ನವದೆಹಲಿ : ಭೂಮಿ (Earth) ಹೊರತು ಪಡಿಸಿ ಬೇರೆ ಗ್ರಹಗಳಲ್ಲಿ(Planets) ಜೀವಿಗಳಿರಲು ಸಾಧ್ಯವೇ ಎಂಬ ಸಂಶೋಧನೆಯನ್ನು ವಿಜ್ಞಾನಿಗಳು (Scientists) ದಿನರಾತ್ರಿ ಮಾಡುತ್ತಿದ್ಧಾರೆ. ಚಂದ್ರಮನಿಂದ ಹಿಡಿದು ಮಂಗಳನ ತನಕ ಸಂಶೋಧನೆಯಾಗಿದೆ. ಈ ವೇಳೆ ಕೆಲವೊಂದು ವಿಚಾರಗಳೂ ಗೊತ್ತಾಗಿದೆ. ಇಲ್ಲಿ ಜೀವಿಗಳಿರಲು ಸಾಧ್ಯವಿದೆ ಎಂಬ ನಿಷ್ಕರ್ಷಕ್ಕೂ ಬಂದಿದ್ದಾರೆ. ಇದಾದ ಮೇಲೆ ಬೆಳ್ಳಿಯಂತೆ ಮಿಂಚುವ ಶುಕ್ರಗ್ರಹದ ಸಂಶೋಧನೆಗೆ ವಿಜ್ಞಾನಿಗಳು ಮುಂದಾಗಿದ್ದಾರೆ. ಆಗ ಫೋಸ್ ಫೈನ್ (Phosphine) ಎಂಬ ಅನಿಲ ಸಿಕ್ಕಿದೆ. ಇದರಿಂದ ಶುಕ್ರಗ್ರಹದಲ್ಲಿ ಜೀವಿಗಳಿರಬಹುದೇ ಎಂಬ ಚರ್ಚೆ ಹೊಸ ತಿರುವು ಪಡೆದಿದೆ. ಇವೆಲ್ಲಾ ಆದ ಮೇಲೆ ಹೊಸ ಅಧ್ಯಯನವೊಂದು ಹೊರ ಬಂದಿದೆ. ಅದರ ಪ್ರಕಾರ ಶುಕ್ರ ಗ್ರಹದಲ್ಲಿ (Venus) ಜೀವಿಗಳಿರುವುದು ಸಾಧ್ಯವೇ ಇಲ್ಲ. ಹಾಗಾಗಿ, ವಿಜ್ಞಾನಿಗಳು ಮತ್ತೆ ತಲೆಕೆಡಿಸಿಕೊಂಡಿದ್ದಾರೆ.
ಶುಕ್ರಗ್ರಹದಲ್ಲಿ ಸಿಕ್ಕಿದ್ದು ಫಾಸ್ಪೈನ್ ಅಲ್ಲ.:
ಶುಕ್ರಗ್ರಹದಲ್ಲಿ ಸಿಕ್ಕಿದ್ದು ಫಾಸ್ಪೈನ್ ಎಂಬುದು ವಿಜ್ಞಾನಿಗಳ ತರ್ಕವಾಗಿತ್ತು. ಸಿಯಾಟೆಲ್ ನ ವಾಷಿಂಗ್ಟನ್ ವಿವಿಯ ಅಸ್ಟ್ರೋ ಬಯಾಲಾಜಿಸ್ಟ್ ವಿಕ್ಟೋರಿಯಾ ಮೆಡೋಸ್ ಪ್ರಕಾರ, ಟೆಲಿಸ್ಕೋಪಿಕ್ ಅಧ್ಯಯನದ ಬಳಿಕ ಸಿಕ್ಕಿದ್ದು ಫಾಸ್ಪೈನ್ ಎಂದೇ ಹೇಳಲಾಗಿತ್ತು. ಅದನ್ನು ಇನ್ನಷ್ಟು ಅಧ್ಯಯನಕ್ಕೆ ಒಳಪಡಿಸಿದಾಗ ಅದು ಫಾಸ್ಪೈನ್ ಅಲ್ಲ, ಸಲ್ಫರ್ ಡೈಆಕ್ಸೈಡ್ (sulphur dioxide) ಎಂದು ಹೇಳಲಾಗುತ್ತದೆ. ಹಾಗಾಗಿ, ಶುಕ್ರನಲ್ಲಿ (Venus) ಜೀವನ ಸಾಧ್ಯವೇ ಇಲ್ಲ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : Dinosaur On Moon: ಮಾನವನಿಗಿಂತ ಮೊದಲು ಚಂದ್ರನ ಅಂಗಳಕ್ಕೆ ತಲುಪಿದ ಡೈನೋಸಾರ್ ಗಳು
ತಪ್ಪಾಯಿತು ಮೊದಲ ಅಧ್ಯಯನ :
ಮೊದಲು ALMA (Atacama Large Millimeter/submillimeter Array) ಶುಕ್ರನ ಅಧ್ಯಯನ ಮಾಡಿತ್ತು. ಅದು ಸಂಗ್ರಹಿಸಿದ ಡೇಟಾಗಳ ಆಧಾರದ ಮೇಲೆ ಶುಕ್ರನಲ್ಲಿ ಫಾಸ್ಪೈನ್ (Phosphine) ಇದೆ ಎಂದು ಹೇಳಲಾಗಿತ್ತು. ಆದರೆ, ಅದರ ಬಳಿಕ ಮತ್ತೊಂದು ಸ್ಟಡಿ ನಡೆಯಿತು. ಅದರಲ್ಲಿ ಮೊದಲಿಗೆ ಫಾಸ್ಪೈನ್ ಕಡಿಮೆ ಪ್ರಮಾಣದಲ್ಲಿ ದೊರೆಯಿತು. ಎರಡನೇ ಸ್ಟಡಿ ಕೈಗೊಂಡಾಗ ಫಾಸ್ಪೈನ್ ಸಿಗಲೇ ಇಲ್ಲ. ಹಾಗಾಗಿ ಮೊದಲ ಅಧ್ಯಯನದ ನಿಷ್ಕರ್ಷ ತಪ್ಪು ಎಂದು ಹೇಳಲಾಗಿದೆ.
ಈಗಿನ ಆಧ್ಯಯನದಲ್ಲಿ ಗೊತ್ತಾಗಿದ್ದು ಏನೆಂದರೆ ಶುಕ್ರನಲ್ಲಿ ಇರುವುದು ಸಲ್ಫರ್ ಡೈ ಆಕ್ಸೈಡ್. ಹಾಗಾಗಿ, ಈ ವಾತಾವರಣದಲ್ಲಿ ಜೀವಿ ಇರಲು ಸಾಧ್ಯವೇ ಇಲ್ಲ ಎಂಬ ತರ್ಕ ಮಾಡಲಾಗಿದೆ. ಭೂಮಿ (Earth) ಮೇಲೆ ಯಾವ ಜೀವಿಗೆ ಆಮ್ಲಜನಕ (Oxygen) ಬೇಡವೋ ಅವುಗಳಿಂದ ಫಾಸ್ಪೈನ್ ಉಂಟಾಗುತ್ತದೆ. ಪ್ರಯೋಗಶಾಲೆಯಲ್ಲೂ ಈ ಅನಿಲವನ್ನು ಉತ್ಪಾದಿಸಬಹುದು. ಹಾಗಾಗಿ ಶುಕ್ರನಲ್ಲಿ ಜೀವಿಗಳಿರಬಹುದು ಎಂಬ ಆಶಾವಾದ ಉಂಟಾಗಿತ್ತು.
ಇದನ್ನೂ ಓದಿ : Viral Video: ಬ್ರಹ್ಮಾಂಡದ ಧ್ವನಿ ಎಂದಾದರು ಕೇಳಿದ್ದೀರಾ? ಈ ವಿಡಿಯೋ ವೀಕ್ಷಿಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.