ಕರೋನಾಗೆ ಬಲಿಯಾದ ನೌಕರನಿಗೆ 60 ವರ್ಷದ ತನಕ ಸಂಬಳ : ಟಾಟಾ ಸ್ಟೀಲ್

ಟಾಟಾ ಸ್ಟೀಲ್ ಸುತ್ತೋಲೆಯೊಂದನ್ನು ರವಾನಿಸಿದ್ದು, ತನ್ನ ನೌಕರರ ಸಾಮಾಜಿಕ  ಸುರಕ್ಷೆಗಾಗಿ ನೆರವು ನೀಡಲು ಲಭ್ಯ  ಇರುವ ಎಲ್ಲಾ ಪ್ರಯತ್ನ ಮಾಡುವುದಾಗಿ ಹೇಳಿದೆ. ಕರೋನಾದಿಂದಾಗಿ  ಒಂದು ವೇಳೆ ಕಂಪನಿ ನೌಕರ ಮೃತಪಟ್ಟರೆ, ಆತನ ಪರಿವಾರಕ್ಕೆ 60 ವರ್ಷದ ತನಕ ವೇತನ  (Salary) ಅಷ್ಟೇ ಅಲ್ಲ, ಮೆಡಿಕಲ್ ಬೆನಿಫಿಟ್ಸ್, ಹೌಸಿಂಗ್ ಫೆಸಿಲಿಟಿ ಸಿಗಲಿದೆ. 

Written by - Ranjitha R K | Last Updated : May 24, 2021, 09:54 AM IST
  • ತನ್ನ ನೌಕರರ ಕಲ್ಯಾಣಕ್ಕೆ ಮಹತ್ವದ ಘೋಷಣೆ ಮಾಡಿದ ಟಾಟಾ ಸ್ಟೀಲ್
  • ಕರೋನಾಗೆ ಬಲಿಯಾದರೆ 60 ವರ್ಷದ ತನಕ ಪರಿವಾರಕ್ಕೆ ಸಿಗಲಿದೆ ಸಂಬಳ
  • ನೌಕರರ ಮಕ್ಕಳಿಗೆ ಶಿಕ್ಷಣ, ಮೆಡಿಕಲ್ ಮತ್ತು ಹೌಸಿಂಗ್ ಬೆನಿಫಿಟ್ ಕೂಡಾ ಸಿಗಲಿದೆ.
ಕರೋನಾಗೆ ಬಲಿಯಾದ ನೌಕರನಿಗೆ 60 ವರ್ಷದ ತನಕ ಸಂಬಳ : ಟಾಟಾ ಸ್ಟೀಲ್  title=
ತನ್ನ ನೌಕರರ ಕಲ್ಯಾಣಕ್ಕೆ ಮಹತ್ವದ ಘೋಷಣೆ ಮಾಡಿದ ಟಾಟಾ ಸ್ಟೀಲ್ (file photo)

ನವದೆಹಲಿ : ಕರೋನಾ ಮಹಾಮಾರಿ (Coronavirus) ಸಂದರ್ಭದಲ್ಲಿ ಟಾಟಾ ಸ್ಟೀಲ್ (Tata steel) ತನ್ನ ನೌಕರರ ಮತ್ತು ಅವರ ಪರಿವಾರದ ಸುರಕ್ಷೆಗೆ ವಿಶೇಷ ಸ್ಕೀಮ್ ಘೋಷಣೆ ಮಾಡಿದೆ.  ಈ ಘೋಷಣೆ ಬಳಿಕ ಕಂಪನಿ ಚರ್ಚೆಯಲ್ಲಿದೆ. ಟಾಟಾ ಸ್ಟೀಲ್ ಘೋಷಣೆ ಪ್ರಕಾರ ಕರೋನಾ ಮಹಾಮಾರಿಯಿಂದಾಗಿ ಮೃತಪಟ್ಟ ಕಂಪನಿಯ ನೌಕರನ ಪರಿವಾರ ಅಥವಾ ನಾಮಿನಿಗೆ (Nominee) ಮುಂದಿನ 60 ವರ್ಷದ ತನಕ ವೇತನ ಸಿಗಲಿದೆ. 

