ಈ ತಾರೀಕಿನಂದು ಖಾತೆಗೆ ಬರಲಿದೆ PF ಬಡ್ಡಿ ಹಣ, ಬ್ಯಾಲೆನ್ಸ್ ಹಣವನ್ನು ಹೀಗೆ ಚೆಕ್ ಮಾಡಿಕೊಳ್ಳಿ

ವರದಿಗಳ ಪ್ರಕಾರ ಜುಲೈ ವೇಳೆಗೆ ಪಿಎಫ್ ಖಾತೆಗೆ ಬಡ್ಡಿ ಹಣ ಬರಬಹುದು ಎನ್ನಲಾಗಿದೆ. ಇದಕ್ಕೂ ಮುನ್ನ ನಿಮ್ಮ ಪಿಎಫ್ ಖಾತೆಯ ಸ್ಟೇಟಸ್ ಅನ್ನು ಪರಿಶೀಲಿಸಿಕೊಳ್ಳಿ. 

Written by - Ranjitha R K | Last Updated : Apr 7, 2022, 01:00 PM IST
  • PF ಖಾತೆದಾರರಿಗೆ ಮಹತ್ವದ ಸುದ್ದಿ
  • ಜುಲೈವರೆಗೆ ಬಡ್ಡಿ ಹಣ ಖಾತೆ ಸೇರಲಿದೆ
  • ಖಾತೆಯ ಸ್ಟೇಟಸ್ ಅನ್ನು ಈ ರೀತಿ ಪರಿಶೀಲಿಸಬಹುದು
ಈ ತಾರೀಕಿನಂದು ಖಾತೆಗೆ ಬರಲಿದೆ PF ಬಡ್ಡಿ ಹಣ, ಬ್ಯಾಲೆನ್ಸ್ ಹಣವನ್ನು ಹೀಗೆ ಚೆಕ್ ಮಾಡಿಕೊಳ್ಳಿ  title=
EPFO (file photo)

ನವದೆಹಲಿ : EPFO: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಇತ್ತೀಚೆಗೆ 2021-22ನೇ ಹಣಕಾಸು ವರ್ಷಕ್ಕೆ ಪಿಎಫ್ ಮೇಲಿನ ಬಡ್ಡಿ ದರವನ್ನು ಶೇ.0.40 ರಿಂದ ಶೇ.8.10ಕ್ಕೆ ಇಳಿಸಿದೆ. ವರದಿಗಳ ಪ್ರಕಾರ ಜುಲೈ ವೇಳೆಗೆ ಪಿಎಫ್ ಖಾತೆಗೆ ಬಡ್ಡಿ ಹಣ ಬರಬಹುದು ಎನ್ನಲಾಗಿದೆ. ಇದಕ್ಕೂ ಮುನ್ನ ನಿಮ್ಮ ಪಿಎಫ್ ಖಾತೆಯ ಸ್ಟೇಟಸ್ ಅನ್ನು ಪರಿಶೀಲಿಸಿಕೊಳ್ಳಿ. ಈ ಕೆಳಗಿನ ವಿಧಾನಗಳ ಮೂಲಕ  ಪಿಎಫ್ ಖಾತೆಯ ಸ್ಟೇಟಸ್ ಅನ್ನು ಪರಿಶೀಲಿಸಿಕೊಳ್ಳಬಹುದು.  

ಮಿಸ್ಡ್ ಕಾಲ್‌ನಿಂದ ತ್ವರಿತ ಮಾಹಿತಿ ಪಡೆಯಬಹುದು : 
ಪಿಎಫ್ ಖಾತೆಗೆ ಲಿಂಕ್ ಮಾಡಲಾದ ರಿಜಿಸ್ಟರ್ ಸಂಖ್ಯೆಯಿಂದ 011-22901406 ಗೆ ಮಿಸ್ಡ್ ಕಾಲ್ ನೀಡಬೇಕು. ಮಿಸ್ಡ್ ಕಾಲ್  (Missed call) ನೀಡಿದ ನಂತರ ನೋಂದಾಯಿತ ಸಂಖ್ಯೆಗೆ ಸಂದೇಶ ಬರುತ್ತದೆ. ಈ ಸಂದೇಶದಲ್ಲಿ ಪಿಎಫ್ ಬ್ಯಾಲೆನ್ಸ್ (PF Ballance) ಎಷ್ಟಿದೆ ಎನ್ನುವ ಮಾಹಿತಿ ಲಭ್ಯವಿರುತ್ತದೆ.

