲನೆಗೆ ಆರಂಭಿಸಲಿದ್ದಾನೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G

Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /3

ಮೀನ ರಾಶಿ : ವೃಷಭ ರಾಶಿಯ ಮೂರನೇ ಮನೆಯಲ್ಲಿ ಮಂಗಳ ನೇರ ಚಲನೆಗೆ ಮರಳಲಿದ್ದಾನೆ. ಈ ಮನೆಯನ್ನು ಧೈರ್ಯ ಮತ್ತು ಶೌರ್ಯ, ಸಹೋದರ ಮತ್ತು ಸಹೋದರಿಯ ಸ್ಥಾನ ಎಂದು ಕರೆಯಲಾಗುತ್ತದೆ.  ಮಂಗಳ ನೇರ ಚಲನೆಗೆ ಮರಳುತ್ತಿದ್ದಂತೆಯೇ  ವೃಷಭ ರಾಶಿಯವರ ಆತ್ಮವಿಶ್ವಾಸ  ಹೆಚ್ಚಾಗುತ್ತದೆ. ಈ ಹೊತ್ತಿನಲ್ಲಿ ಈ ರಾಶಿಯವರು ಕೈ ಹಾಕುವ ಎಲ್ಲಾ ಕೆಲಸ ಸಫಲವಾಗುತ್ತದೆ. ಯಾವುದೇ ಹೊಸ ಕೆಲಸ ಆರಬಿಸಲು ಇದು ಸೂಕ್ತ ಸಮಯ. ನಿಮ್ಮ ಪಾಲಿಗೆ ಅದೃಷ್ಟ ಖುಲಾಯಿಸಲಿದೆ.   

2 /3

ಕಟಕ ರಾಶಿ : ಈ ರಾಶಿಯ 11 ನೇ ಮನೆಯಲ್ಲಿ ಮಂಗಳ ನೇರ ನಡೆಗೆ ಮರಳಲಿದ್ದಾನೆ. ಇದನ್ನು ಆದಾಯ ಮತ್ತು ಲಾಭದ ಸ್ಥಳ ಎಂದು ಹೇಳಲಾಗುತ್ತದೆ.  ಮಂಗಳ ತನ್ನ ರಾಶಿ ಪರಿವರ್ತಿಸಿ, ಪಥ ಬದಲಿಸುತ್ತಿರುವಂತೆಯೇ,  ಕಟಕ ರಾಶಿಯವರ ಜೀವನದಲ್ಲಿ ಹಣ ದ್ವಿಗುಣವಾಗುತ್ತದೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆ ಹೆಚ್ಚಿದೆ.  ಸ್ವಲ್ಪ ಶ್ರಮ ವಹಿಸಿದರೂ ವಿದ್ಯಾರ್ಥಿಗಳು ಕೂಡಾ ಯಶಸ್ಸು ಸಾಧಿಸುವುದರಲ್ಲಿಎರಡು ಮಾತಿಲ್ಲ.   

3 /3

ಸಿಂಹ ರಾಶಿ : ಈ ರಾಶಿಚಕ್ರದ ಹತ್ತನೇ ಮನೆಯಲ್ಲಿ ಮಂಗಳನ ಪಥ ಬದಲಾಗಲಿದೆ. ಇದನ್ನು ಮನೆ ಮತ್ತು ಕೆಲಸದ ಸ್ಥಳವೆಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಹೊಸ ಉದ್ಯೋಗ ಪ್ರಸ್ತಾಪ ಬರಬಹುದು.  ಒಟ್ಟಾರೆಯಾಗಿ ಈ ರಾಶಿಯವರ ಪಾಲಿಗೂ ಇದು ಒಳ್ಳೆಯ ಸಮಯವಾಗಿರಲಿದೆ. ಆರ್ಥಿಕವಾಗಿ ಲಾಭದಾಯಕವಾಗಿರುತ್ತದೆ. (ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)