ಎದ್ದು ನಿಂತಾಗ ಇದ್ದಕ್ಕಿದ್ದಂತೆ ತಲೆ ಸುತ್ತುವುದು ಈ ಕಾಯಿಲೆಗಳ ಲಕ್ಷಣ ಗಳಾಗಿರಬಹುದು!

ಜೀವನಶೈಲಿಯಲ್ಲಿ ನಿರಂತರ ಬದಲಾವಣೆ ಪ್ರತಿಯೊಬ್ಬರ ಆರೋಗ್ಯದ ಮೇಲೆ  ಪರಿಣಾಮ ಬೀರುತ್ತದೆ. ಸಾಕಷ್ಟು ಪೋಷಣೆ ಮತ್ತು ವಿಶ್ರಾಂತಿ ಪಡೆಯದ ಕಾರಣ, ದೇಹವು ದುರ್ಬಲಗೊಳ್ಳುತ್ತದೆ. ಆಯಾಸ ಮತ್ತು ತಲೆತಸುತ್ತುವ  ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.  ಕೆಲವರು ದೀರ್ಘಕಾಲ ಕುಳಿತುಕೊಂಡ ಬಳಿಕ ಒಮ್ಮೆಲೇ ಎದ್ದು ನಿಂತಾಗ ಅಥವಾ ಮಲಗಿದ ನಂತರ ನಿಂತಾಗ, ಇದ್ದಕ್ಕಿದ್ದಂತೆ  ತಲೆ ತಿರುಗಲು ಪ್ರಾರಂಭಿಸುತ್ತದೆ. ಕೆಲವರು ಇದನ್ನು ಸಾಮಾನ್ಯ ದೈಹಿಕ ದೌರ್ಬಲ್ಯವೆಂದು ನಿರ್ಲಕ್ಷಿಸುತ್ತಾರೆ, ಆದರೆ ಇದು ಆರೋಗ್ಯ ಸಮಸ್ಯೆಗಳ ಲಕ್ಷಣಗಳಾಗಿರಬಹುದು.

ಬೆಂಗಳೂರು : ಜೀವನಶೈಲಿಯಲ್ಲಿ ನಿರಂತರ ಬದಲಾವಣೆ ಪ್ರತಿಯೊಬ್ಬರ ಆರೋಗ್ಯದ ಮೇಲೆ  ಪರಿಣಾಮ ಬೀರುತ್ತದೆ. ಸಾಕಷ್ಟು ಪೋಷಣೆ ಮತ್ತು ವಿಶ್ರಾಂತಿ ಪಡೆಯದ ಕಾರಣ, ದೇಹವು ದುರ್ಬಲಗೊಳ್ಳುತ್ತದೆ. ಆಯಾಸ ಮತ್ತು ತಲೆತಸುತ್ತುವ  ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.  ಕೆಲವರು ದೀರ್ಘಕಾಲ ಕುಳಿತುಕೊಂಡ ಬಳಿಕ ಒಮ್ಮೆಲೇ ಎದ್ದು ನಿಂತಾಗ ಅಥವಾ ಮಲಗಿದ ನಂತರ ನಿಂತಾಗ, ಇದ್ದಕ್ಕಿದ್ದಂತೆ  ತಲೆ ತಿರುಗಲು ಪ್ರಾರಂಭಿಸುತ್ತದೆ. ಕೆಲವರು ಇದನ್ನು ಸಾಮಾನ್ಯ ದೈಹಿಕ ದೌರ್ಬಲ್ಯವೆಂದು ನಿರ್ಲಕ್ಷಿಸುತ್ತಾರೆ, ಆದರೆ ಇದು ಆರೋಗ್ಯ ಸಮಸ್ಯೆಗಳ ಲಕ್ಷಣಗಳಾಗಿರಬಹುದು.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

1 /4

ಕಿವಿಯ ಆಂತರಿಕ ರಚನೆಯಲ್ಲಿ ಯಾವುದೇ ರೀತಿಯ ದೋಷವಿದ್ದಾಗ ತಲೆ ಸುತ್ತುವ ಸಮಸ್ಯೆ ಕಾಣಿಸಿಕೊಳ್ಳಬಹುದು. ಒಳಗಿನ ಕಿವಿಯಲ್ಲಿನ ಸೋಂಕು ತಲೆತಿರುಗುವಿಕೆಗೆ ಕಾರಣವಾಗಬಹುದು.  

2 /4

ತಲೆಗೆ ಆಗುವ ಗಾಯಗಳು ಮಿದುಳಿನ ಸಾಮಾನ್ಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ.  ಹೀಗಾದಾಗ  ಹಠಾತ್ ತಲೆತಿರುಗುವ ಅಪಾಯ ಕಾಡುತ್ತದೆ. 

3 /4

ಮೆದುಳು ಮತ್ತು ನರಮಂಡಲಕ್ಕೆ ಸಂಬಂಧಿಸಿದ ಸಮಸ್ಯೆಗಳು ತಲೆ ಸುತ್ತುವ ಅಪಾಯ ತಂದೊಡ್ಡ ಬಹುದು. ಖಿನ್ನತೆ ಮತ್ತು ಒತ್ತಡದಂತಹ ಮಾನಸಿಕ ಅಸ್ವಸ್ಥತೆಗಳನ್ನು ಹೊಂದಿರುವವರು ಕೂಡಾ ಈ ಸಮಸ್ಯೆಯಿಂದ ಬಳಲುತ್ತಾರೆ.   

4 /4

ಆರ್ಥೋಸ್ಟಾಟಿಕ್ ಹೈಪೊಟೆನ್ಷನ್ ದೀರ್ಘಕಾಲ ಕುಳಿತು ಅಥವಾ ಮಲಗಿದ ನಂತರ ಹಠಾತ್ ತಲೆತಿರುಗುವಿಕೆಗೆ ಮುಖ್ಯ ಕಾರಣವಾಗಬಹುದು. ವ್ಯಕ್ತಿಯ ರಕ್ತದೊತ್ತಡವು ಹಠಾತ್ತಾಗಿ ಇಳಿಯುವ ಕಾಯಿಲೆ ಇದಾಗಿದ್ದು, ತಲೆ ಸುತ್ತು ಕಾಣಿಸಿಕೊಳ್ಳುತ್ತದೆ.