Shani Krupe: ಶನಿ ದೇವನನ್ನು ಮೆಚ್ಚಿಸಲು ಇಂದು ಈ ಬಣ್ಣದ ಬಟ್ಟೆ ಧರಿಸಿ, ಈ ವಸ್ತುಗಳನ್ನು ದಾನ ಮಾಡಿ

Shani dev Prasanna Upay: ಇಂದು ಶನಿವಾರ, ನೀವು ಶನಿ ದೇವರನ್ನು ಮೆಚ್ಚಿಸಲು ಬಯಸಿದರೆ, ಇದಕ್ಕಾಗಿ ಕೆಲವು ವಿಶೇಷ ಪರಿಹಾರಗಳಿವೆ. ಈ ಪರಿಹಾರಗಳನ್ನು ಅಳವಡಿಸಿಕೊಳ್ಳುವ ಮೂಲಕ, ನೀವು ಜೀವನದ ಎಲ್ಲಾ ತೊಂದರೆಗಳನ್ನು ತೊಡೆದುಹಾಕಬಹುದು. ಜೊತೆಗೆ ಶನಿ ದೇವನ ಕೃಪೆಗೂ ಪಾತ್ರರಾಗಬಹುದು.

Written by - Yashaswini V | Last Updated : May 7, 2022, 06:45 AM IST
  • ಶನಿ ದೇವರ ಪೂಜೆಯಲ್ಲಿ ಕೆಂಪು ಬಣ್ಣವನ್ನು ಅರ್ಪಿಸಬೇಡಿ.
  • ಇದಕ್ಕೆ ಕಾರಣವೆಂದರೆ ಕೆಂಪು ಬಣ್ಣವನ್ನು ಸಂತೋಷದ ಸಂಕೇತವೆಂದು ಪರಿಗಣಿಸಲಾಗುತ್ತದೆ
  • ಆದರೆ ಶನಿ ದೇವನು ಕೋಪದ ಸಂಕೇತವಾಗಿದೆ.
Shani Krupe: ಶನಿ ದೇವನನ್ನು ಮೆಚ್ಚಿಸಲು ಇಂದು ಈ ಬಣ್ಣದ ಬಟ್ಟೆ ಧರಿಸಿ, ಈ ವಸ್ತುಗಳನ್ನು ದಾನ ಮಾಡಿ  title=
Remedies for Shani Krupe

ಶನಿ ದೇವನನ್ನು ಮೆಚ್ಚಿಸಲು ಸರಳ ಉಪಾಯ:  ವಾರದ ಪ್ರತಿ ದಿನವೂ ಯಾವುದಾದರೊಂದು ದೇವರು ಅಥವಾ ದೇವತೆಗೆ ಮೀಸಲಾಗಿರುವುದು ಎಲ್ಲರಿಗೂ ತಿಳಿದಿದೆ. ಅದರಂತೆ ಆ ದಿನಕ್ಕೆ ತನ್ನದೇ ಆದ ಮಹತ್ವವಿದೆ. ಶನಿವಾರವನ್ನು ಶನಿ ದೇವನಿಗೆ ಸಮರ್ಪಿಸಲಾಗಿದೆ. 