ಇದನ್ನೂ ಓದಿ : Fuel Price: ಪೆಟ್ರೋಲ್-ಡೀಸೆಲ್ ಬೆಲೆ ಪ್ರತಿದಿನ 80 ಪೈಸೆಯೇ ಹೆಚ್ಚಾಗುತ್ತಿರುವುದೇಕೆ?

ಎಸ್‌ಎಂಎಸ್ ಮೂಲಕವೂ ಬ್ಯಾಲೆನ್ಸ್ ಚೆಕ್ ಮಾಡಬಹುದು : 
EPFOನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಿಂದ EPFO ​​UAN LAN (ಭಾಷೆ) ಅನ್ನು 7738299899  ಕಳುಹಿಸಬೇಕು.  LAN ಎಂದರೆ ನಿಮ್ಮ ಭಾಷೆ. ನಿಮಗೆ ಇಂಗ್ಲಿಷ್‌ನಲ್ಲಿ ಮಾಹಿತಿ ಬೇಕಾದರೆ, LAN ಬದಲಿಗೆ, ENG ಎಂದು ಬರೆದು ಕಳುಹಿಸಬೇಕು. ಈ ನಂಬರ್ ಗೆ ಮೆಸೇಜ್ ಕಳುಹಿಸಿದ ತಕ್ಷಣ ಪಿಎಫ್ ಬ್ಯಾಲೆನ್ಸ್ ಎಷ್ಟು ಎನ್ನುವುದು ತಿಳಿಯುತ್ತದೆ.  

ನೀವು UMANG ಅಪ್ಲಿಕೇಶನ್‌ನೊಂದಿಗೆ ಪರಿಶೀಲಿಸಬಹುದು :
UMANG ಅಪ್ಲಿಕೇಶನ್ ಮೂಲಕ PF ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು. ಇದಕ್ಕಾಗಿ, UMANG ಅಪ್ಲಿಕೇಶನ್‌ನಲ್ಲಿ EPFO ಮೇಲೆ ​​ಕ್ಲಿಕ್ ಮಾಡಿ. ಇದರಲ್ಲಿ Employee Centric Services ಮೇಲೆ ಕ್ಲಿಕ್ ಮಾಡಿ. ಇದರ ನಂತರ, View Passbook ಮೇಲೆ ಕ್ಲಿಕ್ ಮಾಡಿ. UAN ಮತ್ತು ಪಾಸ್ವರ್ಡ್ ಅನ್ನು ನಮೂದಿಸಿ. ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಅದನ್ನು ನಮೂದಿಸಿದ ನಂತರ, ಇಪಿಎಫ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು.

ಇದನ್ನೂ ಓದಿ : 7th Pay Commission: ಸರ್ಕಾರಿ ನೌಕರರಿಗೆ ಮತ್ತೆ ಶುಭ ಸುದ್ದಿ, DA ಬಳಿಕ ಇದೀಗ ಈ ಭತ್ಯೆಯಲ್ಲಿಯೂ ಹೆಚ್ಚಳ ..!

ಅಧಿಕೃತ ವೆಬ್‌ಸೈಟ್‌ನಿಂದಲೂ ಪರಿಶೀಲಿಸಬಹುದು :
ನಿಮ್ಮ PF ಬ್ಯಾಲೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಲು, EPF ಪಾಸ್‌ಬುಕ್ ಪೋರ್ಟಲ್‌ಗೆ ಭೇಟಿ ನೀಡಿ. UAN ಮತ್ತು ಪಾಸ್‌ವರ್ಡ್ ಬಳಸಿ ಈ ಪೋರ್ಟಲ್‌ಗೆ ಲಾಗ್ ಇನ್ ಮಾಡಿ. ಇದರಲ್ಲಿ, Download/View Passbook ಅನ್ನು ಕ್ಲಿಕ್ ಮಾಡಿ. ಈಗ   ಪಾಸ್‌ಬುಕ್ ತೆರೆಯುತ್ತದೆ ಅದರಲ್ಲಿ ಬ್ಯಾಲೆನ್ಸ್ ಎಷ್ಟಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News