ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಗೆ: ರಾಜಕೀಯ "ಸಂಕ್ರಮಣ" ಸಿದ್ಧತೆ?! 

ಹೈಕಮಾಂಡ್ ನಾಯಕರು ಈ ವಿಷಯದಲ್ಲಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂಬ ಮನವಿ ಡಿಸಿಎಂ ಮಂಡಿಸಲು ಉದ್ದೇಶಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಹೈಕಮಾಂಡ್‌ನ ನಿರ್ದೇಶನಕ್ಕೆ ಬದ್ದರಾಗಿರುವುದನ್ನು ಅವರು ಸ್ಪಷ್ಟಪಡಿಸಲಿದ್ದಾರೆ.

Written by - Prashobh Devanahalli | Edited by - Manjunath N | Last Updated : Jan 6, 2025, 12:03 AM IST
  • ಹೈಕಮಾಂಡ್ ನಾಯಕರು ಈ ವಿಷಯದಲ್ಲಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂಬ ಮನವಿ ಡಿಸಿಎಂ ಮಂಡಿಸಲು ಉದ್ದೇಶಿಸಿದ್ದಾರೆ.
  • ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಹೈಕಮಾಂಡ್‌ನ ನಿರ್ದೇಶನಕ್ಕೆ ಬದ್ದರಾಗಿರುವುದನ್ನು ಅವರು ಸ್ಪಷ್ಟಪಡಿಸಲಿದ್ದಾರೆ.
ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಗೆ: ರಾಜಕೀಯ "ಸಂಕ್ರಮಣ" ಸಿದ್ಧತೆ?!  title=

ಬೆಂಗಳೂರು : 5 ದಿನಗಳ ವಿದೇಶಿ ಪ್ರವಾಸ ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಇಂದು ದೆಹಲಿಗೆ ತೆರಳಲಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ವರಿಷ್ಠರ ಗಮನಕ್ಕೆ ತರುವ ಉದ್ದೇಶದಿಂದ ಅವರು ಈ ಭೇಟಿಗೆ ಸಜ್ಜಾಗಿದ್ದಾರೆ ಎನ್ನಲಾಗಿದೆ.

ಹೈಕಮಾಂಡ್‌ನಿಂದ ಬದಲಾವಣೆಗೆ ಮುನ್ನೋಟ:

ಡಿ.ಕೆ. ಶಿವಕುಮಾರ್ ಸಂಕ್ರಾಂತಿ ನಂತರ ಪಕ್ಷ ಮತ್ತು ಸರ್ಕಾರದ ಮಟ್ಟದಲ್ಲಿ ಬದಲಾವಣೆ ಬಗ್ಗೆ ಹೈಕಮಾಂಡ್ ಇಚ್ಛಿಸಿದರೆ, ಅದನ್ನು ಸ್ವಾಗತಿಸಲು ತಾವು ಸಿದ್ಧವೆಂದು ಹೇಳಿದ್ದಾರೆ. "ಕೆಲ ನಾಯಕರು ಅನಾವಶ್ಯಕ ಗೊಂದಲ ಉಂಟು ಮಾಡುತ್ತಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರ ನಡವಳಿಕೆ ಪಕ್ಷ ಮತ್ತು ಸರ್ಕಾರದ ಮೇಲೆ ಪರಿಣಾಮ ಬೀರುತ್ತದೆ" ಎಂದು ಅವರು ತಮ್ಮ ಆತಂಕವನ್ನು ಹಂಚಿಕೊಂಡಿದ್ದಾರೆ.

ಹೈಕಮಾಂಡ್‌ಗೆ ಮನವಿ:

ಹೈಕಮಾಂಡ್ ನಾಯಕರು ಈ ವಿಷಯದಲ್ಲಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂಬ ಮನವಿ ಡಿಸಿಎಂ ಮಂಡಿಸಲು ಉದ್ದೇಶಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಹೈಕಮಾಂಡ್‌ನ ನಿರ್ದೇಶನಕ್ಕೆ ಬದ್ದರಾಗಿರುವುದನ್ನು ಅವರು ಸ್ಪಷ್ಟಪಡಿಸಲಿದ್ದಾರೆ.

ಗಡಿಜಿಲ್ಲೆಯಲ್ಲಿ 20 ಸರ್ಕಾರಿ ಶಾಲೆಗಳು ಬಂದ್! ಕಾರಣ ಏನು ಗೊತ್ತೇ?

ಸಚಿವರ ಸಭೆ ಮತ್ತು ರಾಜಕೀಯ ಚರ್ಚೆ:

ಡಿಸಿಎಂ ಅವರು ರಾಜ್ಯದಲ್ಲಿ ನಡೆದ ಸಚಿವರ ಸಭೆಯ ವಿವರಗಳನ್ನು ಹಾಗೂ ಪಕ್ಷದ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿದ ಮಾಹಿತಿ ಹೈಕಮಾಂಡ್‌ಗೆ ನೀಡಲಿದ್ದಾರೆ. ತೀರ್ಮಾನಾತ್ಮಕ ವಿಷಯಗಳ ಬಗ್ಗೆ ವರಿಷ್ಠರೊಂದಿಗೆ ಡಿನ್ನರ್ ಮೀಟಿಂಗ್‌ನಲ್ಲಿ ಚರ್ಚಿಸುವ ನಿರೀಕ್ಷೆಯಿದೆ.

ವಿರೋಧಿ ನಾಯಕರ ವರ್ತನೆ ಬಗ್ಗೆ ಚರ್ಚೆ:

ರಾಜ್ಯದಲ್ಲಿ ಕೆಲ ನಾಯಕರು ಮುಂದಾಳತ್ವವನ್ನು ಪ್ರಶ್ನಿಸುವ ರೀತಿಯ ವರ್ತನೆ ತಾಳುತ್ತಿರುವುದರಿಂದ, ಈ ವಿಷಯದ ಬಗ್ಗೆ ವರಿಷ್ಠರ ಗಮನ ಸೆಳೆದು, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ವಿನಂತಿ ಮಾಡಲು ಡಿಸಿಎಂ ತೀರ್ಮಾನಿಸಿದ್ದಾರೆ.

ವಿದೇಶಿ ಪ್ರವಾಸದಿಂದ ಮರಳುತ್ತಿದ್ದಂತೆಯೇ ದೆಹಲಿಗೆ ಭೇಟಿ ನೀಡುತ್ತಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಈ ಭೇಟಿಯು ಕರ್ನಾಟಕ ಕಾಂಗ್ರೆಸ್‌ ಪಕ್ಷದ ಮುಂದಿನ ನಿರ್ಣಾಯಕ ತೀರ್ಮಾನಗಳಿಗೆ ಮುಖ್ಯ ಕಾರಣವಾಗುವ ಸಾಧ್ಯತೆಯಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

 

Trending News