ಈ ವಸ್ತುಗಳಲ್ಲಿ ಹಾಲಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿದೆ ಕ್ಯಾಲ್ಸಿಯಂ

7 Non-Dairy Calcium-Rich Foods :  ದೇಹವನ್ನು ಆರೋಗ್ಯವಾಗಿಡಲು ಮತ್ತು ಮೂಳೆಗಳನ್ನು ಬಲವಾಗಿಡಲು ಕ್ಯಾಲ್ಸಿಯಂ ಬಹಳ ಮುಖ್ಯ. ಸರಿಯಾದ ಪ್ರಮಾಣದಲ್ಲಿ ಕ್ಯಾಲ್ಸಿಯಂ ಸೇವಿಸುವುದು ಮೂಳೆಗಳ ಆರೋಗ್ಯಕ್ಕೆ  ಒಳ್ಳೆಯದು.

Written by - Ranjitha R K | Last Updated : Jul 21, 2021, 07:51 PM IST
  • ದೇಹದಲ್ಲಿನ ಕ್ಯಾಲ್ಸಿಯಂ ಕೊರತೆ ನೀಗಿಸಲು, ಇವುಗಳನ್ನು ಸೇವಿಸಿ
  • ಎಳ್ಳು ಕ್ಯಾಲ್ಸಿಯಂನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ.
  • ಅಂಜೂರದ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ರೋಗಗಳಿಂದ ರಕ್ಷಿಸಬಹುದು.

Trending Photos

ಈ ವಸ್ತುಗಳಲ್ಲಿ ಹಾಲಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿದೆ ಕ್ಯಾಲ್ಸಿಯಂ  title=
ದೇಹದಲ್ಲಿನ ಕ್ಯಾಲ್ಸಿಯಂ ಕೊರತೆ ನೀಗಿಸಲು, ಇವುಗಳನ್ನು ಸೇವಿಸಿ (file photo)

ನವದೆಹಲಿ : 7 Non-Dairy Calcium-Rich Foods :  ದೇಹವನ್ನು ಆರೋಗ್ಯವಾಗಿಡಲು ಮತ್ತು ಮೂಳೆಗಳನ್ನು ಬಲವಾಗಿಡಲು ಕ್ಯಾಲ್ಸಿಯಂ ಬಹಳ ಮುಖ್ಯ. ಸರಿಯಾದ ಪ್ರಮಾಣದಲ್ಲಿ ಕ್ಯಾಲ್ಸಿಯಂ ಸೇವಿಸುವುದು ಮೂಳೆಗಳ ಆರೋಗ್ಯಕ್ಕೆ  (Food for bone) ಒಳ್ಳೆಯದು. ದೇಹದಲ್ಲಿ ಕ್ಯಾಲ್ಸಿಯಂ ಮತ್ತು ಪೋಷಕಾಂಶಗಳ ಕೊರತೆಯಿದ್ದರೆ ಮೂಳೆಗಳು ದುರ್ಬಲಗೊಳ್ಳುತ್ತವೆ. ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಕ್ಯಾಲ್ಸಿಯಂನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಆದರೆ ಅನೇಕ ಜನರು ಹಾಲು ಅಥವಾ ಹಾಲಿನಿಂದ ತಯಾರಿಸಿದ ವಸ್ತುಗಳನ್ನು ಸೇವಿಸುವುದಕ್ಕೆ ಇಷ್ಟಪಡುವುದಿಲ್ಲ. ಇನ್ನು ಕೆಲವರಿಗೆ  ಹಾಲು (Milk) ಅಥವಾ ಹಾಲಿನಿಂದ ತಯಾರಿಸಿದ ವಸ್ತುಗಳ ಅಲರ್ಜಿ ಇರುತ್ತದೆ. ಹೀಗಾದಾಗ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯನ್ನು ಎದುರಿಸಬೇಕಾಗುತ್ತದೆ. ಆದರೆ ಹಾಲಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಒದಗಿಸುವ ಅನೇಕ ಆಹಾರ ಪದಾರ್ಥಗಳಿವೆ.  ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಹೇರಳವಾಗಿರುತ್ತವೆ. ಇದು ಮೂಳೆ ಮುರಿತಗಳು ಮತ್ತು ಇತರ ಕಾಯಿಲೆಗಳ ಅಪಾಯದಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ದೇಹದಲ್ಲಿನ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಲು, ಇವುಗಳನ್ನು ಸೇವಿಸಿ: 
1. ಹಸಿರು ಸೊಪ್ಪು ತರಕಾರಿಗಳು: ಫೋಲಿಕ್ ಆಸಿಡ್, ಮೆಗ್ನೀಸಿಯಮ್, ಸತು, ಕಾಪರ್, ಕಾರ್ಬೋಹೈಡ್ರೇಟ್, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣವು ಹಸಿರು ಸೊಪ್ಪು ತರಕಾರಿಗಳಲ್ಲಿ (Green vegetables) ಹೇರಳವಾಗಿ ಕಂಡುಬರುತ್ತವೆ, ಇದು ನಿಮ್ಮ ಆರೋಗ್ಯ ಮತ್ತು ಮೂಳೆಗಳನ್ನು ಸದೃಢವಾಗಿರಿಸಲು (bone health) ಸಹಾಯ ಮಾಡುತ್ತದೆ. 

