ಒಂದು ದಿನಕ್ಕೆ ATM ನಿಂದ ಎಷ್ಟು ಕ್ಯಾಶ್ ವಿತ್​ ಡ್ರಾ ಮಾಡಬಹುದು.. ಟಾಪ್​ ಬ್ಯಾಂಕ್‌ಗಳ ಲಿಮಿಟ್ ಎಷ್ಟು ತಿಳಿಯಿರಿ?

ATM cash withdrawal limit: ಪ್ರತಿದಿನ ಎಟಿಎಂನಿಂದ ಎಷ್ಟು ಹಣವನ್ನು ಡ್ರಾ ಮಾಡಬಹುದು ಎಂಬುದರ ಕುರಿತು ವಿವಿಧ ಬ್ಯಾಂಕ್‌ಗಳು ತಮ್ಮದೇ ಆದ ನಿಯಮಗಳನ್ನು ಹೊಂದಿವೆ. ದೇಶದ ಕೆಲವು ಉನ್ನತ ಬ್ಯಾಂಕ್‌ಗಳ ಎಟಿಎಂ ಲಿಮಿಟ್‌ ಇಲ್ಲಿದೆ...

Written by - Chetana Devarmani | Last Updated : Jan 4, 2025, 11:25 AM IST
  • ಎಟಿಎಂನಿಂದ ಎಷ್ಟು ಹಣವನ್ನು ಡ್ರಾ ಮಾಡಬಹುದು?
  • ಒಂದು ದಿನಕ್ಕೆ ATM ನಿಂದ ಎಷ್ಟು ಕ್ಯಾಶ್ ವಿತ್​ ಡ್ರಾ ಮಾಡಬಹುದು?
  • ಟಾಪ್​ ಬ್ಯಾಂಕ್‌ಗಳ ಲಿಮಿಟ್ ಎಷ್ಟು ತಿಳಿಯಿರಿ?
ಒಂದು ದಿನಕ್ಕೆ ATM ನಿಂದ ಎಷ್ಟು ಕ್ಯಾಶ್ ವಿತ್​ ಡ್ರಾ ಮಾಡಬಹುದು.. ಟಾಪ್​ ಬ್ಯಾಂಕ್‌ಗಳ ಲಿಮಿಟ್ ಎಷ್ಟು ತಿಳಿಯಿರಿ? title=
ATM cash withdrawal limit

ATM cash withdrawal limit: ಡಿಜಿಟಲ್ ಪಾವತಿಯ ಯುಗದಲ್ಲಿಯೂ ಸಹ ನಗದು ತನ್ನ ಮೌಲ್ಯ ಉಳಿಸಿಕೊಂಡಿದೆ. UPI ವಹಿವಾಟುಗಳಲ್ಲಿ ನಿರಂತರ ಹೆಚ್ಚಳದ ಹೊರತಾಗಿಯೂ, ನಗದು ಬಳಕೆಗೆ ಆದ್ಯತೆ ನೀಡುವವರಿದ್ದಾರೆ. ಎಟಿಎಂ ಯಂತ್ರಗಳು ಈಗ ವ್ಯಾಪಕವಾಗಿ ಲಭ್ಯವಿವೆ. ಆದ್ದರಿಂದ ಬ್ಯಾಂಕ್‌ನಿಂದ ಹಣವನ್ನು ವಿತ್‌ಡ್ರಾ ಮಾಡುವುದು ತುಂಬಾ ಸುಲಭದ ಕೆಲಸವಾಗಿದೆ. ಆದರೆ ಎಲ್ಲಾ ಬ್ಯಾಂಕ್‌ಗಳು ಎಟಿಎಂ ವಹಿವಾಟಿಗೆ ಕೆಲವು ಮಿತಿಗಳನ್ನು ವಿಧಿಸುತ್ತವೆ. ಇದರರ್ಥ ನೀವು ಪ್ರತಿದಿನ ಎಟಿಎಂನಿಂದ ಇಂತಿಷ್ಟೇ ಹಣವನ್ನು ತೆಗೆಯಯಬಹುದು ಎಂಬುದರ ಕುರಿತು ವಿವಿಧ ಬ್ಯಾಂಕ್‌ಗಳು ತಮ್ಮದೇ ಆದ ನಿಯಮಗಳನ್ನು ಹೊಂದಿವೆ. ದೇಶದ ಕೆಲವು ಉನ್ನತ ಬ್ಯಾಂಕ್‌ಗಳ ದೈನಂದಿನ ATM cash withdrawal ನಿಯಮಗಳನ್ನು ನಾವು ಇಲ್ಲಿ ಹೇಳುತ್ತಿದ್ದೇವೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ - 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್. ತನ್ನ ಗ್ರಾಹಕರಿಗೆ ಹಲವು ರೀತಿಯ ಹಣಕಾಸು ಸೇವೆಗಳನ್ನು ಒದಗಿಸುತ್ತದೆ. ಬ್ಯಾಂಕ್ ವಿವಿಧ ರೀತಿಯ ಕಾರ್ಡ್‌ಗಳನ್ನು ಸಹ ಒದಗಿಸುತ್ತದೆ. ಈ ಕಾರ್ಡ್‌ಗಳಲ್ಲಿ ನಗದು ಡ್ರಾ ಮಾಡುವ ಮಿತಿಗಳು ಬದಲಾಗಬಹುದು.