ಸಾಮಾನ್ಯವಾಗಿ ಯಾರಾದರೂ ನಮಗೆ ಕಷ್ಟ ಕೊಡಿತ್ತಿದ್ದರೆ ನಾವು ಸಹಜವಾಗಿಯೇ ಅವರದಂತು ಶನಿ ಕಾಟ ಆಯ್ತು ಎಂದು ಹೇಳುತ್ತೇವೆ. ಶನಿ ಕರ್ಮಗಳಿಗೆ ತಕ್ಕ ಫಲ ನೀಡುವವನು. ಹಾಗಾಗಿಯೇ ಅವನನ್ನು ಕರ್ಮಫಲದಾತ, ನ್ಯಾಯದ ದೇವರು ಎಂದು ಬಣ್ಣಿಸಲಾಗುತ್ತದೆ. ಆದರೆ, ಶನಿ ದೇವರ ವಕ್ರ ದೃಷ್ಟಿ ಬಿತ್ತೆಂದರೆ ಅದರಿಂದ ಚೇತರಿಸಿಕೊಳ್ಳುವುದು ಬಹಳ ಕಷ್ಟ ಎಂದು ಹೇಳಲಾಗುತ್ತದೆ. ಆದರೆ, ಇಂತಹ ಪರಿಸ್ಥಿತಿಯಲ್ಲಿ ಶನಿದೇವನನ್ನು ಒಲಿಸಿಕೊಳ್ಳುವ ವಿಧಾನಗಳೇನು? ಶನಿ ದೇವನನ್ನು ಮೆಚ್ಚಿಸಲು ಸರಳ ಉಪಾಯದ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸಲಿದ್ದೇವೆ. ಈ ಕ್ರಮಗಳನ್ನು ನೀವು ತಿಳಿದಿದ್ದರೆ, ನಿಮ್ಮ ಜೀವನದಲ್ಲಿ ಎಂದಿಗೂ ನೋವು ಮತ್ತು ಬಡತನವನ್ನು ಅನುಭವಿಸುವುದಿಲ್ಲ ಎಂದು ಹೇಳಲಾಗುತ್ತದೆ. 

ವಾಸ್ತವವಾಗಿ, ಶನಿ ದೇವನನ್ನು ಮೆಚ್ಚಿಸಲು, ಶನಿಯ ಕೃಪೆಗೆ ಪಾತ್ರರಾಗಲು ಶನಿವಾರವು ತುಂಬಾ ಒಳ್ಳೆಯ ದಿನ. ಈ ದಿನ ನಾವು ಧರಿಸುವ ಬಟ್ಟೆ ಹಾಗೂ ದಾನದ ಬಗ್ಗೆ ವಿಶೇಷ ಗಮನಹರಿಸುವ ಮೂಲಕ ಶನಿದೇವನನ್ನು ಮೆಚ್ಚಿಸಬಹುದು ಎನ್ನಲಾಗುತ್ತದೆ. ಹಾಗಿದ್ದರೆ, ಶನಿವಾರ ಯಾವ ಬಣ್ಣದ ಬಟ್ಟೆ ಧರಿಸಬೇಕು? ಏನನ್ನು ದಾನ ಮಾಡಬೇಕು? ಯಾರಿಗೆ ದಾನ ಮಾಡಬೇಕು ಎಂದು ತಿಳಿಯೋಣ...   

ಇದನ್ನೂ ಓದಿ- Shani Dosha Remedies: ಈ ಸರಳ ಮಾರ್ಗಗಳನ್ನು ಅನುಸರಿಸಿದರೆ ಸುಲಭವಾಗಿ ಸಿಗಲಿದೆ ಶನಿ ಪ್ರಕೋಪದಿಂದ ಮುಕ್ತಿ

