ಪುರುಷರು ಪ್ರತಿ ದಿನ ಬೆಳಿಗ್ಗೆ ಮೊಟ್ಟೆ ಸೇವಿಸಿದರೆ ಸಿಗಲಿದೆ ಇಷ್ಟೊಂದು ಪ್ರಯೋಜನ

ಬೇಸಿಗೆಯಲ್ಲಿ ಆರೋಗ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕಾದರೆ ಮೊಟ್ಟೆ ಸೇವನೆ ಬಹಳ ಮುಖ್ಯ. ದಿನಕೊಂದು ಮೊಟ್ಟೆ ತುಂಬುವುದು ಹೊಟ್ಟೆ ಎನ್ನುವ ಮಾತನ್ನು ಕೇಳಿರಬಹುದು.

Written by - Ranjitha R K | Last Updated : Apr 1, 2021, 09:53 AM IST
  • ಆರೋಗ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕಾದರೆ ಮೊಟ್ಟೆ ಸೇವನೆ ಮುಖ್ಯ
  • ಮೊಟ್ಟೆಯಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ
  • ಪ್ರತಿದಿನ ಬೆಳಿಗ್ಗೆ ಒಂದು ಮೊಟ್ಟೆಯನ್ನು ತಿನ್ನುವುದರಿಂದ ಪುರುಷರ ಶಕ್ತಿಯನ್ನು ಹೆಚ್ಚಿಸುತ್ತದೆ
ಪುರುಷರು ಪ್ರತಿ ದಿನ ಬೆಳಿಗ್ಗೆ ಮೊಟ್ಟೆ ಸೇವಿಸಿದರೆ ಸಿಗಲಿದೆ ಇಷ್ಟೊಂದು ಪ್ರಯೋಜನ  title=
ಮೊಟ್ಟೆಯಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ (file photo)

ನವದೆಹಲಿ : ಈಗಿನ ಬ್ಯುಸಿ ಲೈಫ್ ನಲ್ಲಿ ಯಾವುದಕ್ಕೂ ಸಮಯವಿರುವುದಿಲ್ಲ. ಹೀಗಾಗಿ ಎಷ್ಟೋ ಜನ ಆರೋಗ್ಯದ ಕಡೆ ಗಮನ ಹರಿಸುವುದೇ ಇಲ್ಲ. ಇದೀಗ ಬೇಸಿಗೆಯೂ (Summer) ಆರಂಭವಾಗಿದೆ. ಆರೋಗ್ಯದ (Health) ಬಗ್ಗೆ ಗಮನ ಹರಿಸಲೇ ಬೇಕು. ಆರೋಗ್ಯ ಕಾಪಾಡಿಕೊಳ್ಳುವ ವಿಚಾರ ಬಂದಾಗ ನಾವು ಸೇವಿಸುವ ಆಹಾರ (Food)ಮುಖ್ಯವಾಗಿರುತ್ತದೆ. ಯಾವ ಆಹಾರ ಸೇವಿಸಿದರೆ ಹೇಗೆ ಪ್ರಯೋಜನ ಎನ್ನುವುದನ್ನು ತಿಳಿದರೆ  ಅರ್ಧದಷ್ಟು ಸಮಸ್ಯೆ ಪರಿಹಾರವಾದಂತೆ. 

ಹೌದು, ಬೇಸಿಗೆಯಲ್ಲಿ (Summer) ಆರೋಗ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕಾದರೆ ಮೊಟ್ಟೆ ಸೇವನೆ ಬಹಳ ಮುಖ್ಯ. ದಿನಕೊಂದು ಮೊಟ್ಟೆ ತುಂಬುವುದು ಹೊಟ್ಟೆ ಎನ್ನುವ ಮಾತನ್ನು ಕೇಳಿರಬಹುದು. ದಿನಕ್ಕೊಂದು ಮೊಟ್ಟೆ (Egg) ಹೊಟ್ಟೆ ತುಂಬಿಸುವ ಜೊತೆಗೆ ಆರೋಗ್ಯ ಕಾಪಾಡುವಲ್ಲಿಯೂ ಬಹಳ ಮುಖ್ಯ ಪಾತ್ರ ವಹಿಸುತ್ತದೆ.  ಮೊಟ್ಟೆಯಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ, ಇದು ನಿಮ್ಮ ಆಹಾರವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಬೆಳಿಗ್ಗೆ ಮೊಟ್ಟೆ ತಿಂದರೆ, ಅನೇಕ ಪ್ರಯೋಜನಗಳು ಸಿಗುತ್ತವೆ.

