ನವದೆಹಲಿ : ಚಹಾ ಇಲ್ಲದೆ ದಿನವನ್ನು ಆರಂಭಿಸುವುದು ಕೆಲವರಿಗೆ ಸಾಧ್ಯವೇ ಇಲ್ಲ. ಬೆಳಗೆದ್ದು, ಚಹಾ ಕುಡಿಯುವುದು ನಮ್ಮ ಬೆಳಗಿನ ದಿನಚರಿಯ ಅವಿಭಾಜ್ಯ ಅಂಗವಾಗಿದೆ. ಪ್ರತಿಯೊಬ್ಬರೂ ಚಹಾ (Tea) ಕುಡಿಯುವ ವಿಭಿನ್ನ ವಿಧಾನಗಳನ್ನು ಅಳವಡಿಸಿಕೊಂಡಿರುತ್ತಾರೆ. ಕೆಲವರು ಚಹಾವನ್ನು ತುಂಬಾ ಇಷ್ಟಪಡುತ್ತಾರೆ. ಈ ಕಾರಣದಿಂದ ಬೆಳಿಗ್ಗೆಯೇ ಹೆಚ್ಚು ಚಹಾವನ್ನು ತಯಾರಿಸಿ ಇಟ್ಟುಕೊಂಡು ಬಿಡುತ್ತಾರೆ. ನಂತರ ತಮಗೆ ಬೇಕಾದಾಗ ಅದನ್ನು ಮತ್ತೆ ಮತ್ತೆ ಬಿಸಿ (Rehating tea) ಮಾಡಿ ಕುಡಿಯುತ್ತಲೇ ಇರುತ್ತಾರೆ.
ಆದರೆ, ಚಹಾವನ್ನು ಹೀಗೆ ಪದೇ ಪದೇ ಬಿಸಿ ಮಾಡಿ, ಕುಡಿಯುವುದು ಆರೋಗ್ಯಕ್ಕೆ ತುಂಬಾ (side effects of reheating a tea) ಹಾನಿಕಾರಕವಾಗಿದೆ. ಹೀಗೆ ಮಾಡುವುದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಚಹಾವನ್ನು ಹೀಗೆ ಪದೇ ಪದೇ ಬಿಸಿ ಮಾಡಿ ಕುಡಿಯುವುದರಿಂದ ಉಂಟಾಗುವ ಅಡ್ಡಪರಿಣಾಮಗಳು ಯವುವು ಎನ್ನುವುದು ತಿಳಿದಿದೆಯೇ?
ಇದನ್ನೂ ಓದಿ: ಈ ಪ್ರಯೋಜನಗಳಿಗಾಗಿ ಅನ್ನ ನೆನೆಸಿಟ್ಟ ನೀರನ್ನು ಖಾಲಿ ಹೊಟ್ಟೆಗೆ ಒಂದು ವಾರಗಳ ಕಾಲ ಸೇವಿಸಿ
ಚಹಾವನ್ನು ಪದೇ ಪದೇ ಬಿಸಿ ಮಾಡಿದರೆ ಏನಾಗುತ್ತದೆ ?
ತಜ್ಞರ ಪ್ರಕಾರ, ಚಹಾವನ್ನು ಮತ್ತೆ ಮತ್ತೆ ಬಿಸಿ ಮಾಡಿದಾಗ ಅದರ ರುಚಿ ಜೊತೆಗೆ ಪರಿಮಳವೂ ಕೂಡ ಕಡಿಮೆಯಾಗುತ್ತದೆ. ಅಲ್ಲದೇ ಚಹಾದ ಪೌಷ್ಟಿಕಾಂಶ ಅಥವಾ ಅದರ ವಿಶೇಷತೆ ಕೂಡ ಕಡಿಮೆಯಾಗಲು ಆರಂಭವಾಗುತ್ತದೆ. ಚಹಾವನ್ನು ಪುನಃ ಬಿಸಿ ಮಡಿ ಕುಡಿಯುವುದರ ಎರಡನೇ ಅನಾನುಕೂಲವೆಂದರೆ ದೀರ್ಘಕಾಲದವರೆಗೆ ಇರಿಸಲಾದ ಚಹಾದಲ್ಲಿ ಸೂಕ್ಷ್ಮಜೀವಿಗಳ ಬೆಳವಣಿಗೆ ಆರಂಭವಾಗುತ್ತದೆ. ಇದನ್ನು ಸೇವಿಸುವುದರಿಂದ ಹೊಟ್ಟೆಗೆ (Stomach problems) ಅಪಾಯಕಾರಿಯಾಗಬಹುದು. ಈ ಕಾರಣದಿಂದಾಗಿ, ಹೊಟ್ಟೆ ನೋವು, ಕಾಣಿಸಿಕೊಳ್ಳಬಹುದು. ಇನ್ನು ಹರ್ಬಲ್ ಚಹಾವನ್ನು ಪುನಃ ಬಿಸಿಮಾಡಿ ಸೇವಿಸುವುದರಲ್ಲಿಯೂ ಅದೇ ಸಮಸ್ಯೆಯಿದೆ.
ಹೆಚ್ಚು ಚಹಾ ಕುಡಿಯುವುದರಿಂದ ಆಗುವ ಅಡ್ಡಪರಿಣಾಮಗಳು:
ಚಹಾದಲ್ಲಿರುವ (Tea) ಟ್ಯಾನಿನ್ ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ದೇಹಕ್ಕೆ ಸಾಕಷ್ಟು ಐರನ್ ಸಿಗುವುದಿಲ್ಲ. ಹೆಚ್ಚು ಚಹಾ ಕುಡಿಯುವುದರಿಂದ (Side effects of tea) ಕರುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರೊಂದಿಗೆ, ಅಸಹಜ ಹೃದಯ ಬಡಿತ, ಹೃದಯ ರೋಗ, ಸ್ಥೂಲಕಾಯತೆ, ಆಸಿಡಿಟಿ (Acidity) ಅಪಾಯವೂ ಹೆಚ್ಚಾಗುತ್ತದೆ.
ಇದನ್ನೂ ಓದಿ: ಮಹಿಳೆಯರು ಈ ಸಮಯದಲ್ಲಿ ಪ್ರತಿದಿನ 1 ಬಾಳೆಹಣ್ಣನ್ನು ತಿಂದರೆ ದೂರವಾಗುತ್ತವೆ ಈ ಸಮಸ್ಯೆಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.