ಚಾಮರಾಜನಗರ: ಪಿಂಚಣಿ ಕೊಡಿಸುವುದಾಗಿ ನೂರಾರು ಮಂದಿ ವೃದ್ಧರಿಗೆ ದಂಪತಿ ವಂಚಿಸಿರುವ ಆರೋಪ ಹನೂರಲ್ಲಿ ಕೇಳಿಬಂದಿದೆ.
2022 ರ ಕೊರೊನಾ ಸಮಯದಲ್ಲಿ ಹನೂರು ತಾಲೂಕಿನ ಗುಂಡಾಪುರ,ಗಂಗನದೊಡ್ಡಿ ಬಸಪ್ಪನದೊಡ್ಡಿ, ಮಂಚಾಪುರ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ಮಂದಿ ಹಿರಿಯ ನಾಗರಿಕರು, ವಿಧವೆಯರು, ವಿಶೇಷ ಚೇತನರಿಗೆ ಸರ್ಕಾರಿ ಯೋಜನೆಯ ಪಿಂಚಣಿ ಸೌಲಭ್ಯ ಕಲ್ಪಿಸುವುದಾಗಿ ಹಣ ಪಡೆದು, ನಕಲಿ ಆದೇಶ ಪತ್ರಗಳನ್ನು ನೀಡಲಾಗಿದೆ ಎಂದು ರೈತ ಮುಖಂಡ ಅಮ್ಜದ್ ಖಾನ್ ನೇತೃತ್ವದಲ್ಲಿ ವೃದ್ಧರು ಹನೂರು ತಹಸಿಲ್ದಾರ್ ಗೆ ದೂರು ಕೊಟ್ಟಿದ್ದಾರೆ.
ಇದನ್ನೂ ಓದಿ- ಮನೆ ಗೋಡೆ ಕೊರೆದು ಅಕ್ರಮ ಮದ್ಯ ಸಂಗ್ರಹ: ದಾಳಿ ವೇಳೆ ಅಕ್ರಮ ಬಯಲು
2022 ರ ಕೊರೊನಾ ಸಂದರ್ಭದಲ್ಲಿ ಶಾರದಾ ಮತ್ತು ಪುಟ್ಟೇಗೌಡ ಎಂಬ ದಂಪತಿ ಅಂಬಿಕಾಪುರದ ತೋಟದ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದರು. ಆ ವೇಳೆ, ವಿವಿಧ ಗ್ರಾಮಗಳ ವೃದ್ಧರು, ಮಹಿಳೆಯರಿಗೆ ಪಿಂಚಣಿ ಕೊಡಿಸುವುದಾಗಿ ಸಾವಿರಾರು ಹಣ ಪಡೆದುಕೊಂಡಿದ್ದಾರೆ. ಬಳಿಕ, 2023 ರಲ್ಲಿ ನಕಲಿ ಆದೇಶ ಪತ್ರಗಳನ್ನು ವಿತರಣೆ ಮಾಡಿದ್ದು ಇಷ್ಟು ದಿನಗಳಾದರೂ ಪಿಂಚಣಿ ಹಣ ಬರುತ್ತಿಲ್ಲವೆಂದು ಈಗ ವಿಚಾರಿಸಿದಾಗ ನಕಲಿ ಆದೇಶ ಪತ್ರಗಳು ಎಂಬುದು ಬಯಲಾಗಿದೆ.
ಹನೂರು ತಹಸಿಲ್ದಾರ್ ಗುರುಪ್ರಸಾದ್ ಗೆ ವಿವಿಧ ಗ್ರಾಮದ ವಯೋವೃದ್ಧರು, ತಮ್ಮ ಅಳಲು ತೋಡಿಕೊಂಡು ಸೂಕ್ತ ಕ್ರಮ ಕೈಗೊಳ್ಳಿ ಎಂದು ದೂರಿದ್ದಾರೆ. ವಂಚನೆಗೊಳಗಾದ ವೃದ್ಧರು, ವಿಧವೆಯರಿಗೆ ಸರ್ಕಾರಿ ಕಚೇರಿಯಲ್ಲಿ ಅರ್ಜಿಗಳನ್ನು ಸಲ್ಲಿಸಿ ಬಳಿಕ ಪರಿಶೀಲಿಸಿ ಪಿಂಚಣಿ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸುವುದಾಗಿ ಭರವಸೆ ಕೊಟ್ಟು ಕಳುಹಿಸಿದ್ದಾರೆ.
ಇದನ್ನೂ ಓದಿ- ಮಾದಪ್ಪನ ಬೆಟ್ಟದಲ್ಲಿ ಅಕ್ರಮ ಮದ್ಯ ಮಾರಾಟ: ಮಾಹಿತಿ ಕೊಡದ ಇಬ್ಬರು ಹೆಡ್ ಕಾನ್ಸ್ಟೇಬಲ್ ಸಸ್ಪೆಂಡ್
ಏನು ತಿಳಿಯದ ಮುಗ್ಧ ಜನತೆಗೆ ದಂಪತಿ ವಂಚಿಸಿ ನೂರಾರು ಜನರಿಗೆ ಪಿಂಚಣಿ ಸೌಲಭ್ಯ ಕಲ್ಪಿಸುವುದಾಗಿ ಬೆಂಗಳೂರು ವಿಳಾಸವಿರುವ ನಕಲಿ ಆದೇಶ ಪ್ರತಿಗಳನ್ನು ನೀಡುವ ಮೂಲಕ ವಂಚನೆ ಮಾಡಿದ್ದಾರೆ. ಇಬ್ಬರ ಮೇಲೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡ ಅಮ್ಜದ್ ಖಾನ್ ಒತ್ತಾಯಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.