ಇದನ್ನೂ ಓದಿ:   Pumpkin- ಕುಂಬಳಕಾಯಿಯನ್ನು ಈ ರೀತಿ ಬಳಸಿ ಸುಂದರ ತ್ವಚೆ, ಕೂದಲು ನಿಮ್ಮದಾಗಿಸಿ

ಪ್ರೋಟೀನ್ ನ್ ಮೂಲ ಮೊಟ್ಟೆ : 
ಮೊಟ್ಟೆಗಳಲ್ಲಿ ಸಾಕಷ್ಟು ಪ್ರೋಟೀನ್ (Protein) ಇದೆ. ನಾವು ಸೇವಿಸುವ ಆಹಾರದಿಂದ ಹೆಚ್ಚಿನ ಪ್ರಮಾಣದ ಅಮೈನೋ ಆಸಿಡ್ ಅನ್ನು ಪಡೆಯಬಹುದು. ಅದೇ ಒಂದು ಮೊಟ್ಟೆಯಿಂದ ಅಷ್ಟೇ ಪ್ರಮಾಣದ ಪ್ರೋಟೀನ್ ದೇಹ ಸೇರುತ್ತದೆ. ಪ್ರತಿದಿನ ಬೆಳಿಗ್ಗೆ ಎದ್ದು ಮೊಟ್ಟೆಯನ್ನು ತಿಂದರೆ, ದೇಹಕ್ಕೆ ಬೇಕಾಗುವ ಪ್ರೋಟಿನ್ ಸಿಗುತ್ತದೆ.   

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ : 
ಮೊಟ್ಟೆಯಲ್ಲಿ ಸೆಲೆನಿಯಮ್ ಎಂಬ ಅಂಶ ಕಂಡುಬರುತ್ತದೆ.  ಇದು ದೇಹದ ರೋಗ ನಿರೋಧಕ (Immunity)ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಮೊಟ್ಟೆಗಳಲ್ಲಿರುವ ಸೆಲೆನಿಯಮ್ ಸೋಂಕುಗಳ (Infection) ವಿರುದ್ಧ ಹೋರಾಡಲು ಕೂಡಾ  ಸಹಾಯ ಮಾಡುತ್ತದೆ. ಥೈರಾಯ್ಡ್ ಮತ್ತು ಹಾರ್ಮೋನುಗಳನ್ನು ನಿಯಂತ್ರಿಸುವಲ್ಲಿಯೂ ಮೊಟ್ಟೆ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಪ್ರತಿದಿನ ಬೆಳಿಗ್ಗೆ ಒಂದು ಮೊಟ್ಟೆಯನ್ನು ತಿನ್ನುವ ಸಲಹೆ ನೀಡುತ್ತಾರೆ ತಜ್ಞರು. 

ಇದನ್ನೂ ಓದಿ: Burps causes and remedies: ಹುಳಿ ತೇಗು ಬರುವುದಕ್ಕೆ ಕಾರಣ ಮತ್ತು ಅದಕ್ಕೆ ಪರಿಹಾರ ತಿಳಿದಿದೆಯಾ?