ಸುತ್ತೋಲೆ ಕಳುಹಿಸಿದ ಟಾಟಾ ಸ್ಟೀಲ್..!
ಟಾಟಾ ಸ್ಟೀಲ್ (Tata steel) ಈ ಸಂಬಂಧ ಸುತ್ತೋಲೆಯೊಂದನ್ನು ರವಾನಿಸಿದ್ದು, ತನ್ನ ನೌಕರರ ಸಾಮಾಜಿಕ  ಸುರಕ್ಷೆಗಾಗಿ ನೆರವು ನೀಡಲು ಲಭ್ಯ  ಇರುವ ಎಲ್ಲಾ ಪ್ರಯತ್ನ ಮಾಡುವುದಾಗಿ ಹೇಳಿದೆ. ಕರೋನಾದಿಂದಾಗಿ (Coronavirus) ಒಂದು ವೇಳೆ ಕಂಪನಿ ನೌಕರ ಮೃತಪಟ್ಟರೆ, ಆತನ ಪರಿವಾರಕ್ಕೆ 60 ವರ್ಷದ ತನಕ ವೇತನ  (Salary) ಅಷ್ಟೇ ಅಲ್ಲ, ಮೆಡಿಕಲ್ ಬೆನಿಫಿಟ್ಸ್, ಹೌಸಿಂಗ್ ಫೆಸಿಲಿಟಿ ಸಿಗಲಿದೆ.  ಅಷ್ಟೇ ಅಲ್ಲ, ನೌಕರರ ಮಕ್ಕಳ ಗ್ರ್ಯಾಜುವೇಶನ್ ತನಕದ  ವೆಚ್ಚವನ್ನೂ ಕಂಪನಿ ಭರಿಸಲಿದೆ. 

ಇದನ್ನೂ ಓದಿ : ಆಕ್ಸಿಮೀಟರ್ ಬೇಕಾಗಿಲ್ಲ.!ಮೊಬೈಲ್ ನಲ್ಲೇ ನೋಡಬಹುದು ಆಕ್ಸಿಜನ್ ಲೆವೆಲ್..!

 

ನೌಕರರ ಹಿತರಕ್ಷಣೆಗೆ ಕ್ರಮ:
ಟಾಟಾ ಸ್ಟೀಲ್ ಮ್ಯಾನೇಜ್ಮೆಂಟ್ ಪ್ರಕಾರ ಕಂಪನಿ ಎಂದೆಂದಿಗೂ ತನ್ನ ನೌಕರರು (Employee) ಹಾಗೂ ಪಾಲುದಾರರ ಹಿತಾಸಕ್ತಿಯ ಬಗ್ಗೆ ಯೋಚನೆ ಮಾಡುತ್ತದೆ. ಅದೇ ನಿಟ್ಟಿನಲ್ಲಿ ಈ ಘೋಷಣೆ ಮಾಡಲಾಗಿದೆ. ಕರೋನಾ (COVID-19) ಮಹಾಮಾರಿ ಸಂದರ್ಭದಲ್ಲಿ ಟಾಟಾ ಸ್ಟೀಲ್ ತನ್ನೆಲ್ಲಾ  ಕಾರ್ಮಿಕರ ಹಿತಾಸಕ್ತಿ ಕಾಪಾಡಲಿದೆ ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ : Galwan ಕಣಿವೆಯಲ್ಲಿ ಭಾರತ-ಚೀನಾ ನಡುವೆ ಮತ್ತೆ ಸಂಘರ್ಷದ ಬಗ್ಗೆ ಭಾರತೀಯ ಸೇನೆ ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News