Mangal Transit 2023: ಜ್ಯೋತಿಷ್ಯದಲ್ಲಿ ಮಂಗಳ ಗ್ರಹಕ್ಕೆ ಬಹಳ ಮಹತ್ವವಿದೆ ಎಂದು ಹೇಳಲಾಗಿದೆ. ಮಂಗಳವನ್ನು ಇಚ್ಛಾಶಕ್ತಿ ಮತ್ತು ಶಕ್ತಿಯ ಗ್ರಹವೆಂದು ಪರಿಗಣಿಸಲಾಗಿದೆ. ಒಬ್ಬ ವ್ಯಕ್ತಿಯ ಮಂಗಳವು ಬಲವಾಗಿದ್ದರೆ ಅವನು ತುಂಬಾ ಶಕ್ತಿಯುತನಾಗಿರುತ್ತಾನೆ ಮತ್ತು ಶುಭ ಫಲಿತಾಂಶಗಳನ್ನು ಪಡೆಯುತ್ತಾನೆ. ಮಾರ್ಗಿ ಮಂಗಳವು ಯಾರ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ತಿಳಿಯೋಣ.
Mangala Margi Effect: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳ ಗ್ರಹದ ನೇರ ಸಂಚಾರವು ಮೂರು ರಾಶಿಯವರಿಗೆ ಭಾರೀ ಅದೃಷ್ಟವನ್ನು ಕರುಣಿಸಲಿದೆ. ಈ ಸಮಯದಲ್ಲಿ ಈ ಮೂರು ರಾಶಿಯವರು ಅಪಾರ ಧನ ಸಂಪತ್ತಿನ ಒಡೆಯರಾಗುವುದು ಮಾತ್ರವಲ್ಲ, ಅವರು ಕೈ ಹಾಕಿದ ಪ್ರತಿ ಕೆಲಸದಲ್ಲಿಯೂ ಯಶಸ್ಸನ್ನು ಗಳಿಸುತ್ತಾರೆ ಎಂದು ಹೇಳಲಾಗುತ್ತಿದೆ.
ಮಂಗಳನನ್ನು ಧೈರ್ಯ ಮತ್ತು ಶೌರ್ಯದ ಸಂಕೇತ ಎಂದು ಕರೆಯಲಾಗುತ್ತದೆ. ಇನ್ನು 11 ದಿನಗಳಲ್ಲಿ ಮಂಗಳ ಗ್ರಹ ವೃಷಭ ರಾಶಿಯನ್ನು ಪ್ರವೇಶಿಸಲಿದೆ. ಇಲ್ಲಿಯವರೆಗೆ ಹಿಮ್ಮುಖ ಚಲನೆಯಲ್ಲಿದ್ದ ಮಂಗಳ ಇದೀಗ ನೇರ ಚಲನೆಗೆ ಆರಂಭಿಸಲಿದ್ದಾನೆ.
ಇನ್ನು 11 ದಿನಗಳಲ್ಲಿ ಅಂದರೆ ಜನವರಿ 13 ರಂದು, ಮಂಗಳ ಗ್ರಹ ವೃಷಭ ರಾಶಿಯನ್ನು ಪ್ರವೇಶಿಸಲಿದೆ. ಮಂಗಳ ಇದೀಗ ನೇರ ಚಲನೆಗೆ ಹಿಂದಿರುಗುತ್ತಿರುವುದು ಮೂರು ರಾಶಿಯವರ ಜೀವನವನ್ನೇ ಮಂಗಳಮಯವನ್ನಾಗಿಸಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.