ಪರಮಾಣು ಯುದ್ಧ ಒಂದು ವೇಳೆ ನಡೆದರೆ, ಅದು ಮಾನವ ಸಮಾಜದ ಮೇಲೆ ಮತ್ತು ಪರಿಸರದ ಮೇಲೆ ಅತ್ಯಂತ ವಿನಾಶಕಾರಿ ಮತ್ತು ಸುದೀರ್ಘ ಅವಧಿಯ ಪರಿಣಾಮಗಳನ್ನು ಉಂಟುಮಾಡುತ್ತದೆ. ಪರಮಾಣು ಯುದ್ಧದ ಕೆಲವು ಪರಿಣಾಮಗಳ ಕುರಿತು ಇಲ್ಲಿ ಗಮನ ಹರಿಸೋಣ.
ಸಾವು ನೋವು: ಪರಮಾಣು ಯುದ್ಧ ನಡೆದರೆ, ಅದರ ಪರಿಣಾಮವಾಗಿ ಕ್ಷಣದಲ್ಲೇ ಅಪಾರ ಪ್ರಮಾಣದ ಸಾವು ನೋವುಗಳು ಸಂಭವಿಸುತ್ತವೆ. ಆ ಬಾಂಬ್ ಸ್ಫೋಟ, ಉಷ್ಣ, ಹಾಗೂ ವಿಕಿರಣಗಳ ಪರಿಣಾಮವಾಗಿ ಅಪಾರ ಪ್ರಾಣಹಾನಿಯಾಗುತ್ತದೆ. ಪರಮಾಣು ಯುದ್ಧದ ಸಾವಿನ ಪ್ರಮಾಣ ಲಕ್ಷಗಟ್ಟಲೆ ಆಗಿರುತ್ತದೆ. ಅದಕ್ಕೂ ಹೆಚ್ಚಿನ ಜನರು ಗಂಭೀರವಾಗಿ ಗಾಯಗೊಳ್ಳುತ್ತಾರೆ.
ಪರಿಸರ ನಾಶ: ಪರಮಾಣು ಸ್ಫೋಟ ವಾತಾವರಣದ ಮೇಲೆ ಅಪಾರ ಪ್ರಮಾಣದ ಹಾನಿ ಉಂಟುಮಾಡುತ್ತದೆ. ಇದರ ಪರಿಣಾಮವಾಗಿ ಬೆಂಕಿ ಅನಾಹುತ, ವಿಕಿರಣ ಪ್ರಸರಣ, ಸುದೀರ್ಘ ಅವಧಿಗೆ ಮಣ್ಣು ಮತ್ತು ನೀರಿನ ಮಾಲಿನ್ಯ ಉಂಟಾಗುತ್ತದೆ. ಇದರ ಪರಿಣಾಮವಾಗಿ ದೊಡ್ಡ ಭೂಪ್ರದೇಶ ಅದೆಷ್ಟೋ ವರ್ಷಗಳ ಕಾಲ ಮಾನವ ವಾಸಕ್ಕೆ ಯೋಗ್ಯವಲ್ಲದಾಗುತ್ತದೆ.
ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಬೆದರಿಕೆ ಕರೆ; ಸಂಪೂರ್ಣ ತನಿಖೆ: ಸಿಎಂ ಬೊಮ್ಮಾಯಿ
ಹವಾಮಾನ ಬದಲಾವಣೆ: ಪರಮಾಣು ಸ್ಫೋಟದ ಪರಿಣಾಮವಾಗಿ ಭೂಮಿಯ ವಾತಾವರಣದಲ್ಲೂ ಸಾಕಷ್ಟು ಬದಲಾವಣೆ ಉಂಟಾಗುತ್ತದೆ. ಅದರ ಪರಿಣಾಮವಾಗಿ, ಧೂಳು, ಹೊಗೆ ಮತ್ತು ಅವಶೇಷಗಳು ವಾತಾವರಣದಲ್ಲಿ ಬೆರೆತು, ಸೂರ್ಯನ ಕಿರಣ ಭೂಮಿಗೆ ಬರದಂತೆ ತಡೆದು, ನ್ಯೂಕ್ಲಿಯರ್ ಚಳಿಗಾಲ ಎದುರಾಗಬಹುದು. ಹಾಗಾದರೆ ಭೂಮಿಯ ವಾತಾವರಣ ಅಪಾರ ಪ್ರಮಾಣದಲ್ಲಿ ಕಡಿಮೆಯಾಗಿ, ಆಹಾರ ಬೆಳೆಗಳೂ ಅಲಭ್ಯವಾಗುತ್ತವೆ.
ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳು: ಪರಮಾಣು ಯುದ್ಧ ಜಾಗತಿಕ ಆರ್ಥಿಕತೆಯ ಮೇಲೆ ಅಪಾರ ಪರಿಣಾಮ ಬೀರುತ್ತದೆ. ಪರಮಾಣು ಯುದ್ಧದ ಕಾರಣದಿಂದ ಮೂಲ ಸೌಕರ್ಯಗಳು ಎಲ್ಲೆಡೆ ನಾಶವಾಗುತ್ತವೆ. ವ್ಯಾಪಾರ ಮತ್ತು ವಾಣಿಜ್ಯ ವ್ಯವಹಾರಗಳು ಹಾನಿಗೀಡಾಗುತ್ತವೆ. ಮಾನವರ ಜೀವನಮಟ್ಟ ಕುಸಿಯುತ್ತದೆ. ಕಾನೂನು ಸುವ್ಯವಸ್ಥೆ ಕೈ ತಪ್ಪಿ ಹೋಗಿ, ಅದರ ಪರಿಣಾಮವಾಗಿ ಸಾಮಾಜಿಕ ಮತ್ತು ರಾಜಕೀಯ ಸುವ್ಯವಸ್ಥೆಗಳೂ ಹಲವು ಪ್ರದೇಶಗಳಲ್ಲಿ ಕುಸಿದು ಹೋಗುವ ಅಪಾಯವಿದೆ.
ಪರಮಾಣು ಯುದ್ಧದ ದೀರ್ಘಕಾಲದ ಪರಿಣಾಮವಾಗಿ, ಕ್ಯಾನ್ಸರ್‌ನಂತಹ ವಿಕಿರಣ ಸಂಬಂಧಿತ ಕಾಯಿಲೆಗಳು, ಆನುವಂಶಿಕ ರೂಪಾಂತರಗಳು, ಹಾಗೂ ಇತರ ಸಾಮಾಜಿಕ ಸ್ಥಿತ್ಯಂತರಗಳು ಎದುರಾಗುತ್ತವೆ. ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ ಹದಗೆಡುವ ಮೂಲಕ ಜಾಗತಿಕ ರಾಜಕಾರಣ ಮತ್ತು ಸುರಕ್ಷತೆಯ ಮೇಲೂ ದುಷ್ಪರಿಣಾಮ ಬೀರಬಹುದು.
ಇದನ್ನೂ ಓದಿ: Miss Universe 2022 : ಯುಸ್‌ನ ಚೆಲುವೆಯ ಮುಡಿಗೆ ಭುವನ ಸುಂದರಿ ಕಿರೀಟ, ಭಾರತದ ದಿವಿತಾ ರೈಗೆ ನಿರಾಸೆ
ಮಾನಸಿಕ ಪರಿಣಾಮಗಳು: ಒಂದು ವೇಳೆ ಪರಮಾಣು ಯುದ್ಧದಲ್ಲಿ ಪಾರಾದರೂ, ಅದರಲ್ಲಿ ಬಚಾವಾದವರ ಮೇಲೆ ಆಘಾತ, ಆತಂಕ, ಖಿನ್ನತೆ, ಹಾಗೂ ಮತ್ತಿತರ ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ.
ಪರಮಾಣು ಯುದ್ಧದ ಪರಿಣಾಮಗಳು ದುರಂತಮಯವಾಗಿದ್ದು, ಮಾನವ ಸಮುದಾಯದ ಮೇಲೆ ಸುದೀರ್ಘ ಪರಿಣಾಮ ಉಂಟು ಮಾಡುತ್ತವೆ. ಪರಮಾಣು ಶಸ್ತ್ರಾಸ್ತ್ರಗಳ ಬಳಕೆ ಒಂದು ಕೊನೆಯ ಆಯ್ಕೆಯಾಗಿ ಪರಿಗಣಿಸಲಾಗಿದ್ದು, ಅದರ ಬಳಕೆಯನ್ನು ಎಲ್ಲರೂ ವಿರೋಧಿಸುತ್ತಾರೆ. ಒಂದು ವೇಳೆ ಅಂತಹ ಯುದ್ಧ ನಡೆದರೆ, ಮಾನವರು ಮತ್ತು ವಾತಾವರಣದ ಮೇಲೆ ಅದರ ಪರಿಣಾಮ ಅತ್ಯಂತ ಪ್ರತಿಕೂಲವಾಗಿರುತ್ತದೆ.
-ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.