Brinjal side effects : ಈ ರೋಗಗಳಿಂದ ಬಳಲುತ್ತಿರುವವರು ಎಂದಿಗೂ ಬದನೆ ಕಾಯಿಯನ್ನು ತಿನ್ನಬಾರದು. ಒಂದು ವೇಳೆ ತಿಂದರೆ ಅವರು ಗಂಭೀರ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ಈ ಐದು ಸಮಸ್ಯೆಯಿಂದ ಬಳಲುತ್ತಿರುವವರು ಎಂದಿಗೂ ಬದನೆಕಾಯಿ ತಿನ್ನುವ ತಪ್ಪನ್ನು ಮಾಡಬೇಡಿ.. ಹೆಚ್ಚಿನ ಮಾಹಿತಿ ಇಲ್ಲಿದೆ..
ಬದನೆ ಅನೇಕ ಜನರು ಇಷ್ಟಪಡುವ ತರಕಾರಿಗಳಲ್ಲಿ ಒಂದು. ಆದರೆ ಬದನೆ ಕೆಲವು ಜನರಿಗೆ ವಿಷದಷ್ಟೇ ಹಾನಿಕಾರಕ ಅಂತ ಕೆಲವರಿಗೆ ಗೊತ್ತಿಲ್ಲ.. ಈ ಕೆಳಗೆ ನೀಡಿರುವ ಐದು ಸಮಸ್ಯೆಗಳಿರುವ ಜನರು ಎಂದಿಗೂ ಬದನೆಯನ್ನು ತಿನ್ನಬಾರದು.. ಏಕೆಂದರೆ ಬದನೆ ತಿನ್ನುವುದರಿಂದ ಅವರಿಗೆ ಗಂಭೀರ ಹಾನಿಯಾಗುತ್ತದೆ.
ಜೀರ್ಣಕ್ರಿಯೆ ಸಮಸ್ಯೆ : ಗ್ಯಾಸ್, ಅಜೀರ್ಣದಂತಹ ಜೀರ್ಣಕಾರಿ ಸಮಸ್ಯೆ ಇರುವವರು ಬದನೆ ತಿನ್ನಬಾರದು. ಇಂತಹ ಪರಿಸ್ಥಿತಿಯಲ್ಲಿ ಬದನೆಕಾಯಿಯನ್ನು ತಿನ್ನುವುದರಿಂದ ಜೀರ್ಣಕ್ರಿಯೆಯ ತೊಂದರೆಗಳು ಹೆಚ್ಚಾಗಬಹುದು. ಆದ್ದರಿಂದ ಕಳಪೆ ಜೀರ್ಣಕ್ರಿಯೆ ಅಥವಾ ಗ್ಯಾಸ್ ಇಲ್ಲವೆ ಆಮ್ಲೀಯತೆ ಹೊಂದಿರುವ ಜನರು ಈ ತರಕಾರಿಯನ್ನ ತಿನ್ನಬೇಡಿ..
ರಕ್ತಹೀನತೆ : ರಕ್ತದ ಕೊರತೆಯಿಂದ ಬಳಲುತ್ತಿರುವವರು ಅಂದರೆ ರಕ್ತಹೀನತೆಯಿಂದ ಬಳಲುತ್ತಿರುವವರು ಬದನೆಕಾಯಿಯನ್ನು ತ್ಯಜಿಸಬೇಕು. ಆರೋಗ್ಯ ತಜ್ಞರ ಪ್ರಕಾರ, ಬದನೆಕಾಯಿ ದೇಹದಲ್ಲಿ ಕಬ್ಬಿಣಾಂಶವನ್ನು ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುವ ಅಂಶಗಳನ್ನು ಒಳಗೊಂಡಿದೆ. ಇದರಿಂದಾಗಿ ರಕ್ತದ ಕೊರತೆ ಇನ್ನಷ್ಟು ಗಂಭೀರವಾಗಬಹುದು.
ಕಿಡ್ನಿಯಲ್ಲಿ ಕಲ್ಲು : ಮೂತ್ರಪಿಂಡದ ಕಾಯಿಲೆ ಅಥವಾ ಕಲ್ಲು ಇರುವವರು ಬದನೆ ತಿನ್ನುವುದನ್ನು ತಪ್ಪಿಸಬೇಕು. ಬದನೆಕಾಯಿಯಲ್ಲಿ ಆಕ್ಸಲೈಟ್ ಎಂಬ ಅಂಶವಿದೆ. ಕಿಡ್ನಿ ಕಲ್ಲುಗಳು ಮತ್ತು ಕಲ್ಲುಗಳ ರಚನೆಗೆ ಇದು ಮುಖ್ಯ ಕಾರಣ. ಕಲ್ಲಿನ ಸಮಸ್ಯೆ ಇರುವವರು ಬದನೆಕಾಯಿಯನ್ನು ತಮ್ಮ ಆಹಾರದಿಂದ ದೂರವಿಡಬೇಕು.
ಕೀಲು ನೋವು : ಕೀಲು ನೋವಿನ ಸಮಸ್ಯೆ ಇರುವವರು ಬದನೆಯನ್ನು ಸೇವಿಸಬಾರದು. ಆರೋಗ್ಯ ತಜ್ಞರ ಪ್ರಕಾರ, ಬದನೆಯಲ್ಲಿ ಸೋಲಾನಿಲ್ ಎಂಬ ಅಂಶವಿದೆ. ಈ ಕಾರಣದಿಂದಾಗಿ, ದೇಹದ ಊತ ಮತ್ತು ಕೀಲು ನೋವು ಹೆಚ್ಚಾಗಬಹುದು.
ಅಲರ್ಜಿಗಳು : ಅನೇಕ ಸಂದರ್ಭಗಳಲ್ಲಿ, ಬದನೆಯನ್ನು ತಿನ್ನುವುದು ಅಲರ್ಜಿಗೆ ಕಾರಣವಾಗುತ್ತದೆ. ಬದನೆ ತಿಂದ ನಂತರ ಇದು ಅನುಭವಕ್ಕೆ ಬರುತ್ತದೆ. ಇಂತಹ ವೇಳೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಮತ್ತು ನಂತರ ಬದನೆ ತಿನ್ನುವುದನ್ನು ನಿಲ್ಲಿಸಿ.
(ಹಕ್ಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. Zee Kannada News ಇದನ್ನು ಅನುಮೋದಿಸುವುದಿಲ್ಲ.)