Shraddha Srinath : ಬಾಯ್‌ಫ್ರೆಂಡ್‌ಗಾಗಿ ಹೃದಯದ ಮೇಲೆ ಟ್ಯಾಟೂ..! ಲವ್‌ ಸ್ಟೋರಿ ಬಿಚ್ಚಿಟ್ಟ ಶ್ರದ್ಧಾ ಶ್ರೀನಾಥ್

Shraddha Srinath boyfriend : ಯು ಟರ್ನ್‌ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಟಿ ಶ್ರದ್ಧಾ ಶ್ರೀನಾಥ್‌, ಸದ್ಯ ಟಾಲಿವುಡ್‌, ಕಾಲಿವುಡ್‌ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಧ್ಯ ತೆಲುಗು ಸ್ಟಾರ್‌ ನಟ ವೆಂಕಟೇಶ್ ದಗ್ಗುಬಾಟಿ ನಟನೆಯ ʼಸೈಂಧವ್ʼ ಚಿತ್ರದ ಮೂಲಕ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ಈ ಚಿತ್ರದ ಪ್ರಚಾರದ ವೇಳೆ, ಶ್ರದ್ಧಾ, ತನ್ನ ಹೃದಯದ ಮೇಲಿನ ಟ್ಯಾಟೂ ಬಗ್ಗೆ ಆಸಕ್ತಿದಾಯಕ ವಿಷಯವನ್ನು ಬಹಿರಂಗಪಡಿಸಿದ್ದಾರೆ.

Written by - Krishna N K | Last Updated : Jan 4, 2024, 12:53 PM IST
  • ಯು ಟರ್ನ್‌ ಸಿನಿಮಾದ ಮೂಲಕ ಶ್ರದ್ಧಾ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು.
  • ಜರ್ಸಿ ಸಿನಿಮಾದ ಮೂಲಕ ತೆಲುಗು ಇಂಡಸ್ಟ್ರಿಯಲ್ಲಿ ಸೂಪರ್ ಕ್ರೇಜ್ ಗಿಟ್ಟಿಸಿಕೊಂಡರು.
  • ʼಸೈಂಧವ್ʼ ಚಿತ್ರದ ಮೂಲಕ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ.
Shraddha Srinath : ಬಾಯ್‌ಫ್ರೆಂಡ್‌ಗಾಗಿ ಹೃದಯದ ಮೇಲೆ ಟ್ಯಾಟೂ..! ಲವ್‌ ಸ್ಟೋರಿ ಬಿಚ್ಚಿಟ್ಟ ಶ್ರದ್ಧಾ ಶ್ರೀನಾಥ್ title=

Shraddha Srinath tattoo : ಕನ್ನಡದ ಚೆಲುವೆ ಶ್ರದ್ಧಾ ಶ್ರೀನಾಥ್, ಸೌಂದರ್ಯ ಮತ್ತು ನಟನಯ ಮೂಲ ಸೌತ್‌ ಸಿನಿರಂಗದಲ್ಲಿ ಕ್ರೇಜ್‌ ಗಿಟ್ಟಿಸಿಕೊಂಡಿದ್ದಾರೆ. ನಾನಿ ನಟನೆಯ ಜರ್ಸಿ ಸಿನಿಮಾದ ಮೂಲಕ ತೆಲುಗು ಇಂಡಸ್ಟ್ರಿಯಲ್ಲಿ ಸೂಪರ್ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ ಈ ಬ್ಯೂಟಿ. ತನಗೆ ಇಷ್ಟವಾಗುವ ಸ್ಕ್ರಿಪ್ಟ್ ಗಳನ್ನು ನೋಡುತ್ತಾ ತುಂಬಾ ಸೆಲೆಕ್ಟಿವ್ ಆಗಿ ಸಿನಿಮಾ ಮಾಡುತ್ತಿರುವ ಶ್ರದ್ಧಾ, ಲಾಂಗ್ ಗ್ಯಾಪ್ ನಂತರ ಸಂಕ್ರಾತಿಗೆ ಸೈಂಧವ ಚಿತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ವೆಂಕಟೇಶ್ ಮತ್ತು ಶೈಲೇಶ್ ಕಾಂಬೋದಲ್ಲಿ ಬರುತ್ತಿರುವ ಈ ಚಿತ್ರ ಜನವರಿ 13 ರಂದು ಬಿಡುಗಡೆಯಾಗಲಿದೆ. ತಂದೆ ಮತ್ತು ಮಗಳ ಭಾವನಾತ್ಮಕ ಟ್ರ್ಯಾಕ್ ಹೊಂದಿರುವ ಈ ಚಿತ್ರದಲ್ಲಿ ವೆಂಕಟೇಶ್‌ ಮತ್ತೊಮ್ಮೆ ಕುಟುಂಬ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಮತ್ತೊಂದೆಡೆ, ಬಹುದಿನಗಳ ಗ್ಯಾಪ್ ನಂತರ ಈ ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 