ಇದನ್ನೂ ಓದಿ : Sleeping Empty Stomach : ರಾತ್ರಿ ಖಾಲಿ ಹೊಟ್ಟೆಯಲ್ಲಿ ಮಲಗುವುದು ಆರೋಗ್ಯಕ್ಕೆ ತಪ್ಪಿದಲ್ಲ ಹಾನಿ!

2.  ಸೋಯಾ : ಅರ್ಧ ಕಪ್ ಸೋಯಾಬೀನ್ ತಿನ್ನುವುದರಿಂದ, ದೇಹ ಸುಮಾರು 225 ಮಿಗ್ರಾಂ ಕ್ಯಾಲ್ಸಿಯಂ ಪಡೆಯುತ್ತದೆ.  ಆದರೆ ಅರ್ಧ ಕಪ್ ಸೋಯಾ ಪನೀರ್ (Soya paneer) ತಿನ್ನುವುದರಿಂದ 250 ಮಿಗ್ರಾಂ ಕ್ಯಾಲ್ಸಿಯಂ ದೇಹಕ್ಕೆ ಪೂರೈಕೆಯಾಗುತ್ತದೆ.  ಸೋಯಾ ಮತ್ತು ಸಾಯ ಪನೀರ್ ಸೇವನೆಯಿಂದ ಕ್ಯಾಲ್ಸಿಯಂ ಕೊರತೆಯನ್ನು ನಿವಾರಿಸಬಹುದು. 

3. ಬಿಳಿ ಎಳ್ಳು: ಮನೆಯಲ್ಲಿ ತಿಂಡಿ ತಿನಿಸುಗಳನ್ನು ತಯಾರಿಸುವಾಗ ಬಿಳಿ ಎಳ್ಳನ್ನು (white sesame seeds) ಬಳಸುತ್ತೇವೆ . ಈ ಬಿಳಿ ಎಳ್ಳು, ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಎಳ್ಳು ತಿನ್ನುವುದರಿಂದ ಕ್ಯಾಲ್ಸಿಯಂ (Benefits of white sesame seeds) ಕೊರತೆಯನ್ನು ನಿವಾರಿಸಬಹುದು.

4. ಸಾಲ್ಮನ್ ಮೀನು: ಸಾಲ್ಮನ್ ಮೀನು (Fish) ವಿಟಮಿನ್ ಡಿ ಯ ಮುಖ್ಯ ಮೂಲವಾಗಿದೆ. ಇದು ಮೂಳೆಗಳನ್ನು ಬಲಪಡಿಸಲು ಸಹಕಾರಿಯಾಗಿದೆ. ಮೂಳೆಗಳನ್ನು ಬಲಪಡಿಸಲು ಮತ್ತು ಮೂಳೆಗಳ ಆರೋಗ್ಯಕ್ಕಾಗಿ, ಕ್ಯಾಲ್ಸಿಯಂನ  ಉತ್ತಮ ಮೂಲವಾದ   ಸಾಲ್ಮನ್ ಮೀನನ್ನು ಬಳಸಬಹುದು. 

ಇದನ್ನೂ ಓದಿ : Fish Oil Benefits: ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಮೀನಿನ ಎಣ್ಣೆ

5. ಅಂಜೂರ: ರಂಜಕ ಮತ್ತು ಕ್ಯಾಲ್ಸಿಯಂ ಅಂಜೂರದ ಹಣ್ಣಿನಲ್ಲಿ ಹೇರಳವಾಗಿ ಕಂಡುಬರುತ್ತದೆ. ಇದು ನಿಮ್ಮ ಎಲುಬುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅಂಜೂರದ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹವನ್ನು ಅನೇಕ ರೋಗಗಳಿಂದ ರಕ್ಷಿಸಬಹುದು.

6. ಕಿತ್ತಳೆ: ಕಿತ್ತಳೆ (Orange) ಹಣ್ಣನ್ನು ವಿಟಮಿನ್ ಸಿ ಮಾತ್ರವಲ್ಲದೆ ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಕಿತ್ತಳೆಯನ್ನು ಆಹಾರದಲ್ಲಿ ಸೇರಿಸುವ ಮೂಲಕ ಕ್ಯಾಲ್ಸಿಯಂ ಕೊರತೆಯನ್ನು (orange for calcium)  ಪೂರೈಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News