World cup 2023 :ಟೂರ್ನಿಯಲ್ಲಿ ಆಡುತ್ತಿದ್ದ ಸ್ಟಾರ್ ಬ್ಯಾಟ್ಸ್ ಮನ್ ನನ್ನು ಈ ಕಾಯಿಲೆ ಕಾಡುತ್ತಿದೆ. ತಾನು ಈ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಈ ಬ್ಯಾಟ್ಸ್ಮನ್ ಬಹಿರಂಗಪಡಿಸಿದ್ದಾರೆ.
Vertigo: ಭಾರತದಲ್ಲಿ 9.9 ದಶಲಕ್ಷಕ್ಕಿಂತ ಹೆಚ್ಚಿನ ಜನರು ವರ್ಟಿಗೊ ಅನುಭವಿಸುತ್ತಾರೆ . ಬಹುತೇಕ ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ತಲೆಸುತ್ತುವಿಕೆಯನ್ನು ಅನುಭವಿಸಿದರೂ ವರ್ಟಿಗೊ ವಿಭಿನ್ನವಾದುದು. ಇದೊಂದು ಸಮತೋಲನಕ್ಕೆ ಸಂಬಂಧಿಸಿದ ಪರಿಸ್ಥಿತಿಯಾಗಿದ್ದು, ವ್ಯಕ್ತಿಗೆ ಇದ್ದಕ್ಕಿದ್ದಂತೆ ಅಸಹಜ ಭಾವವೇರ್ಪಟ್ಟು, ಇಡೀ ಪ್ರಪಂಚವೇ ಸುತ್ತುತ್ತಿರುವಂತೆ ಭಾಸವಾಗಬಹುದು. ಇದು ಬಹಳ ಆತಂಕಕಾರಿಯಾದುದು ಮತ್ತು ಯಾವುದೇ ಮುನ್ನೆಚ್ಚರಿಕೆ ನೀಡದೆ ಬರುತ್ತದೆಯಾದ್ದರಿಂದ, ಇದನ್ನು ಕೇವಲ ”ಒಂದು ಕ್ಷಣದ ತಲೆಸುತ್ತುವಿಕೆ”ಎಂದು ನಿರ್ಲಕ್ಷಿಸದಿರುವುದು ಬಹಳ ಮುಖ್ಯ.
ಜೀವನಶೈಲಿಯಲ್ಲಿ ನಿರಂತರ ಬದಲಾವಣೆ ಪ್ರತಿಯೊಬ್ಬರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸಾಕಷ್ಟು ಪೋಷಣೆ ಮತ್ತು ವಿಶ್ರಾಂತಿ ಪಡೆಯದ ಕಾರಣ, ದೇಹವು ದುರ್ಬಲಗೊಳ್ಳುತ್ತದೆ. ಆಯಾಸ ಮತ್ತು ತಲೆತಸುತ್ತುವ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೆಲವರು ದೀರ್ಘಕಾಲ ಕುಳಿತುಕೊಂಡ ಬಳಿಕ ಒಮ್ಮೆಲೇ ಎದ್ದು ನಿಂತಾಗ ಅಥವಾ ಮಲಗಿದ ನಂತರ ನಿಂತಾಗ, ಇದ್ದಕ್ಕಿದ್ದಂತೆ ತಲೆ ತಿರುಗಲು ಪ್ರಾರಂಭಿಸುತ್ತದೆ. ಕೆಲವರು ಇದನ್ನು ಸಾಮಾನ್ಯ ದೈಹಿಕ ದೌರ್ಬಲ್ಯವೆಂದು ನಿರ್ಲಕ್ಷಿಸುತ್ತಾರೆ, ಆದರೆ ಇದು ಆರೋಗ್ಯ ಸಮಸ್ಯೆಗಳ ಲಕ್ಷಣಗಳಾಗಿರಬಹುದು.
ಸಾಮಾನ್ಯವಾಗಿ ಕೆಲವರಿಗೆ ಎದ್ದು ನಿಂತಾಗ ಇದ್ದಕ್ಕಿದ್ದಂತೆ ತಲೆಸುತ್ತು ಬರುವುದು, ಇದನ್ನು ಸಾಮಾನ್ಯವಾಗಿ ದೌರ್ಬಲ್ಯ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಕೆಲವೊಮ್ಮೆ ಇದು ಕೆಲವು ಅಪಾಯಕಾರಿ ಕಾಯಿಲೆಯ ಸಂಕೇತವಾಗಿರಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.