ಶನಿದೇವನಿಗೆ ಕಪ್ಪು ಬಣ್ಣ ತುಂಬಾ ಪ್ರಿಯ:
ಶನಿದೇವನ ತಾಯಿಯ ಹೆಸರು ಛಾಯಾ ಎಂದು ನಂಬಲಾಗಿದೆ. ಗರ್ಭಧರಿಸಿದಾಗಿನಿಂದ ಅವಳು ಶಿವನ ಕಠೋರ ತಪಸ್ಸು ಮಾಡುತ್ತಿದ್ದಳು. ಈ ಕಾರಣಕ್ಕಾಗಿ, ಗರ್ಭಾವಸ್ಥೆಯಲ್ಲಿ ಅವಳ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ, ಶನಿದೇವರು ಜನಿಸಿದಾಗ, ಅವರು ಅಪೌಷ್ಟಿಕತೆಯಿಂದ ಬಳಲುತ್ತಿದ್ದರು ಮತ್ತು ಕಪ್ಪು ಮೈಬಣ್ಣವನ್ನು ಹೊಂದಿದ್ದರು. ಅವನ ಮಗನ ಕಪ್ಪು ಮೈಬಣ್ಣವನ್ನು ನೋಡಿ, ಛಾಯಾ ದೇವಿಯ ಪತಿ ಸೂರ್ಯ ದೇವ ಅವನನ್ನು ತನ್ನ ಮಗನಾಗಿ ಸ್ವೀಕರಿಸಲು ನಿರಾಕರಿಸಿದನು. ಆದಾಗ್ಯೂ, ನಂತರ ಅವರು ತಮ್ಮ ತಪ್ಪನ್ನು ಅರಿತುಕೊಂಡು ಶನಿ ದೇವನನ್ನು ತಮ್ಮ ಮಗನಾಗಿ ಸ್ವೀಕರಿಸಿದರು ಎಂದು ಹೇಳಲಾಗುತ್ತದೆ. ಹಾಗಾಗಿಯೇ, ಕಪ್ಪು ಬಣ್ಣವನ್ನು ಶನಿದೇವನ ನೆಚ್ಚಿನ ಬಣ್ಣವೆಂದು ಪರಿಗಣಿಸಲಾಗಿದೆ.

ಶನಿವಾರ ಕಪ್ಪು ಬಟ್ಟೆ ಧರಿಸಿ:
ನೀವು ಶನಿ ದೇವರನ್ನು ಮೆಚ್ಚಿಸಲು ಬಯಸಿದರೆ, ಶನಿವಾರದಂದು ಕಪ್ಪು ಬಟ್ಟೆಗಳನ್ನು ಧರಿಸಿ. ಇದು ಕಪ್ಪು ಶರ್ಟ್ ಅಥವಾ ಕಪ್ಪು ಪ್ಯಾಂಟ್ ಅನ್ನು ಒಳಗೊಂಡಿರಬಹುದು. ಮಹಿಳೆಯರು ಕಪ್ಪು ಸೂಟ್ ಅಥವಾ ಸಲ್ವಾರ್ ಧರಿಸಬಹುದು. ಯಾವುದೇ ಕಪ್ಪು ಬಟ್ಟೆ ಇಲ್ಲವಾದರೆ, ನೀವು ಕಪ್ಪು ಕರವಸ್ತ್ರವನ್ನು ಪಾಕೆಟ್ನಲ್ಲಿ ಇರಿಸಬಹುದು. ಶನಿವಾರದಂದು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸುವವರ ಮೇಲೆ ಶನಿದೆವನ ಆಶೀರ್ವಾದ ಪ್ರಾಪ್ತಿಯಾಗಲಿದೆ ಎಂದು ನಂಬಲಾಗಿದೆ. ಆದರೆ, ನೆನಪಿಡಿ ಶನಿ ದೇವರನ್ನು ಹೊರತುಪಡಿಸಿ ಯಾವುದೇ ದೇವರ ಪೂಜೆಯಲ್ಲಿ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬಾರದು.
 
ಕಪ್ಪು ವಸ್ತುಗಳನ್ನು ದಾನ ಮಾಡಿ:
ಶನಿ ದೇವರನ್ನು ಪೂಜಿಸುವಾಗ ಕಪ್ಪು ಎಳ್ಳು, ಕಾಳು ಮತ್ತು ಕಬ್ಬಿಣದ ವಸ್ತುಗಳನ್ನು ಅರ್ಪಿಸಲಾಗುತ್ತದೆ. ಇದರೊಂದಿಗೆ ಶನಿವಾರದಂದು ಕಪ್ಪು ಬಣ್ಣದ ವಸ್ತುಗಳನ್ನು ನಿರ್ಗತಿಕರಿಗೆ ದಾನ ಮಾಡುವುದು ಒಳ್ಳೆಯದು ಎಂದು ಹೇಳಲಾಗುತ್ತದ. ಇವುಗಳು ಕಪ್ಪು ಎಳ್ಳು, ಕಪ್ಪು ಉದ್ದಿನಕಾಳು ಅಥವಾ ಸಾಸಿವೆ ಎಣ್ಣೆಯನ್ನು ಸಹ ಒಳಗೊಂಡಿರಬಹುದು. ಶನಿದೇವರ ಆರಾಧನೆಯ ಸಮಯದಲ್ಲಿ ಸ್ವಚ್ಛತೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಬೇಕು. ಹೀಗೆ ಮಾಡದಿದ್ದರೆ ಶನಿದೇವನಿಗೂ ಕೋಪ ಬರಬಹುದು. 