ಉದಾಹರಣೆಗೆ, ಕ್ಲಾಸಿಕ್ ಡೆಬಿಟ್ ಕಾರ್ಡ್ ಅಥವಾ ಮೆಸ್ಟ್ರೋ ಡೆಬಿಟ್ ಕಾರ್ಡ್‌ನಿಂದ ದೈನಂದಿನ ಮಿತಿ 20,000 ರೂಪಾಯಿ ಆಗಿದೆ. ಎಸ್‌ಬಿಐ ಪ್ಲಾಟಿನಂ ಇಂಟರ್‌ನ್ಯಾಶನಲ್ ಡೆಬಿಟ್ ಕಾರ್ಡ್‌ ಒಂದು ದಿನದ ಮಿತಿ 1 ಲಕ್ಷ ಆಗಿದೆ. 

ಇದನ್ನೂ ಓದಿ: ವ್ಯಾಪಾರದಲ್ಲಿ ಅಂಬಾನಿಗೂ ಪೈಪೋಟಿ ನೀಡುವ ಈತ ಒಬ್ಬ ಶಾಲಾ ಶಿಕ್ಷಕರ ಮಗ! ಈ ಪ್ರಸಿದ್ಧ ನಟಿಯ ಪತಿ ಈ ಉದ್ಯಮಿ!

SBI GO ಲಿಂಕ್ಡ್ ಮತ್ತು ಟಚ್ ಟ್ಯಾಪ್ ಡೆಬಿಟ್ ಕಾರ್ಡ್‌ಗಳ ಮಿತಿ 40,000 ರೂ. ಮೆಟ್ರೋ ನಗರಗಳಲ್ಲಿ ಎಸ್‌ಬಿಐ ಕಾರ್ಡ್‌ದಾರರು ತಿಂಗಳಿಗೆ 3 ಬಾರಿ ಉಚಿತವಾಗಿ ಹಣ ಡ್ರಾ ಮಾಡಬಹುದು. ಇತರ ನಗರಗಳಲ್ಲಿ 5 ಬಾರಿ ಉಚಿತ ಹಣ ಡ್ರಾ ಮಾಡಬಹುದು. ಈ ಮಿತಿಯನ್ನು ದಾಟಿದ ನಂತರ ಎಸ್‌ಬಿಐ ಎಟಿಎಂನಲ್ಲಿ 5 ರೂಪಾಯಿ ಮತ್ತು ಎಸ್‌ಬಿಐ ಅಲ್ಲದ ಎಟಿಎಂನಲ್ಲಿ ರೂ 10 ಶುಲ್ಕವನ್ನು ಪಾವತಿಸಬೇಕು.

