ಬೆಂಗಳೂರು : ಶನಿದೇವನ ಆಶೀರ್ವಾದ ಪಡೆಯಲು ಶನಿ ಜಯಂತಿಯನ್ನು ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ. ಈ ದಿನ ನ್ಯಾಯದ ದೇವರಾದ ಶನಿ ದೇವರನ್ನು ಪೂಜಿಸುವುದರಿಂದ ಶನಿಯ ಅಶುಭ ಪರಿಣಾಮಗಳಿಂದ ಪರಿಹಾರ ದೊರೆಯುತ್ತದೆ. ಶನಿಯು ಕರ್ಮಕ್ಕನುಗುಣವಾಗಿ ಫಲವನ್ನು ಕೊಡುವ ದೇವರು. ಯಾರ ಮೇಲೆ ಶನಿಯ ವಕ್ರ ದೃಷ್ಟಿ ಬೀಳುತ್ತದೆಯೋ ಅವರು ಜೀವನದಲ್ಲಿ ಪಡಬಾರದ ಪಾಡು ಪಡಬೇಕಾಗುತ್ತದೆ. ಶನಿಯ ಪ್ರಕೋಪದಿಂದ ಪಾರಾಗಲು ಶನಿ ಜಯಂತಿಯನ್ ದಿನ ಕೆಲವೊಂದು ಪರಿಹಾರ ಕಾರ್ಯಗಳನ್ನು ಮಾಡುವಂತೆ ಸೂಚಿಸಲಾಗುತ್ತದೆ. ಈ ದಿನ ಶನಿ ದೇವರಿಗೆ ಎಣ್ಣೆ, ಕಪ್ಪು ಎಳ್ಳು, ಕಪ್ಪು ಉದ್ದು ಇತ್ಯಾದಿ ವಸ್ತುಗಳನ್ನು ಅರ್ಪಿಸುತ್ತಾರೆ. ಮಾತ್ರವಲ್ಲ ಎಳ್ಳೆಣ್ಣೆಯ ದೀಪವನ್ನು ಬೆಳಗಿಸಲಾಗುತ್ತದೆ.
ಈ ಕ್ರಮಗಳು ಶನಿಯ ಕೋಪದಿಂದ ಪರಿಹಾರವನ್ನು ನೀಡುತ್ತದೆ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಜಯಂತಿಯಂದು ಕೆಲವೊಂದು ಕ್ರಮಗಳನ್ನು ಕೈಗೊಂಡರೆ ಶನಿದೇವನ ಕೋಪದಿಂದ ಮುಕ್ತಿ ಪಡೆಯಬಹುದು. ಈ ಕ್ರಮಗಳು ಭವಿಷ್ಯದಲ್ಲಿ ಎದುರಾಗಬಹುದಾದ ಬಿಕ್ಕಟ್ಟುಗಳನ್ನು ಕೂಡಾ ನಿವಾರಿಸುತ್ತದೆ. ಇದರೊಂದಿಗೆ ವ್ಯಕ್ತಿಯ ಮೇಲೆ ಶನಿಯ ಆಶೀರ್ವಾದ ಕೂಡಾ ಇರುತ್ತದೆ. ಶನಿಯ ಆಶೀರ್ವಾದ ಇದ್ದರೆ, ಜೀವನದಲ್ಲಿ ಪ್ರಗತಿಯಾಗುತ್ತದೆ. ರೋಗ ರುಜಿನಗಳು ನಿವಾರಣೆಯಾಗುತ್ತದೆ. ಜೀವನದಲ್ಲಿ ಸುಖ ಶಾಂತಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಶನಿ ಜಯಂತಿಯ ದಿನ ವಿಧಿವತ್ತಾಗಿ ಶನಿಯನ್ನು ಪೂಜಿಸುವ ಮೂಲಕ ಶನಿ ದೋಷದಿಂದ ಮುಕ್ತಿ ಪಡೆಯಬಹುದು.
