Rishi Dhawan retirement: ಭಾರತದ ಆಲ್ರೌಂಡರ್ ರಿಷಿ ಧವನ್ ಸೀಮಿತ ಓವರ್ಗಳ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. 34 ವರ್ಷದ ಆಲ್ ರೌಂಡರ್ ರಿಷಿ ಧವನ್ ಇನ್ನು ಮುಂದೆ ಏಕದಿನ ಮತ್ತು ಟಿ20 ಕ್ರಿಕೆಟ್ ಆಡುವುದಿಲ್ಲ ಎಂದು ಘೋಷಿಸಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ಹಿಮಾಚಲ ಪ್ರದೇಶ ಪರ ಆಡಿದ ರಿಷಿ ಧವನ್, ಭಾರತಕ್ಕಾಗಿ ಮೂರು ODI ಮತ್ತು ಒಂದು T20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು ಈ ಎಲ್ಲಾ ಪಂದ್ಯಗಳನ್ನು 2016 ರಲ್ಲಿ ಆಡಿದ್ದರು. ಧವನ್ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಆಸ್ಟ್ರೇಲಿಯಾ ಪ್ರವಾಸದಿಂದ ಪ್ರಾರಂಭಿಸಿದರು.
ರಿಷಿ ಧವನ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಮುಂದುವರಿಯಲಿದ್ದಾರೆ. ಅವರು ರಣಜಿ ಟ್ರೋಫಿ 2024-25 ರ ಕೊನೆಯ ಎರಡು ಸುತ್ತುಗಳಲ್ಲಿ ಆಡುತ್ತಾರೆ. ಧವನ್ ಅವರನ್ನು ಭಾರತೀಯ ದೇಶೀಯ ಕ್ರಿಕೆಟ್ನಲ್ಲಿ ಅಪ್ರತಿಮ ಆಟಗಾರ ಎಂದು ಕರೆಯುತ್ತಾರೆ. ರಿಷಿ ಧವನ್ ಎಲ್ಲಾ ಸ್ವರೂಪಗಳಲ್ಲಿ ಸೇರಿ ಸುಮಾರು 9000 ರನ್ ಗಳಿಸಿದ್ದಾರೆ. 650 ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ. 134 ಲಿಸ್ಟ್ ಎ ಪಂದ್ಯಗಳಲ್ಲಿ, 29.74 ಸರಾಸರಿಯಲ್ಲಿ 186 ವಿಕೆಟ್ಗಳನ್ನು ಪಡೆದಿದ್ದಾರೆ. 38.23 ಸರಾಸರಿಯಲ್ಲಿ 2906 ರನ್ ಗಳಿಸಿದ್ದಾರೆ. 135 T20 ಪಂದ್ಯಗಳನ್ನು ಆಡಿದ್ದಾರೆ ಮತ್ತು 26.44 ರ ಸರಾಸರಿಯಲ್ಲಿ 118 ವಿಕೆಟ್ಗಳನ್ನು ಪಡೆದಿದ್ದಾರೆ. 121.33 ಸ್ಟ್ರೈಕ್ ರೇಟ್ನಲ್ಲಿ 1740 ರನ್ ಗಳಿಸಿದ್ದಾರೆ.
ನಿವೃತ್ತಿಯ ಬಗ್ಗೆ ಮಾಹಿತಿ ನೀಡಿದ ರಿಷಿ ಧವನ್, ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಹಿಮಾಚಲ ಪ್ರದೇಶ ಕ್ರಿಕೆಟ್ ತಂಡದ ನಾಯಕ ಮತ್ತು ಟೀಂ ಇಂಡಿಯಾದ ಮಾಜಿ ಆಲ್ರೌಂಡರ್ ರಿಷಿ ಧವನ್ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ನಿವೃತ್ತಿಯ ನಿರ್ಧಾರವನ್ನು ಘೋಷಿಸಿದ್ದಾರೆ. 34 ವರ್ಷದ ರಿಷಿ ಧವನ್ ಭಾರತೀಯ ಕ್ರಿಕೆಟ್ನಲ್ಲಿ ಸೀಮಿತ ಓವರ್ಗಳ ಸ್ವರೂಪದಿಂದ ನಿವೃತ್ತಿ ಹೊಂದುವುದಾಗಿ ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ. ಇದರರ್ಥ ರಿಷಿ ಧವನ್ ವಿಜಯ್ ಹಜಾರೆ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡುವುದಿಲ್ಲ. ಅವರು ಪ್ರಥಮ ದರ್ಜೆಯಲ್ಲಿ ಅಂದರೆ ರಣಜಿ ಟ್ರೋಫಿಯಲ್ಲಿ ಆಡುತ್ತಾರೆ.
ಧವನ್ ಐಪಿಎಲ್ನಲ್ಲಿ ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. 2013 ರಲ್ಲಿ ಮುಂಬೈ ಇಂಡಿಯನ್ಸ್, 2014-2024 ರ ವರೆಗೆ ಪಂಜಾಬ್ ಕಿಂಗ್ಸ್ XI ನ ಭಾಗವಾಗಿದ್ದರು. ಈ ಪಂದ್ಯಾವಳಿಯಲ್ಲಿ ಅವರು 39 ಪಂದ್ಯಗಳಲ್ಲಿ 25 ವಿಕೆಟ್ಗಳೊಂದಿಗೆ 210 ರನ್ ಗಳಿಸಿದರು.
ಇದನ್ನೂ ಓದಿ: IND vs AUS: ಭಾರತಕ್ಕೆ ಹೀನಾಯ ಸೋಲು.. 10 ವರ್ಷಗಳ ನಂತರ ಕೈ ತಪ್ಪಿದ ಪ್ರಶಸ್ತಿ!
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.