Viral Video: ಬಸ್ಸಿನಲ್ಲಿ ನಡೆದ ಜಗಳದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜೈಪುರದಲ್ಲಿ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಮೇಲೆ ಬಸ್ ಕಂಡಕ್ಟರ್ ಹಲ್ಲೆ ಮಾಡಿದ್ದಾರೆ.. ಈ ಘಟನೆ ಶುಕ್ರವಾರ ನಡೆದಿದೆ ಎಂದು ಹೇಳಲಾಗುತ್ತಿದೆ.. 75 ವರ್ಷದ ನಿವೃತ್ತ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯೊಬ್ಬರು ಬಸ್ ಹತ್ತಿ ರೂ. 10 ಹೆಚ್ಚುವರಿ ಶುಲ್ಕವನ್ನು ಪಾವತಿಸಲು ನಿರಾಕರಿಸಿದ್ದಾರೆ.. ಬಸ್ ಕಂಡಕ್ಟರ್ ವೃದ್ಧನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಸಂತ್ರಸ್ತ ಕೆಳಗಿಳಿಯಬೇಕಾದ ಬಸ್ ನಿಲ್ದಾಣ ಬಿಟ್ಟು ಮುಂದಿನ ನಿಲ್ದಾನಕ್ಕಿಳಿದಿದ್ದಾರೆ.. ಹಾಗಾಗಿ ಬಸ್ ಕಂಡಕ್ಟರ್ ಮುಂದಿನ ನಿಲ್ದಾಣದಲ್ಲಿ ಇಳಿಯಬೇಕಾದರೇ ಅದಕ್ಕೆ ರೂ. 10 ಹೆಚ್ಚುವರಿ ಟಿಕೆಟ್ ಚಾರ್ಜ್ ಆಗುತ್ತದೆ ಎಂದಿದ್ದಾರೆ. ಇದೇ ವೇಳೆ ಅವರ ನಡುವೆ ಜಗಳ ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ.
राजधानी मे #कंडक्टर ने #रिटायर्ड_IAS_अधिकारी के साथ की #मारपीट
ऐसे लोगो को प्रशासन, कानून के होने का अहसास करवाये!
ये वीडियो #जयपुर_शहर का बताया जा रहा है मामला कुछ भी हो लेकिन एक #बुजुर्ग_व्यक्ति के साथ इस तरह का व्यवहार बिल्कुल उचित नही था इस पर #तुरंत_संज्ञान_लेना_चाहिए। pic.twitter.com/3AjzcDyWR5— एक नजर (@1K_Nazar) January 11, 2025
ಇದನ್ನೂ ಓದಿ:ಮೂತ್ರದಲ್ಲಿ ನೊರೆ ಕಾಣಿಸಿಕೊಳ್ತಿದ್ಯಾ? ಇದು ಈ ಗಂಭೀರ ಕಾಯಿಲೆಯ ಸಂಕೇತವಾಗಿದೆ... ತಕ್ಷಣವೇ ವೈದ್ಯರ ಬಳಿ ಪರೀಕ್ಷಿಸಿ
ಕನೋಟಾ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಉದಯ್ ಸಿಂಗ್ ಮಾತನಾಡಿ, ನಿವೃತ್ತ ಅಧಿಕಾರಿ ಆರ್ಎಲ್ ಮೀನಾ ಅವರು ಆಗ್ರಾ ರಸ್ತೆಯಲ್ಲಿರುವ ಕನೋಟಾ ಬಸ್ ನಿಲ್ದಾಣದಲ್ಲಿ ಇಳಿಬೇಕಿತ್ತು.. ಆದರೆ ನಿರ್ವಾಹಕರು ನಿವೃತ್ತ ಅಧಿಕಾರಿಗೆ ಬಸ್ ಆ ನಿಲ್ದಾಣ ತಲುಪಿದೆ ಎಂದು ಹೇಳಲು ಮರೆತಿದ್ದಾರೆ. ಇದರೊಂದಿಗೆ ಬಸ್ ಮುಂದಿನ ನಿಲ್ದಾಣ ನೈಲಾಗೆ ತಲುಪಿತು.
ಇದನ್ನೂ ಓದಿ:ಮೂತ್ರದಲ್ಲಿ ನೊರೆ ಕಾಣಿಸಿಕೊಳ್ತಿದ್ಯಾ? ಇದು ಈ ಗಂಭೀರ ಕಾಯಿಲೆಯ ಸಂಕೇತವಾಗಿದೆ... ತಕ್ಷಣವೇ ವೈದ್ಯರ ಬಳಿ ಪರೀಕ್ಷಿಸಿ
ಈ ವೇಳೆ ಕಂಡಕ್ಟರ್ ನಿವೃತ್ತ ಅಧಿಕಾರಿಗೆ ಹೆಚ್ಚುವರಿ ಶುಲ್ಕ ಕೇಳಿದಾಗ ಅವರು ಹಣ ಕೊಡಲು ನಿರಾಕರಿಸಿದ್ದಾರೆ.. ಆಗ ಕಂಡಕ್ಟರ್ ವಯಸ್ಸಾಗಿದೆ ಎಂದೂ ನೋಡದೆ ಅಧಿಕಾರಿಯನ್ನು ತಳ್ಳಿದ್ದಾನೆ. ಇದರಿಂದ ಕೋಪಗೊಂಡ ವೃದ್ಧ ಕಂಡಕ್ಟರ್ ಕೆನ್ನೆಗೆ ಬಾರಿಸಿದ್ದಾರೆ. ಬಳಿಕ ಸಿಟ್ಟಿಗೆದ್ದ ಕಂಡಕ್ಟರ್ ಮುದುಕನ ಮೇಲೆ ಹಲ್ಲೆ ನಡೆಸಿ ತೀವ್ರವಾಗಿ ಥಳಿಸಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ. ಈ ವೈರಲ್ ವೀಡಿಯೊದಲ್ಲಿ, ಬಸ್ಸಿನಿಂದ ಇಳಿಯುವವರೆಗೂ ಹಲವಾರು ಪ್ರಯಾಣಿಕರು ನೋಡುತ್ತಿದ್ದರೂ ಕಂಡಕ್ಟರ್ ನಿವೃತ್ತ ಅಧಿಕಾರಿಯನ್ನು ಹೊಡೆಯುವುದನ್ನು ಮುಂದುವರೆಸಿದ್ದಾರೆ.. ಕಂಡಕ್ಟರ್ ಅನ್ನು ಘನಶ್ಯಾಮ್ ಶರ್ಮಾ ಎಂದು ಗುರುತಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ. ಶನಿವಾರ ಆ ನಿವೃತ್ತ ಅಧಿಕಾರಿಯ ಅವರ ದೂರಿನ ಮೇರೆಗೆ ಕಂಡಕ್ಟರ್ ವಿರುದ್ಧ ಕನೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ವಿಚಾರದಲ್ಲಿ ಕೂಲಂಕುಷ ತನಿಖೆ ನಡೆಯುತ್ತಿದೆ. ಜೈಪುರ ಸಿಟಿ ಟ್ರಾನ್ಸ್ಪೋರ್ಟ್ ಸರ್ವಿಸಸ್ ಲಿಮಿಟೆಡ್ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪಿ ಕಂಡಕ್ಟರ್ನನ್ನು ಅಮಾನತುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.