ಇದನ್ನೂ ಓದಿ- Shani Gochar 2022: ಸಾಡೇಸಾತಿ ಇಲ್ಲದಿದ್ದರೂ ಈ ಎರಡು ರಾಶಿಯವರು ಶನಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ

ಪೂಜೆಯಲ್ಲಿ ತಾಮ್ರದ ಪಾತ್ರೆಗಳನ್ನು ಬಳಸಬೇಡಿ:
ಶನಿದೇವನ ಪೂಜೆಯ ಸಮಯದಲ್ಲಿ ತಾಮ್ರದ ಪಾತ್ರೆಗಳನ್ನು ಬಳಸದಂತೆ ಎಚ್ಚರಿಕೆ ವಹಿಸಿ. ವಾಸ್ತವವಾಗಿ, ತಾಮ್ರವು ಸೂರ್ಯನ ಲೋಹದಿಂದ ಮಾಡಲ್ಪಟ್ಟಿದೆ, ಇದನ್ನು ಬಳಸುವುದರಿಂದ ಶನಿ ದೇವನು ಕೋಪಗೊಳ್ಳಬಹುದು. ಇದರ ಹೊರತಾಗಿ, ಶನಿ ದೇವರ ಪೂಜೆಯಲ್ಲಿ ಕೆಂಪು ಬಣ್ಣವನ್ನು ಅರ್ಪಿಸಬೇಡಿ. ಇದಕ್ಕೆ ಕಾರಣವೆಂದರೆ ಕೆಂಪು ಬಣ್ಣವನ್ನು ಸಂತೋಷದ ಸಂಕೇತವೆಂದು ಪರಿಗಣಿಸಲಾಗುತ್ತದೆ, ಆದರೆ ಶನಿ ದೇವನು ಕೋಪದ ಸಂಕೇತವಾಗಿದೆ.  

ಈ 2 ರಾಶಿಯವರಿಗೆ ತುಂಬಾ ಅದೃಷ್ಟ
ನೀವು ಶನಿವಾರದಂದು ನಿಮ್ಮ ಪರ್ಸ್‌ನಲ್ಲಿ ನೀಲಿ ಅಥವಾ ಕಪ್ಪು ಬಟ್ಟೆಯನ್ನು ಇಟ್ಟುಕೊಳ್ಳಬಹುದು. ಈ ದಿನ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸುವುದು ಎಲ್ಲಾ ರಾಶಿಚಕ್ರ ಚಿಹ್ನೆಗಳ ಜನರಿಗೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಆದರೆ ಮಿಥುನ ರಾಶಿಯವರಿಗೆ ಈ ದಿನ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸುವುದು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮತ್ತೊಂದೆಡೆ, ಈ ದಿನದಂದು ಕಪ್ಪು ಬಟ್ಟೆಗಳನ್ನು ಧರಿಸುವುದರಿಂದ  ವೃಶ್ಚಿಕ ರಾಶಿಯವರ ವೈವಾಹಿಕ ಜೀವನ ಸಂತೋಷವಾಗಿರುತ್ತದೆ ಎಂಬ ನಂಬಿಕೆ ಇದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News