ಪಂಜಾಬ್ ನ್ಯಾಷನಲ್ ಬ್ಯಾಂಕ್ -

ಈ ಸರ್ಕಾರಿ ಬ್ಯಾಂಕ್‌ನ ಗ್ರಾಹಕರು PNB ಪ್ಲಾಟಿನಂ ಡೆಬಿಟ್ ಕಾರ್ಡ್‌ನಿಂದ ಪ್ರತಿದಿನ 50,000 ರೂಪಾಯಿ ಡ್ರಾ ಮಾಡಬಹುದು. PNB ಕ್ಲಾಸಿಕ್ ಡೆಬಿಟ್ ಕಾರ್ಡ್‌ಗೆ ಲಿಂಕ್ ಮಾಡಲಾದ ಖಾತೆಯಿಂದ ಗರಿಷ್ಠ 25,000 ರೂಪಾಯಿ ಡ್ರಾ ಮಾಡಬಹುದು. ಗೋಲ್ಡ್ ಡೆಬಿಟ್ ಕಾರ್ಡ್‌ಗೆ ಲಿಂಕ್ ಮಾಡಲಾದ ಖಾತೆಯಿಂದ ದೈನಂದಿನ ಮಿತಿ 50,000 ರೂ ಡ್ರಾ ಮಾಡಬಹುದು. 

HDFC ಬ್ಯಾಂಕ್ -

HDFC ಬ್ಯಾಂಕ್ ಡೆಬಿಟ್ ಕಾರ್ಡ್ ಬಳಕೆದಾರರು ಐದು ಉಚಿತ ವಹಿವಾಟುಗಳನ್ನು ಪಡೆಯುತ್ತಾರೆ. ನಂತರ ಶುಲ್ಕವನ್ನು ವಿಧಿಸಲಾಗುತ್ತದೆ. ವಿದೇಶಿ ವಿತ್ ಡ್ರಾಗಳ ಮೇಲೆ 125 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಮಿಲೇನಿಯಾ ಡೆಬಿಟ್ ಕಾರ್ಡ್‌ನಲ್ಲಿ ದೈನಂದಿನ ಮಿತಿ 50,000, ರೂಪಾಯಿ ಮನಿಬ್ಯಾಕ್ ಡೆಬಿಟ್ ಕಾರ್ಡ್ 25,000 ರೂಪಾಯಿ ಮತ್ತು ರಿವಾರ್ಡ್ ಡೆಬಿಟ್ ಕಾರ್ಡ್ 50,000 ರೂಪಾಯಿ ಡ್ರಾ ಮಾಡಬಹುದು.

ಬ್ಯಾಂಕ್ ಆಫ್ ಬರೋಡಾ -

ಬ್ಯಾಂಕ್ ಆಫ್ ಬರೋಡಾದ BPCL ಡೆಬಿಟ್ ಕಾರ್ಡ್‌ನಿಂದ ನೀವು ಪ್ರತಿದಿನ 50,000 ರೂಪಾಯಿ, ಮಾಸ್ಟರ್‌ಕಾರ್ಡ್ ಡಿಐ ಪ್ಲಾಟಿನಂ ಡೆಬಿಟ್ ಕಾರ್ಡ್‌ನಿಂದ 50,000 ರೂಪಾಯಿ ಮತ್ತು ಮಾಸ್ಟರ್‌ಕಾರ್ಡ್ ಕ್ಲಾಸಿಕ್ ಡಿಐ ಡೆಬಿಟ್ ಕಾರ್ಡ್‌ನಿಂದ ಪ್ರತಿದಿನ 25,000 ರೂಪಾಯಿ  ಎಟಿಎಂ ಡ್ರಾ ಮಾಡಬಹುದು.

ಇದನ್ನೂ ಓದಿ: ಪರ್ಸನಲ್ ಲೋನ್ ಪಡೆಯಲು ಹೊಸ ನಿಯಮ ಜಾರಿಗೊಳಿಸಿದ ಆರ್‌ಬಿಐ: ಏನು ಬದಲಾವಣೆ?

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News