ನವದೆಹಲಿ: ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುವ ಕಲಂ 370ನ್ನು ರದ್ದು ಪಡಿಸಲಾಗುವುದು ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಚಂಬಾ ಜಿಲ್ಲೆಯ ಚೋಗಾನ್ ಮೈದಾನದಲ್ಲಿ ನಡೆದ ಮೊದಲ ರ್ಯಾಲಿಯಲ್ಲಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ರಾಜ್ಯಕ್ಕೆ ಮತ್ತೊಂದು ಪ್ರಧಾನಿಯಾಗಬೇಕೆಂದು ಹೇಳಿದ್ದಾರೆ.
ಇನ್ನೊಂದೆಡೆ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಕಾಶ್ಮೀರದಲ್ಲಿನ ಎಎಫ್ಎಸ್ಪಿಎಯನ್ನು ಪರಿಶೀಲಿಸಲಾಗುವುದು ಮತ್ತು ಪ್ರಜಾಪ್ರಭುತ್ವ ಕಾನೂನಿನ ನಿಬಂಧನೆಗಳನ್ನು ತಿದ್ದುಪಡಿ ಮಾಡುವುದಾಗಿ ಹೇಳಿದೆ.ಇದು ಅವರ ಮನಸ್ಥಿತಿಯನ್ನು ಸೂಚಿಸುತ್ತದೆ.ಆದರೆ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಮತ್ತು ಮೋದಿ ಪ್ರಧಾನಿಯಾಗುವುದಾದರೆ, ವಿಧಿ 370ನ್ನು ರದ್ದುಗೊಳಿಸುವುದಾಗಿ ಶಾ ಭರವಸೆ ನೀಡಿದರು.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕಂಗ್ರಾ ಬಿಜೆಪಿ ಅಭ್ಯರ್ಥಿ ಕಿಶನ್ ಕಪೂರ್ ಅವರ ಪರ ಪ್ರಚಾರದ ಕಾರ್ಯಕ್ರಮದಲ್ಲಿ ಭಾಗವಹಿಸಿ " ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಕಾಂಗ್ರೆಸ್ ನ ನಿಲುವಿನ ಬಗ್ಗೆ ಹರಿಹಾಯ್ದರು. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಪಾಕಿಸ್ತಾನವು ಭಾರತದ ಐವರು ಸೈನಿಕರ ಶಿರಚ್ಛೇದನ ಮಾಡಿದಾಗ ಅದಕ್ಕೆ ಅವರು ಯಾವುದೇ ಉತ್ತರ ನೀಡಲಿಲ್ಲ, ಆದರೆ ಮೋದಿ ಆಡಳಿತದ ಅಡಿಯಲ್ಲಿ ಬಾಲಾಕೋಟ್ನಲ್ಲಿ ವೈಮಾನಿಕ ದಾಳಿ ನಡೆಸಲಾಯಿತು ಎಂದರು.
ಇದೇ ವೇಳೆ ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೊಡಾ ವಿರುದ್ಧ ಕಿಡಿ ಕಾರಿದ ಅವರು ವೈಮಾನಿಕ ದಾಳಿಯ ಬದಲಿಗೆ ಉಗ್ರಗಾಮಿಗಳೊಂದಿಗೆ ಮಾತಾಡಬೇಕು ಎನ್ನುವ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.