Lekha Imran Khan : ಕನ್ನಡದಲ್ಲಿ ಹುಡುಗ ಹುಡುಗಿ ಸಿನಿಮಾದಲ್ಲಿ ನಟಿಸಿದ್ದ ಲೇಖಾ ಹೆಸರು ಸದ್ಯ ಬಾಲಿವುಡ್ ಸ್ಟಾರ್ ನಟನೊಂದಿಗೆ ತಳಕು ಹಾಕಿಕೊಂಡಿದೆ. ಅಮೀರ್ ಖಾನ್ ಅವರ ಸೋದರಳಿಯ ಇಮ್ರಾನ್ ಖಾನ್ ಜೊತೆ ಮದುವೆ ಆಗದೇ ಒಂದೇ ಮನೆಯಲ್ಲಿ ವಾಸವಿದ್ದಾರೆ ಎನ್ನಲಾಗುತ್ತಿದೆ.
ಬಾಲಿವುಡ್ ನಟ ಇಮ್ರಾನ್ ಖಾನ್ ಅವರು ತಮ್ಮ ಗೆಳತಿ ಲೇಖಾ ವಾಷಿಂಗ್ಟನ್ ಅವರೊಂದಿಗಿನ ಸಂಬಂಧಕ್ಕಾಗಿ ಬಹಳ ಸಮಯದಿಂದ ಮುಖ್ಯಾಂಶಗಳಲ್ಲಿದ್ದಾರೆ. ಅಮೀರ್ ಖಾನ್ ಅವರ ಪುತ್ರಿ ಆಯ್ರಾ ಖಾನ್ ಅವರ ಮದುವೆಯಲ್ಲಿ ಲೇಖಾ ಮತ್ತು ಇಮ್ರಾನ್ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇಬ್ಬರೂ ಅನೇಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಇಮ್ರಾನ್ ಅವರು ಲೇಖಾ ಅವರೊಂದಿಗೆ ಹೇಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು ಎಂದು ಹೇಳಿದ್ದರು. ಅವರು ತಮ್ಮ ಸಂಬಂಧವನ್ನು ಮರೆಮಾಡಲು ಸಾಕಷ್ಟು ಪ್ರಯತ್ನಿಸಿದರು, ಆದರೆ ಅದು ಸಾಧ್ಯವಾಗಲಿಲ್ಲ ಎಂದು ಒಪ್ಪಿಕೊಂಡರು.
ಅಮೀರ್ ಖಾನ್ ಸೋದರಳಿಯನಾಗಿರುವ ನಟ ಇಮ್ರಾನ್ ಖಾನ್ ಮೊದಲನೇ ಸಿನಿಮಾ ಜಾನೇ ತು ಯಾ ಜಾನೇ ನಾ ಚಿತ್ರದ ಮೂಲಕ ರಾತ್ರೋ ರಾತ್ರಿ ಸ್ಟಾರ್ ಆಗಿ ಬೆಳೆದರು. ಆ ನಂತರ ಒಂದಾದ ಮೇಲೊಂದು ಸಿನಿಮಾ ಮಾಡಿ ಸಿನಿಪ್ರೇಮಿಗಳಿಗೆ ಹತ್ತಿರವಾದರು. ಖ್ಯಾತಿಯ ಶಿಖರಕ್ಕೇರಿದ್ದಾಗಲೇ ಬಾಲ್ಯದ ಗೆಳತಿ ಅವಂತಿಕಾ ಮಲಿಕ್ ಜೊತೆ 2011ರಲ್ಲಿ ವಿವಾಹ ನಡೆಯಿತು. ಆದರೆ ಮದುವೆಯಾದ ಬಳಿಕ ಮ್ರಾನ್ ಮತ್ತು ಅವಂತಿಕಾ ನಡುವೆ ಭಿನ್ನಾಭಿಪ್ರಾಯ ಮೂಡಿತು. 019ರಲ್ಲಿ ಡಿವೋರ್ಸ್ ಪಡೆದು ದೂರವಾದರು.
ನಟಿ ಲೇಖಾ ವಾಷಿಂಗ್ಟನ್ ಪತ್ರಕರ್ತ ಪಾಬ್ಲೋ ಚಟರ್ಜಿ ಜೊತೆ 8 ವರ್ಷ ಪ್ರೀತಿಸಿ 5 ವರ್ಷ ಲಿವ್ ಇನ್ ಸಂಬಂಧದಲ್ಲಿದ್ದರು. ಆ ನಂತರ 2017ರಲ್ಲಿ ಮದುವೆ ಆದರು. ಆದರೆ ಕೆಲವೇ ದಿನದಲ್ಲಿ ವಿಚ್ಚೇದನ ಪಡೆದರು.
ಕೊರೊನಾ ಸಮಯದಲ್ಲಿ ಇಮ್ರಾನ್ ಮತ್ತು ಲೇಖಾ ಪ್ರೀತಿ ಚಿಗುರಿತು. ಅಮೀರ್ ಖಾನ್ ಮಗಳು ಇರಾ ಮದುವೆಯಲ್ಲಿ ಇಮ್ರಾನ್ ಮತ್ತು ಲೇಖಾ ಜೊತೆಯಾಗಿ ಕಾಣಿಸಿಕೊಂಡರು. ಇಮ್ರಾನ್ ಖಾನ್ ಮತ್ತು ಲೇಖಾ ವಾಷಿಗ್ಟಂನ್ ಲಿವ್ ಇನ್ ನಲ್ಲಿದ್ದಾರೆ. ಮದುವೆ ಆಗದೆಯೇ ಇಬ್ಬರೂ ಒಂದೇ ಮನೆಯಲ್ಲಿದ್ದಾರೆ ಎಂಬ ವರದಿಗಳಿವೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.