ಇದನ್ನೂ ಓದಿ : June Monthly Horoscope: ಈ ರಾಶಿಯವರು ಜೂನ್ ಆರಂಭದಲ್ಲಿ ಘರ್ಷಣೆ ಅನುಭವಿಸಬಹುದು
ಶಮಿ ಎಲೆಗಳ ಅರ್ಪಣೆ : ಶಮಿ ಸಸ್ಯವು ಶನಿ ದೇವರಿಗೆ ತುಂಬಾ ಪ್ರಿಯವಾದದ್ದು. ಶನಿ ದೇ ನಡೆಯುತ್ತಿದ್ದರೆ, ಶಮಿ ವೃಕ್ಷವನ್ನು ನೀರನ್ನು ಅರ್ಪಿಸುಂತೆ ಸೂಚಿಸಲಾಗುತ್ತದೆ. ಅಥವಾ ಮನೆಯಲ್ಲಿ ಶಮಿ ಗಿಡವನ್ನು ನೆಟ್ಟು ಅವನ ಸೇವೆ ಮಾಡಲು ಸಲಹೆ ನೀಡಲಾಗುತ್ತದೆ. ಶನಿ ಜಯಂತಿಯ ದಿನದಂದು ಶನಿ ದೇವರಿಗೆ ಶಮಿ ಎಲೆಗಳನ್ನು ಅರ್ಪಿಸಿದರೆ ಅದೃಷ್ಟ ಒಲಿಯುತ್ತದೆ ಎನ್ನಲಾಗಿದೆ.
ಎಳ್ಳೆಣ್ಣೆ : ಶನಿ ಮತ್ತು ಎಳ್ಳೆಣ್ಣೆಯ ನಡುವಿನ ಸಂಬಂಧ ಎಲ್ಲರಿಗೂ ತಿಳಿದಿದೆ. ಎಳ್ಳೆಣ್ಣೆಯನ್ನು ಮುಖ್ಯವಾಗಿ ಶನಿ ದೇವರ ಪೂಜೆಯಲ್ಲಿ ಬಳಸಲಾಗುತ್ತದೆ. ಶನಿ ಜಯಂತಿಯ ದಿನದಂದು ಶನಿಗೆ ಎಳ್ಳೆಣ್ಣೆಯನ್ನು ಅರ್ಪಿಸಿ ಎಳ್ಳೆಣ್ಣೆ ದೀಪವನ್ನು ಬೆಳಗಬೇಕು. ಇದರಿಂದ ಶನಿ ದೋಷ ನಿವಾರಣೆಯಾಗುತ್ತದೆ.
ಇದನ್ನೂ ಓದಿ : Jyeshtha Amavasya 2022: ಜ್ಯೇಷ್ಠ ಅಮಾವಾಸ್ಯೆಯಂದು ಈ 7 ವಸ್ತುಗಳನ್ನು ದಾನ ಮಾಡುವುದರಿಂದ ಸಿಗುತ್ತೆ ವಿಶೇಷ ಲಾಭ
ಕಪ್ಪು ಎಳ್ಳು: ಶನಿ ದೇವರಿಗೆ ಕಪ್ಪು ಎಳ್ಳನ್ನು ಅರ್ಪಿಸಿದರೆ ಶನಿಯು ಪ್ರಸನ್ನನಾಗುತ್ತಾನೆ ಮತ್ತು ಎಲ್ಲಾ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ.
ಕಪ್ಪು ಉದ್ದು : ಶನಿ ದೋಷವನ್ನು ಹೋಗಲಾಡಿಸಲು ಕಪ್ಪು ಉದ್ದು ಕೂಡ ಬಹಳ ಮುಖ್ಯವಾಗಿರುತ್ತದೆ.
ನೀಲಿ ಹೂವುಗಳು: ನೀಲಿ ಮತ್ತು ಕಪ್ಪು ಬಣ್ಣಗಳು ಶನಿಗ್ರಹಕ್ಕೆ ಬಹಳ ಪ್ರಿಯವಾಗಿವೆ. ಆದ್ದರಿಂದ ಶನಿದೇವನಿಗೆ ನೀಲಿ ಹೂವುಗಳನ್ನು ಅರ್ಪಿಸಿ ಶನಿದೆವನ ಕೃಪೆಗೆ ಪಾತ್ರರಾಗಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.