ಇದನ್ನೂ ಓದಿ: BBK 10: ಬಿಗ್‌ಬಾಸ್ ಮನೆಯಲ್ಲಿ ಗಂಡಸರದ್ದೇ ದರ್ಬಾರ್‌..! ಮಹಿಳೆಯರಿಗೆ ಸಿಕ್ತಿಲ್ವಾ ಅವಕಾಶ?

ಈ ಚಿತ್ರದ ಪ್ರಚಾರದಲ್ಲಿ ಭಾಗವಹಿಸಿದ್ದ ಶ್ರದ್ಧಾ ಶ್ರೀನಾಥ್ ಅವರು ತಾವು ಮಾಡುವ ಆಯ್ದ ಸಿನಿಮಾಗಳ ಬಗ್ಗೆ ಮತ್ತು ತಮ್ಮ ಕೈಯಲ್ಲಿರುವ ಟ್ಯಾಟೂ ಬಗ್ಗೆ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಸಿನಿಮಾ ಮಾಡಬೇಕು.. ಒಳ್ಳೆಯ ಹಣ ಗಳಿಸಬೇಕು ಎಂಬ ಉದ್ದೇಶದಿಂದ ಇಂಡಸ್ಟ್ರಿಗೆ ಬಂದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಅಲ್ಲದೆ, ನಟಿಯಾಗಿ ತನ್ನನ್ನು ತಾನು ಸಾಬೀತುಪಡಿಸುವ ಸ್ಕೋಪ್ ಇರುವ ಪಾತ್ರಗಳನ್ನೇ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಮೇಲಾಗಿ ಲವ್ ಟ್ರ್ಯಾಕ್ ಜೊತೆಗೆ ಬ್ರೇಕಪ್ ನಂತಹ ಕಾನ್ಸೆಪ್ಟ್ ಇರುವ ಸಿನಿಮಾಗಳನ್ನು ಇಷ್ಟಪಡುತ್ತೇನೆ ಎಂದು ಹೇಳಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. 

ಇದನ್ನೂ ಓದಿ:ಆಮಿರ್ ಖಾನ್​ ಮನೆಯಲ್ಲಿ ಮದುವೆ ಸಂಭ್ರಮ : ಇರಾ ಖಾನ್​ ಮದುವೆ ಶಾಸ್ತ್ರಗಳ ಫೋಟೋ ವೈರಲ್​

ಹೃದಯದ ಮೇಲಿರುವ ಟ್ಯಾಟೂ ಬಗ್ಗೆ ಕೇಳಿದಾಗ ಶ್ರದ್ಧಾ ಶ್ರೀನಾಥ್ ಶಾಕ್ ಆದರು. ಇದರ ಹಿಂದಿನ ಅಸಲಿ ಕಥೆಯನ್ನು ಹೇಳುತ್ತಾ, ನಾನು 18ನೇ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದೆ, ಅದರ ನೆನಪಿನಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ನಾನು ಹಾಕಿಸಿಕೊಂಡಿರುವ ಟ್ಯಾಟೂ 'ದಿ ಬೀಟಲ್ಸ್ ಎಂಬ ಬ್ರ್ಯಾಂಡ್‌ನ ಚಿಹ್ನೆ. ಇದರ ಅರ್ಥ ಪ್ರೀತಿ. ನಾನು 18 ವರ್ಷದವನಾಗಿದ್ದಾಗ ಒಬ್ಬ ಹುಡುಗನನ್ನ ಇಷ್ಟ ಪಟ್ಟಿದ್ದೆ. ಅವರು ನನಗೆ ಬೀಟಲ್ಸ್‌ ಪರಿಚಯಿಸಿದರು. ಆ ಎರಡು ಆಸೆಯಿಂದ ಈ ಟ್ಯಾಟೂ ಹಾಕಿಸಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News