Niveditha Gowda : ನಿವೇದಿತಾ ಗೌಡ ಹಾಟ್‌ ವಿಡಿಯೋ ವೈರಲ್‌! ನೆಗೆಟಿವ್‌ ಕಾಮೆಂಟ್ಸ್‌ಗೆ ನಿವ್ವಿ ಖಡಕ್‌ ಆನ್ಸರ್‌

Niveditha Gowda : ಬಿಗ್ ಬಾಸ್ ಕನ್ನಡ ಮಾಜಿ ಸ್ಪರ್ಧಿ ನಿವೇದಿತಾ ಗೌಡ ಬಾಲಿಯಲ್ಲಿ ಸೋಲೋ ಟ್ರಿಪ್ ಎಂಜಾಯ್‌ ಮಾಡುತ್ತಿದ್ದಾರೆ. ಬಾಲಿಯಲ್ಲಿ ಈ ಬಾಲೆ ತೆಗೆಸಿಕೊಂಡಿದ್ದ ಫೋಟೋ, ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್‌ ಮಾಡಿದ್ದರು. ಈ ಫೋಟೋ ಮತ್ತು ವಿಡಿಯೋಗಳಲ್ಲಿ ನಿವ್ವಿ ಹಾಟ್‌ ಲುಕ್‌ ಕಂಡು ಅನೇಕರು ನೆಗೆಟಿವ್‌ ಕಾಮೆಂಟ್‌ಗಳನ್ನು ಮಾಡಿದ್ದರು. ಇದೀಗ ಕೆಟ್ಟದಾಗಿ ಮಾತನಾಡಿದವರಿಗೆಲ್ಲ ನಿವೇದಿತಾ ಪ್ರತಿಕ್ರಿಯೆ ನೀಡಿದ್ದಾರೆ. 

Written by - Chetana Devarmani | Last Updated : Dec 2, 2022, 02:04 PM IST
  • ಬಿಗ್ ಬಾಸ್ ಕನ್ನಡ ಮಾಜಿ ಸ್ಪರ್ಧಿ ನಿವೇದಿತಾ ಗೌಡ
  • ನಿವೇದಿತಾ ಗೌಡ ಹಾಟ್‌ ವಿಡಿಯೋ ವೈರಲ್‌!
  • ನೆಗೆಟಿವ್‌ ಕಾಮೆಂಟ್ಸ್‌ಗೆ ನಿವ್ವಿ ಖಡಕ್‌ ಆನ್ಸರ್‌
Niveditha Gowda : ನಿವೇದಿತಾ ಗೌಡ ಹಾಟ್‌ ವಿಡಿಯೋ ವೈರಲ್‌! ನೆಗೆಟಿವ್‌ ಕಾಮೆಂಟ್ಸ್‌ಗೆ ನಿವ್ವಿ ಖಡಕ್‌ ಆನ್ಸರ್‌  title=
ನಿವೇದಿತಾ ಗೌಡ

Niveditha Gowda : ಬಿಗ್ ಬಾಸ್ ಕನ್ನಡ ಮಾಜಿ ಸ್ಪರ್ಧಿ ನಿವೇದಿತಾ ಗೌಡ ಬಾಲಿಯಲ್ಲಿ ಸೋಲೋ ಟ್ರಿಪ್ ಎಂಜಾಯ್‌ ಮಾಡುತ್ತಿದ್ದಾರೆ. ಬಾಲಿಯಲ್ಲಿ ಈ ಬಾಲೆ ತೆಗೆಸಿಕೊಂಡಿದ್ದ ಫೋಟೋ, ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್‌ ಮಾಡಿದ್ದರು. ಈ ಫೋಟೋ ಮತ್ತು ವಿಡಿಯೋಗಳಲ್ಲಿ ನಿವ್ವಿ ಹಾಟ್‌ ಲುಕ್‌ ಕಂಡು ಅನೇಕರು ನೆಗೆಟಿವ್‌ ಕಾಮೆಂಟ್‌ಗಳನ್ನು ಮಾಡಿದ್ದರು. ಬಾಲಿಯಲ್ಲಿ ಏಕಾಂಗಿಯಾಗಿ ಮೋಜು ಮಸ್ತಿ ಮಾಡುತ್ತಿರುವ ರ್ಯಾಪರ್‌ ಚಂದನ್‌ ಶೆಟ್ಟಿ ಪತ್ನಿ ನಿವೇದಿತಾ ಗೌಡ ಇದೀಗ ನೆಗೆಟಿವ್‌ ಕಾಮೆಂಟ್ಸ್‌ ಮಾಡಿದವರಿಗೆ ಖಡಕ್‌ ಉತ್ತರ ನೀಡಿದ್ದಾರೆ. 

