ಜೈಪುರ: ವ್ಯಕ್ತಿಯೋಬ್ಬನು ತನ್ನ ಇಬ್ಬರು ಹೆಂಡತಿಯರು ತಾಯಿಯನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎನ್ನುವ ಕಾರಣಕ್ಕಾಗಿ ಇಬ್ಬರನ್ನು ಕಾರಿನ ಒಳಗೆ ತಳ್ಳಿ ಬೆಂಕಿ ಹಚ್ಚಿ ಸಾಯಿಸಿರುವ ಆಘಾತಕಾರಿ ಘಟನೆ ರಾಜಸ್ತಾನದಲ್ಲಿ ನಡೆದಿದೆ.
ಆರೋಪಿ ದೀಪಾ ರಾಮ್ ನಿನ್ನೆ ತನ್ನ ಹೆಂಡತಿಯರಾದ ಡೇರಿಯಾ ದೇವಿ (25) ಮತ್ತು ಮಾಲಿ ದೇವಿ (27) ಅವರನ್ನು ಆಭರಣ ಖರೀದಿಸುವ ನಿಮಿತ್ತ ಕಾರಿನಲ್ಲಿ ಹೋಗುತ್ತಿದ್ದಾಗ ಮದ್ಯದಲ್ಲಿಯೆ ಜಗಳವಾಡಿದ್ದಾರೆ. ಆಗ ಆಯ ತಪ್ಪಿದ ಕಾರನ್ನು ನಿಯಂತ್ರಣಕ್ಕೆ ತರಲು ದಾರಿ ಮಧ್ಯದಲ್ಲಿಯೇ ನಿಲ್ಲಿಸಿದ್ದಾನೆ. ಆಗ ಕಾರನ್ನು ನಿಲ್ಲಿಸಿ ತನ್ನ ಇಬ್ಬರು ಹೆಂಡತಿಯರನ್ನು ಕಾರಿನ ಒಳಗೆ ತಳ್ಳಿ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ.
ಸಹಾಯಕ ಪೋಲಿಸ ವರಿಷ್ಠಾಧಿಕಾರಿ ಜಾಲೋರ್ ಬಿಂಜಾರಾಮ್ ಹೇಳುವಂತೆ ತನ್ನ ತಾಯಿಯನ್ನು ಈ ಇಬ್ಬರು ಹೆಂಡಿರು ಸರಿಯಾಗಿ ನೋಡಿಕೊಳ್ಳಲಿಲ್ಲ ಎನ್ನುವ ಕಾರಣದಿಂದ ಆ ವ್ಯಕ್ತಿ ಈ ರೀತಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಗುಜರಾತ್ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಮೂವರು ಮಕ್ಕಳ ತಂದೆ ಎಂದು ಹೇಳಲಾಗಿದೆ.