Fact Check of Kavya Maran wedding with Aidan Macrame: ಐಪಿಎಲ್ ಶುರುವಾದ್ರೆ ಸಾಕು ಕ್ರಿಕೆಟ್ ಕ್ರೇಜ್ ಹೇಗೆ ಪೀಕ್ ಲೆವೆಲ್ನಲ್ಲಿರುತ್ತೋ, ಅಷ್ಟೇ ಕ್ರೇಜ್ ಕಾವ್ಯಾ ಮಾರನ್ ವಿಷಯದಲ್ಲೂ ಇರುತ್ತದೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾಗಿರುವ ಕಾವ್ಯಾ ಮಾರನ್, ಪಡ್ಡೆ ಹುಡುಗರ ದಿಲ್ ಗೆದ್ದ ಚೆಲುವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಐಪಿಎಲ್ ಶುರುವಾದ್ರೆ ಸಾಕು ಕ್ರಿಕೆಟ್ ಕ್ರೇಜ್ ಹೇಗೆ ಪೀಕ್ ಲೆವೆಲ್ನಲ್ಲಿರುತ್ತೋ, ಅಷ್ಟೇ ಕ್ರೇಜ್ ಕಾವ್ಯಾ ಮಾರನ್ ವಿಷಯದಲ್ಲೂ ಇರುತ್ತದೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾಗಿರುವ ಕಾವ್ಯಾ ಮಾರನ್, ಪಡ್ಡೆ ಹುಡುಗರ ದಿಲ್ ಗೆದ್ದ ಚೆಲುವೆ.
ಈಕೆ ಸ್ಟೇಡಿಯಂನಲ್ಲಿ ಕಂಡರೆ ಸಾಕು ಅಭಿಮಾನಿಗಳು ಸಂಭ್ರಮಿಸುತ್ತಾರೆ. ಇನ್ನು ಅನೇಕ ಬಾರಿ ಕಾವ್ಯಾ ಮಾರನ್ ಮದುವೆ ವಿಚಾರಗಳು ಮುನ್ನೆಲೆಗೆ ಬಂದಿವೆ. ಒಮ್ಮೆ ರಿಷಬ್ ಪಂತ್ ಜೊತೆಯೂ ಈಕೆ ರಿಲೇಷನ್ಶಿಪ್ನಲ್ಲಿದ್ದರು ಎಂದು ಹೇಳಲಾಗಿತ್ತು. ಅದಾದ ನಂತರ ಟೀಂ ಇಂಡಿಯಾದ ಮತ್ತೋರ್ವ ಆಟಗಾರ ಅಭಿಷೇಕ್ ಶರ್ಮಾ ಜೊತೆಗೂ ಈಕೆ ಹೆಸರು ತಳುಕು ಹಾಕಿತ್ತು.ಆದರೆ ಈ ಸುದ್ದಿ ಎಷ್ಟರ ಮಟ್ಟಿಗೆ ಸತ್ಯ ಎಂಬುದು ತಿಳಿದಿಲ್ಲ.
ಇಂತಹ ವದಂತಿಗಳ ಮಧ್ಯೆಯೇ ಫೋಟೋವೊಂದು ವೈರಲ್ ಆಗಿದೆ. ಅದರಲ್ಲಿ ಕಾವ್ಯಾ ಮಾರನ್ ರೀತಿಯೇ ಕಾಣುವ ಓರ್ವ ಮಹಿಳೆ ಜೊತೆ ಕ್ರಿಕೆಟಿಗ ಏಡನ್ ಮಾಕ್ರಮ್ ವಿವಾಹವಾಗಿರುವುದನ್ನು ಕಾಣಬಹುದು. ಇನ್ನು ಇದು ಎಐ ಜನರೇಟೆಡ್ ಫೋಟೋ ಅಲ್ಲ. ನೈಜ ಫೋಟೋ. ಆದರೆ ಇದರಲ್ಲಿ ಅಚ್ಚರಿಯ ರಹಸ್ಯವೊಂದು ಅಡಗಿದೆ. ಅದೇನೆಂದು ಮುಂದೆ ತಿಳಿಯೋಣ.
ದಕ್ಷಿಣ ಆಫ್ರಿಕಾದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾದ ಏಡನ್ ಮಾಕ್ರಮ್ ಬಲಗೈ ಬ್ಯಾಟ್ಸ್ಮನ್. ದಕ್ಷಿಣ ಆಫ್ರಿಕಾ ಪರ 100ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿರುವ ಇವರ ಮದುವೆಯ ಫೋಟೋ ಇದಾಗಿದೆ.
ಆದರೆ ಇವರ ಜೊತೆ ಇರುವುದು ಕಾವ್ಯಾ ಮಾರನ್ ಅಲ್ಲ, ಬದಲಾಗಿ ಏಡನ್ ಅವರ ಪತ್ನಿ ನಿಕೋಲ್. ಇವರಿಬ್ಬರು ನೋಡಲು ಅವಳಿ ಮಕ್ಕಳಂತಿದ್ದಾರೆ. ಅದೆಷ್ಟೋ ಬಾರಿ ನಿಕೋಲ್ ಅವರನ್ನು ನೋಡಿ ಕಾವ್ಯಾ ಮಾರನ್ ಎಂದು ಅಭಿಮಾನಿಗಳು ಕನ್ಫೂಸ್ ಆಗಿದ್ದುಂಟು. ಇವರನ್ನು ಸುಲಭದಲ್ಲಿ ಗುರುತು ಹಿಡಿಯೋದು ಕಷ್ಟವೇ. ಈಗ ಈ ಫೋಟೋ ವೈರಲ್ ಆಗಿ ಗೊಂದಲ ಸೃಷ್ಟಿಯಾಗಲು ಸಹ ಇದೇ ಕಾರಣ.
ಸುಮಾರು 10 ವರ್ಷಗಳ ಕಾಲ ನಿಕೋಲ್ ಮತ್ತು ಏಡನ್ ಮಾಕ್ರಮ್ ಡೇಟಿಂಗ್ ಮಾಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಇದೇ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ನೆಟ್ಟಿಗನೊಬ್ಬ, ಕ್ರಿಕೆಟಿಗ ಏಡನ್ ಜೊತೆ ಕಾವ್ಯಾ ಮಾರನ್ ಎಂದು ಬರೆದುಕೊಂಡಿದ್ದಾರೆ. ಆದರೆ ಆ ಫೋಟೋ ಹಿಂದಿರುವ ಅಸಲಿಯತ್ತು ಇದಾಗಿದೆ.