ಗಗನಕ್ಕೇರಿದ ಅಡುಗೆ ಎಣ್ಣೆ ಬೆಲೆ!ಒಂದೇ ಬಾರಿಗೆ 25 ರೂ.ಹೆಚ್ಚಳ ! ಯಾವ ಎಣ್ಣೆಗೆ ಎಷ್ಟು ರೇಟ್ ಚೆಕ್ ಮಾಡಿಕೊಳ್ಳಿ !

ಪೆಟ್ರೋಲ್, ಡಿಸೇಲ್ ನಂತರ ಇದೀಗ ಜನತೆಗೆ ಅಡುಗೆ ಎಣ್ಣೆ ದರ ಏರಿಕೆ ಶಾಕ್ ಸಿಕ್ಕಿದೆ. ಹಬ್ಬಗಳ ನಡುವೆಯೇ ಅಡುಗೆ ಎಣ್ಣೆ ದರ ಗಗನಕ್ಕೇರಿದೆ.   

Written by - Ranjitha R K | Last Updated : Sep 20, 2024, 09:48 AM IST
  • ಸಾಲು ಸಾಲು ಹಬ್ಬಗಳು ಮುಂದಿವೆ.
  • ಮನೆ ಮಹಿಳೆಯರಿಗೆ ಭಾರೀ ಶಾಕ್ ಸಿಕ್ಕಿದೆ.
  • ಅಡುಗೆ ಎಣ್ಣೆ ದರ ಏರಿಕೆ ಮಾಡಿ ಸರ್ಕಾರ ಆದೇಶ
 ಗಗನಕ್ಕೇರಿದ ಅಡುಗೆ ಎಣ್ಣೆ ಬೆಲೆ!ಒಂದೇ ಬಾರಿಗೆ 25 ರೂ.ಹೆಚ್ಚಳ ! ಯಾವ ಎಣ್ಣೆಗೆ ಎಷ್ಟು ರೇಟ್ ಚೆಕ್ ಮಾಡಿಕೊಳ್ಳಿ !  title=

ಬೆಂಗಳೂರು : ಸಾಲು ಸಾಲು ಹಬ್ಬಗಳು ಮುಂದಿವೆ. ದಸರಾ, ದೀಪಾವಳಿ ಹೀಗೆ ಹಬದ ಸಂಭ್ರಮದಲ್ಲಿರುವ ಮನೆ ಮಹಿಳೆಯರಿಗೆ ಭಾರೀ ಶಾಕ್ ಸಿಕ್ಕಿದೆ.ಅಡುಗೆ ಎಣ್ಣೆ ದರ ಏರಿಕೆ ಮಾಡಿ ಆದೇಶ ಹೊರಬಿದ್ದಿದೆ. ರಾಜ್ಯದಲ್ಲಿ ಒಂದಾದ ಮೇಲೊಂದರಂತೆ ಜನರಿಗೆ  ಬೆಲೆ ಏರಿಕೆ ಶಾಕ್ ಸಿಗುತ್ತಿದೆ.  

ಕಳೆದೊಂದು ವಾರದಿಂದ ಹಾವು ಏಣಿಯಾಟ ನಡೆಸಿದ್ದ ಅಡುಗೆ ಎಣ್ಣೆ ದರ ಈಗ ದಿಢೀರ್ ಆಗಿ ಗಗನಕ್ಕೇರಿದೆ.  ಪಾಮ್ ಆಯಿಲ್,ಸೋಯಾಬಿನ್ ಎಣ್ಣೆ ಹಾಗೂ ಸೂರ್ಯಕಾಂತಿ ರಿಫೈಂಡ್ ಆಯಿಲ್ ದರ ಹೆಚ್ಚಳ ಮಡಿ ಆದೇಶ ಹೊರಡಿಸಲಾಗಿದೆ. ಈ ರೀತಿ ಅಡುಗೆ ಎಣ್ಣೆ ದರವನ್ನು ಇಷ್ಟು ದುಬಾರಿ ಮಟ್ಟಕ್ಕೆ ಈರಿಸಿರುವ ಬಗ್ಗೆ ಗ್ರಾಹಕರು ಹಾಗೂ ಹೋಟೆಲ್‌ ಉದ್ಯಮಿಗಳು  ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ :   ಮಕ್ಕಳಿಗೆ 18 ವರ್ಷವಾಗುವಾಗ ಹೆತ್ತವರ ಕೈ ಸೇರುವುದು 78 ಲಕ್ಷ ರೂಪಾಯಿ!ಸರ್ಕಾರದ ಈ ಯೋಜನೆಗೆ ಇಂದೇ ನೋಂದಾಯಿಸಿಕೊಳ್ಳಿ

ಮೊದಲು ಪೆಟ್ರೋಲ್‌, ಡೀಸೆಲ್‌ ಈಗ ಈಗ ಅಡುಗೆ ಎಣ್ಣೆಯ ಬೆಲೆಯನ್ನು ಕೂಡಾ ದಿಢೀರ್ ಏರಿಸಲಾಗಿದೆ. ದಸರಾ, ದೀಪಾವಳಿ ಸೇರಿ ಸರಣಿ ಹಬ್ಬಗಳ ಸಂಭ್ರಮದಲ್ಲಿದ್ದ ಜನತೆ ಈ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ.ಅಡುಗೆ ಎಣ್ಣೆ ದರವನ್ನು ಲೀಟರ್ ಗೆ 20ರಿಂದ 25 ರೂ.ಗೆ ಏರಿಕೆ
ಮಾಡಲಾಗಿದೆ. 

ಅಡುಗೆ ಎಣ್ಣೆಯು ಈಗಾಗಲೇ ಜಿಎಸ್‌ಟಿ ವ್ಯಾಪ್ತಿಗೆ ಸೇರಿದೆ.ಅಡುಗೆ ಎಣ್ಣೆಗೆ ಹೆಚ್ಚುವರಿಯಾಗಿ ಶೇ. 20ರಷ್ಟು ಇಂಪೋರ್ಟ್ ಡ್ಯೂಟಿ ಟ್ಯಾಕ್ಸ್ ಹೆಚ್ಚಳ ಮಾಡಲಾಗಿದೆ.ಈ ಹಿನ್ನೆಲೆಯಲ್ಲಿ ಮುಂದಿನ ದಿನ ಅಡುಗೆ ಎಣ್ಣೆ ದರ ಇನ್ನ ಹೆಚ್ಚಾಗುತ್ತಾ ಅನ್ನೋ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ. 

ಇದನ್ನೂ ಓದಿ :    ವಿತ್ತ ಸಚಿವರ ಅದೊಂದು ಘೋಷಣೆ !ಪಾತಾಳಕ್ಕಿಳಿದ ಚಿನ್ನ, ಖರೀದಿಗೆ ಮುಗಿ ಬಿದ್ದ ಜನ !ಇಂದಿನ ಬೆಲೆ ಎಷ್ಟಿದೆ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News