ಮಾನಸಿಕ ಆರೋಗ್ಯಕ್ಕೂ ಸಹಕಾರಿ  : 
ಓಡಾಟದ ಜೀವನಶೈಲಿಯಲ್ಲಿ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಸದೃಢತೆ ಕೂಡಾ ಅಷ್ಟೇ ಮುಖ್ಯ.  ಮೊಟ್ಟೆಯಲ್ಲಿರುವ  ಕೋಲಿನ್ ಎಂಬ ಪೋಷಕಾಂಶವು  ಮೆದುಳನ್ನು ಸದೃಢವಾಗಿಡಲು ಸಹಾಯ ಮಾಡುತ್ತದೆ.  ಪ್ರತಿದಿನ ಮೊಟ್ಟೆ ತಿನ್ನುವುದರಿಂದ ಮೆದುಳು (Brain) ತುಂಬಾ ತೀಕ್ಷ್ಣವಾಗುತ್ತದೆ. ಮೊಟ್ಟೆಗಳಲ್ಲಿರುವ ಒಮೆಗಾ 3, ವಿಟಮಿನ್ ಗಳು ಮತ್ತು ಫ್ಯಾಟಿ ಆಸಿಡ್ ಗಳು  ಮೆದುಳಿನ ಆರೋಗ್ಯಕ್ಕೆ ಬಹ ಮುಖ್ಯವಾಗಿದೆ. 

ಪುರುಷರ ದೇಹವನ್ನು ಸದೃಢವಾಗಿರಿಸುತ್ತದೆ : 
ವಿಶೇಷವಾಗಿ ಪುರುಷರು ಬೆಳಿಗ್ಗೆ ಮೊಟ್ಟೆ ಸೇವಿಸಲೇ ಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು. ಇರಿಂದ ಪುರುಷರಿಗೆ ಅನೇಕ ಪ್ರಯೋಜನಗಳು ಸಿಗಲಿವೆ.  ಮೊದಲೇ ಹೇಳಿದಂತೆ, ಮೊಟ್ಟೆಯಲ್ಲಿ ಪ್ರೋಟೀನ್ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಪ್ರತಿದಿನ ಬೆಳಿಗ್ಗೆ ಒಂದು ಮೊಟ್ಟೆಯನ್ನು ತಿನ್ನುವುದರಿಂದ ಪುರುಷರ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ಪುರುಷರು ಪ್ರತಿದಿನ ಬೆಳಿಗ್ಗೆ ಒಂದು ಮೊಟ್ಟೆ ತಿನ್ನಲು ಸಲಹೆ ನೀಡಲಾಗುತ್ತದೆ. 

ತೂಕವನ್ನು ಕಡಿಮೆ ಮಾಡಲು :
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ದೇಹ ತೂಕ ಬಹುತೇಕ ಎಲ್ಲರ ಸಮಸ್ಯೆಯಾಗಿದೆ. ದೇಹ ತೂಕ ಕಡಿಮೆ (weight loss) ಮಾಡಲು ಇಚ್ಛಿಸುವವರಿಗೆ ಮೊಟ್ಟೆ ಸುಲಭ ಪರಿಹಾರ. ದೇಹ ತೂಕ ಕಡಿಮೆ ಮಾಡಲು ಬಯಸುವವರು ಮೊಟ್ಟೆಯ ಹಳದಿ ಭಾಗವನ್ನು ತೆಗೆದು ಬಿಳಿ ಭಾಗವನ್ನಷ್ಟೇ ಸೇವಿಸಬೇಕು. ಇದು ದೇಹಕ್ಕೆ ಬೇಕಾಗುವ ಶಕ್ತಿಯನ್ನು ಒದಗಿಸುತ್ತದೆ. ದೇಹ ತೂಕವನ್ನು ಕೂಡಾ ಕಡಿಮೆ ಮಾಡುತ್ತದೆ. 

ಇದನ್ನೂ ಓದಿ: ಇಷ್ಟ ಪಟ್ಟು ಅಮ್ಲೆಟ್ ಚಪ್ಪರಿಸುವ ಮೊದಲು ಈ 10 ವಿಷಯ ತಿಳಿದುಕೊಳ್ಳಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News