tata nano: ರತನ್ ಟಾಟಾ.. ಈ ಹೆಸರು ಕೇಳುತ್ತಿದ್ದಂತೆಯೇ ಮೊದಲು ನೆನಪಾಗುವುದು ಅವರು ಮಾಡಿದ ಒಳ್ಳೆಯ ಕೆಲಸ, ಅವರ ಸಾಧನೆ, ದೇಶಕ್ಕೆ ಅವರು ಮಾಡಿದ ಸಹಾಯ.
tata nano: ರತನ್ ಟಾಟಾ.. ಈ ಹೆಸರು ಕೇಳುತ್ತಿದ್ದಂತೆಯೇ ಮೊದಲು ನೆನಪಾಗುವುದು ಅವರು ಮಾಡಿದ ಒಳ್ಳೆಯ ಕೆಲಸ, ಅವರ ಸಾಧನೆ, ದೇಶಕ್ಕೆ ಅವರು ಮಾಡಿದ ಸಹಾಯ.
ಹೌದು, ರತನ್ ಟಾಟಾ ಅವರು ಮಾಡಿದ ಕೆಲಸಗಳು ದೇಶಕ್ಕೆ ಮಾದರಿ ಅಂತಲೇ ಹೇಳಬಹುದು, ಇವರಿಂದ ಇಂಗಿಗೂ ಹಲವಾರು ಕುಟುಂಬಗಳು ಜೀವನ ಸಾಗಿಸುತ್ತಿವೆ.
ಟಾಟಾ ಇಂಡಸ್ಟ್ರೀಸ್ ಒಂದು ದೊಡ್ಡ ಸಾಮ್ರಾಜ್ಯವೇ ಹೌದು, ಟಾಟಾ ಗ್ರೂಪ್ ಇಂಡಸ್ಟ್ರೀಸ್ ಎಂದರೆ ಒಂದಲ್ಲ ಎರಡಲ್ಲ, ಬರೋಬ್ಬರಿ ನೂರು ಕಂಪನಿಗಳನ್ನು ಒಳಗೊಂಡ ಒಂದು ಗ್ರೂಪ್ ಅಂತಲೇ ಹೇಳಬಹುದು.
ಇಂತಹ ರತನ್ ಟಾಟಾ ಅವರು ಸದಾ ಹೆಚ್ಚಾಗಿ ಯೋಚಿಸುತ್ತಿದ್ದದ್ದು ಮಧ್ಯಮ ವರ್ಗದವರ ಕುರಿತು.
ಭಾರತದಂತಹ ದೇಶದಲ್ಲಿ ಮಧ್ಯಮ ವರ್ಗದ ಜನರು ಹೆಚ್ಚಾಗಿದ್ದಾರೆ. ದುಡ್ಡಿನ ವಿಷಯದಲ್ಲಿ ಮಧ್ಯಮ ವರ್ಗದವರು ಹೆಚ್ಚಾಗಿ ಯೋಚಿಸುತ್ತಾರೆ.
ಯಾರಿಗೇ ಆಗಿರಲಿ ಕಾರು ಕೊಳ್ಳಬೇಕು ಎಂಬುದು ಕನಸ್ಸಾಗಿ ಇರುತ್ತದೆ. ಅದರಲ್ಲೂ ಮಧ್ಯಮ ವರ್ಗದ ಜನರಿಗೆ ಕಾರು ಕೊಳ್ಳುವ ಆಸೆ ಇದ್ದರೂ, ಅದಕ್ಕೆ ಸಾಕಗುವಷ್ಟು ಹಣ ಅವರ ಬಳಿ ಇರುವುದಿಲ್ಲ.
ಇದನ್ನೆ ಮನದಲ್ಲಿಟ್ಟುಕೊಂಡು ರತನ್ ಟಾಟಾ ಅವರು ಮಧ್ಯಮ ವರ್ಗದವರಿಗೂ ಕೈಗೆಟುಕುವಂತಹ ಕಾರನ್ನು ಮಾರುಕಟ್ಟೆಗೆ ಬಿಟ್ಟಿದ್ದರು.
ಅದುವೇ ಟಾಟಾ ನ್ಯಾನೋ, ಈ ಕಾರಿನಿಂದ ಹಲವರು ಮಧ್ಯಮ ವರ್ಗದವರ ಕನಸ್ಸು ನನಸಾಯಿತು, ಕಾರು ಕೊಳ್ಳಬೇಕು ಎಂಬ ಹಲವರ ಆಸೆ ನೆವೇರಿತ್ತು.
ಬಹು ಕಡಿಮೆ ಬೆಲೆಗೆ ಎಂದರೆ ಒಂದು ಗಾಡಿಯನ್ನು ಕೊಳ್ಳುವ ಬೆಲೆಗೆ ಟಾಟಾ ಅವರು ಈ ಕಾರನ್ನು ಮಾರುಕಟ್ಟೆಗೆ ಬಿಟ್ಟಿದ್ದರು, ಆದ್ರೆ ಈ ಕಾರ್ ಮಾರುಕಟ್ಟೆಯಲ್ಲಿ ಕ್ಲಿಕ್ ಆಗಲಿಲ್ಲ.
ಆದರೆ, ಇದೀಗ ರತನ್ ಟಾಟಾ ಅವರ ಕನಸ್ಸಿನಂತೆ ಟಾಟಾ ಗ್ರೂಪ್, ಮಧ್ಯಮ ವರ್ಗದವರಿಗಾಗಿ ಕಾರನ್ನು ಮತ್ತೆ ಮುಂದೆ ತರುತ್ತಿದೆ.
ಟಾಟಾ ನ್ಯಾನೋ ಪೆಟ್ರೋಲ್ ವರ್ಷನ್ ಕಾರನ್ನು ಟಾಟಾ ಗ್ರೂಪ್ ಮತ್ತೆ ಜನರ ಮುಂದೆ ಪರಿಚಯಿಸಲು ಸಜ್ಜಾಗಿದೆ, ಅಷ್ಟಕ್ಕೂ ಈ ಕಾರಿನ ಬೆಲೆ ಹೆಚ್ಚೇನು ಅಲ್ಲ, ಹೊರತಾಗಿ 2.3 ಲಕ್ಷ ಬೆಲೆ ಇರಲಿದೆ ಎಂದು ಹೇಳಲಾಗುತ್ತಿದೆ.