ಬೆಂಗಳೂರು : ಹೊಸ ಭರವಸೆಗಳೊಂದಿಗೆ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಹೊಸ ವರ್ಷದಲ್ಲಿ, ಯಾವುದೇ ರೀತಿಯ ಸಮಸ್ಯೆಗಳು ಎದುರಾಗದಿರಲಿ ಎನ್ನುವುದು ಪ್ರತಿಯೊಬ್ಬರ ಆಸೆ. ಆದರೆ, ನಾವು ಅಂದುಕೊಂಡ ಹಾಗೆ ಆಗಬೇಕು ಅಥವಾ ಆಗುತ್ತದೆ ಎನ್ನುವುದಕ್ಕೆ ಗ್ಯಾರಂಟಿ ಇರುವುದಿಲ್ಲ. ಯಾಕೆಂದರೆ ನಮ್ಮ ಜೀವನ ರಾಶಿ ನಕ್ಷತ್ರಗಳ ಆಧಾರದ ಮೇಲೆ ನಡೆಯತ್ತದೆ ಎನ್ನುತ್ತದೆ ಜ್ಯೋತಿಷ್ಯ. ಜ್ಯೋತಿಷ್ಯವನ್ನು ನಂಬುವುದಾದರೆ 2023ರಲ್ಲಿ ಕೇತು ಸಂಕ್ರಮಣ ಇರುವುದರಿಂದ ಕೆಲವು ರಾಶಿಯವರ ಮೇಲೆ ಅದು ಕೆಟ್ಟ ಪರಿಣಾಮ ಬೀರುತ್ತದೆ.
2023ರಲ್ಲಿ, ಕೇತು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ತುಲಾ ರಾಶಿಯಲ್ಲಿರುವ ಕೇತು, ಅಕ್ಟೋಬರ್ 30, 2023 ರಂದು, ಕನ್ಯಾರಾಶಿಯನ್ನು ಪ್ರವೇಶಿಸಲಿದ್ದಾನೆ. ಅಕ್ಟೋಬರ್ 30 ರಂದು ಮಧ್ಯಾಹ್ನ 1.33 ಕ್ಕೆ ಕನ್ಯಾರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಸಮಯದಲ್ಲಿ ಯಾವ ರಾಶಿಯವರು ಜಾಗರೂಕರಾಗಿರಬೇಕು ನೋಡೋಣ.
ಇದನ್ನೂ ಓದಿ : Vastu Tips For Money : ಸೂರ್ಯಾಸ್ತದ ನಂತರ ಈ 3 ವಸ್ತುಗಳನ್ನು ದಾನ ಮಾಡಬೇಡಿ, ಆರ್ಥಿಕ ಸಂಕಷ್ಟ ಎದುರಾಗುತ್ತೆ!
ಮೇಷ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯವರು ಈ ಅವಧಿಯಲ್ಲಿ ವಿಶೇಷ ಗಮನ ಹರಿಸಬೇಕು. ಆರೋಗ್ಯ ಸಂಬಂಧಿತ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರೆ, ಎಚ್ಚರಿಕೆಯ ಹೆಜ್ಜೆಯನ್ನಿಡುವುದು ಅಗತ್ಯ. ಇಲ್ಲವಾದರೆ ಮೋಸದ ಜಾಲಕ್ಕೆ ಬೀಳಬಹುದು.
ಮಿಥುನ ರಾಶಿ : ವೈದಿಕ ಜ್ಯೋತಿಷ್ಯದ ಪ್ರಕಾರ, ಈ ಸಮಯವು ಮಿಥುನ ರಾಶಿಯವರಿಗೆ ಹಾನಿಕಾರಕವಾಗಿದೆ. ಮಿಥುನ ರಾಶಿಯವರ ಕುಟುಂಬದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಕರ್ಕಾಟಕ ರಾಶಿ : ಕರ್ಕಾಟಕ ರಾಶಿಯವರು ಈ ಅವಧಿಯಲ್ಲಿ ವೃತ್ತಿ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಅವಧಿಯಲ್ಲಿ ಯಾವುದೇ ರೀತಿಯ ಹೂಡಿಕೆ ಮಾಡದಿರುವುದು ಒಳ್ಳೆಯದು. ಯಾಕೆಂದರೆ ಈ ಸಮಯ ಹೂಡಿಕೆಗೆ ಅನುಕೂಲಕರವಾಗಿರುವುದಿಲ್ಲ.
ಇದನ್ನೂ ಓದಿ : Vastu Tips 2023 : ಹೊಸ ವರ್ಷದಲ್ಲಿ ಪಾಲಿಸಿ ಈ ವಾಸ್ತು ಸಲಹೆಗಳನ್ನು, ನಿಮಗೆ ಪ್ರಗತಿ, ಗಳಿಕೆ ಹೆಚ್ಚಾಗುತ್ತದೆ!
ಕನ್ಯಾ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸಮಯದಲ್ಲಿ ಕನ್ಯಾ ರಾಶಿಯವರು ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗಬಹುದು. ಹಾಗಾಗಿ ಈ ಸಮಯದಲ್ಲಿ ಹಣಕಾಸಿನ ವಹಿವಾಟುಗಳನ್ನು ಮಾಡದೇ ಇರುವುದೇ ಒಳ್ಳೆಯದು. ಈ ಸಮಯದಲ್ಲಿ ಎಷ್ಟು ಸಂಯಮ ವಹಿಸುತ್ತೀರಿ ಅಷ್ಟು ಒಳ್ಳೆಯದು.
ಮೀನ ರಾಶಿ : ಈ ಸಮಯವು ಮೀನ ರಾಶಿಯವರಿಗೆ ಅನುಕೂಲಕರವಾಗಿರುವುದಿಲ್ಲ. ಬಹಳ ಎಚ್ಚರಿಕೆಯಿಂದ ಹೆಜ್ಜೆಯನ್ನು ಇಡಬೇಕಾಗುತ್ತದೆ. ಈ ಅವಧಿಯಲ್ಲಿ ಮಾನಸಿಕ ಮತ್ತು ದೈಹಿಕ ತೊಂದರೆಗಳಿಂದ ದೂರವಿರುವುದು ಅಗತ್ಯ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.