ಇದನ್ನೂ ಓದಿ : ನಾಳೆ ರಾಯಚೂರಿನಲ್ಲಿ ವೇದನ ಅಬ್ಬರ! ಚಿತ್ರ ಪ್ರಚಾರಕ್ಕೆ ನ್ಯೂ ಐಡಿಯಾ?

ಬಾಲಿಯಲ್ಲಿನ ಸುಂದರ ಪ್ರಕೃತಿಯ ಮಧ್ಯೆ ಫೋಟೋ ಕ್ಲಿಕ್ಕಿಸಿಕೊಂಡು ನಿವೇದಿತಾ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಕೆಲವರು ಈ ರೀತಿಯ ಬಟ್ಟೆಗಳನ್ನು ಧರಿಸಬೇಡಿ, ಧರಿಸಿದರೂ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಬೇಡಿ ಎಂದು ಕಾಮೆಂಟ್‌ ಮಾಡಿದ್ದರು. ಇನ್ನೂ ಕೆಲವರು ಬೈಯ್ದು ಕಾಮೆಂಟ್‌ ಮಾಡಿದ್ದರು. ಅದರಲ್ಲಿ ಕೆಲವರು ಮಾತ್ರ ಅದು ಅವರ ವೈಯಕ್ತಿಕ ವಿಚಾರ ನೆಗೆಟಿವ್‌ ಕಾಮೆಂಟ್‌ ಮಾಡಬೇಡಿ ಎಂದಿದ್ದರು. ಇದೀಗ ಕೆಟ್ಟದಾಗಿ ಮಾತನಾಡಿದವರಿಗೆಲ್ಲ ನಿವೇದಿತಾ ಪ್ರತಿಕ್ರಿಯೆ ನೀಡಿದ್ದಾರೆ. 

 

 

"ಕೆಲವೊಂದು ಕಾಮೆಂಟ್‌ಗಳನ್ನು ನಾನು ನಿರ್ಲಕ್ಷ್ಯ ಮಾಡುತ್ತೇನೆ. ಆದರೆ ಕೆಲವೊಂದಕ್ಕೆ ಉತ್ತರ ಕೊಡಲೇ ಬೇಕು. ಗಂಡನ ಹಣದಲ್ಲಿ ಚೆನ್ನಾಗಿ ಎಂಜಾಯ್‌ ಮಾಡುತ್ತಿದ್ದಾಳೆ ಎಂದು ಕೆಲವರು ಹೇಳಿದ್ದಾರೆ. ನಿನ್ನ ಡ್ರೆಸ್‌ ಸರಿ ಇಲ್ಲ ಅಂತ ಅಂದಿದ್ದಾರೆ. ನಾನೂ ಕೆಲಸ ಮಾಡುತ್ತಿದ್ದೇನೆ. ನನ್ನ ಅಗತ್ಯಗಳನ್ನು ಪೂರೈಸಿಕೊಳ್ಳುವಷ್ಟು ಸಮರ್ಥಳಿದ್ದೇನೆ. ನನೆಗ ಇಷ್ಟವಾಗುವ ಬಟ್ಟೆಗಳನ್ನು ಧರಿಸುತ್ತೇನೆ. ಒಂದು ವೇಳೆ ನಾನು ಗಂಡನ ಹಣ ಖರ್ಚು ಮಾಡಿದರೂ ಅದರಿಂದ ನಿಮಗೆ ಏನು ಕಷ್ಟ? ಎಂದು ನಿವೇದಿತಾ ಖಡಕ್‌ ಆಗಿ ಉತ್ತರಿಸಿದ್ದಾರೆ. 

ಇದನ್ನೂ ಓದಿ : ದೈವದ ವಿಚಾರ ಇಟ್ಟುಕೊಂಡು ರೀಲ್ಸ್‌, ಅನುಕರಣೆ ಮಾಡುವುದು ಸರಿಯಲ್ಲ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News