ಈ ಮೂರು ರಾಶಿಯವರ ಮೇಲೆ ಜೀವನ ಪೂರ್ತಿ ಇರುತ್ತದೆಯಂತೆ ಗಣೇಶನ ಕೃಪೆ, ಪ್ರತಿ ಕೆಲಸದಲ್ಲೂ ನೀಡುತ್ತಾನೆ ಯಶಸ್ಸು

ಗಣಪತಿಯ ಆಶೀರ್ವಾದ ಪಡೆದ ವ್ಯಕ್ತಿ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ. ಈ ಮೂರು ರಾಶಿಯವರ ಮೇಲೆ ಗಣಪತಿ ಆಶೀರ್ವಾದ ಇರಲಿದೆ. 

Written by - Ranjitha R K | Last Updated : May 20, 2022, 09:34 AM IST
  • ಜ್ಯೋತಿಷ್ಯದಲ್ಲಿ 12 ರಾಶಿಚಕ್ರ ಚಿಹ್ನೆಗಳಿವೆ.
  • ಕೆಲವು ರಾಶಿಗಳ ಮೇಲೆ ಗಣೇಶನ ವಿಶೇಷ ಅನುಗ್ರಹವಿದೆ.
  • ಗಣಪತಿಯ ಕೃಪೆಯಿದ್ದರೆ, ವ್ಯಕ್ತಿಯ ಜೀವನ ಸುಖಮಯವಾಗಿರುತ್ತದೆ.
ಈ ಮೂರು ರಾಶಿಯವರ ಮೇಲೆ ಜೀವನ ಪೂರ್ತಿ ಇರುತ್ತದೆಯಂತೆ ಗಣೇಶನ ಕೃಪೆ, ಪ್ರತಿ ಕೆಲಸದಲ್ಲೂ ನೀಡುತ್ತಾನೆ ಯಶಸ್ಸು   title=
ganesha blessing zodiac sign (file photo)

ಬೆಂಗಳೂರು : ಜ್ಯೋತಿಷ್ಯದಲ್ಲಿ 12 ರಾಶಿಚಕ್ರ ಚಿಹ್ನೆಗಳಿವೆ. ಈ 12 ರಾಶಿಗಳಲ್ಲಿ ಕೆಲವು ರಾಶಿಗಳ ಮೇಲೆ ಗಣೇಶನ ವಿಶೇಷ ಅನುಗ್ರಹವಿದೆ. ಗಣಪತಿಯು ಮೊದಲು ಪೂಜಿಸುವ ದೇವರು. ಯಾವುದೇ ಕೆಲಸ ಮಾಡಬೇಕಾದರೂ ವಿಘ್ನವಿನಾಶಕನಾದ ಗಣಪತಿಗೆ ಪೂಜೆ ಸಲ್ಲಿಸಲಾಗುತ್ತದೆ. ಗಣಪತಿಯ ಕೃಪೆಯಿದ್ದರೆ, ವ್ಯಕ್ತಿಯ ಜೀವನ ಸುಖಮಯವಾಗಿರುತ್ತದೆ. ಗಣಪತಿಯ ಆಶೀರ್ವಾದ ಪಡೆದ ವ್ಯಕ್ತಿ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ. ಈ ಮೂರು ರಾಶಿಯವರ ಮೇಲೆ  ಗಣಪತಿ ಆಶೀರ್ವಾದ ಇರಲಿದೆ. 

ಮೇಷ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷ ರಾಶಿಯ ಮೇಲೆ ಗಣೇಶನ ವಿಶೇಷ ಆಶೀರ್ವಾದವಿರುತ್ತದೆ.
ಈಕಾರಣದಿಂದಲೇ ಈ ರಾಶಿಯ ಜನರು ತುಂಬಾ ಬುದ್ಧಿವಂತರಾಗಿರುತ್ತಾರೆ. ಮೇಷ ರಾಶಿಯವರು ಎಲ್ಲಾ ವಿಷಯಗಳಲ್ಲೂ ಪರಿಣತರು. ಗಣಪತಿಯ ಕೃಪೆಯಿಂದ ಮೇಷ ರಾಶಿಯವರಿಗೆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಈ ಜನರಲ್ಲಿ ಆತ್ಮವಿಶ್ವಾಸದ ಕೊರತೆ ಇರುವುದಿ ಲ್ಲ. ಮೇಷ ರಾಶಿಯ ಜನರು ವಿಧಿವಿಧಾನಗಳ ಪ್ರಕಾರ ಗಣಪತಿಯನ್ನು ಪ್ರತಿನಿತ್ಯ ಪೂಜಿಸಬೇಕು.

ಇದನ್ನೂ ಓದಿ : ಮುಂದಿನ ಒಂದು ವರ್ಷದವರೆಗೆ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ, ಗುರು ಹರಿಸಲಿದ್ದಾನೆ ಕೃಪಾ ದೃಷ್ಟಿ

ಮಿಥುನ ರಾಶಿ : 
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗಣಪತಿಯು ಮಿಥುನ ರಾಶಿಯ ಮೇಲೆ ದಯೆ ತೋರುತ್ತಾನೆ. ಮಿಥುನ ರಾಶಿಯ ಜನರು ಕೂಡಾ  ತುಂಬಾ ಬುದ್ಧಿವಂತರಾಗಿರುತ್ತಾರೆ. ಮಿಥುನ ರಾಶಿಯ ಜನರು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಯಶಸ್ವಿಯಾಗುತ್ತಾರೆ. ಓದು ಬರಹದ ವಿಚಾರದಲ್ಲಿ ಈ ರಾಶಿಯವರು ಬಹಳ ಮುಂದಿರುತ್ತಾರೆ. ಮಿಥುನ ರಾಶಿಯವರನ್ನು ಯಾವುದೇ ವಿಚಾರದಲ್ಲಿ ಸೋಲಿಸುವುದು ಕಷ್ಟ. ಈ ರಾಶಿಯ ಜನರು ಪ್ರತಿದಿನ ಗಣಪತಿಯನ್ನು ಪೂಜಿಸಬೇಕು.

ಮಕರ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಕರ ರಾಶಿಯವರ ಮೇಲೆ ಗಣೇಶ ವಿಶೇಷ ಅನುಗ್ರಹ ತೋರುತ್ತಾನೆ, ಮಕರ ರಾಶಿಯವರು ಶ್ರಮಜೀವಿಗಳು. ಈ ರಾಶಿಯ ಜನರನ್ನು ಯಾವುದೇ ಅಳುಕಿಲ್ಲದೆ ನಂಬಬಹುದು.  ಇವ್ರು ಯಾವುದೇ ಕೆಲಸ ಶುರು ಮಾಡುವಾಗಲೂ ಭವಿಷ್ಯದ ಬಗ್ಗೆಯಿ ಯೋಚನೆ ಮಾಡಿಯೇ ಆ ಕೆಲಸ ಮಾಡುತ್ತಾರೆ. ಈ ರಾಶಿಯವರು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಗಳಿಸುತ್ತಾರೆ. ಮಕರ ರಾಶಿಯವರು ಪ್ರತಿದಿನ ಗಣಪತಿಯನ್ನು ಧ್ಯಾನಿಸಬೇಕು.

ಇದನ್ನೂ ಓದಿ : Friday Remedies: ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಶುಕ್ರವಾರ ಪೂಜೆಯಲ್ಲಿ ಈ ಕೆಲಸ ಮಾಡಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News