Be Careful: ಈ 4 ರಾಶಿಯ ಜನರು ಕೊನೆ ಉಸಿರು ಇರುವವರೆಗೂ ಹಗೆತನ ಸಾಧಿಸುತ್ತಾರೆ

ಸಿಂಹ ರಾಶಿಯ ಜನರು ಮೊದಲಿಗೆ ಯಾರೊಂದಿಗೂ ದ್ವೇಷ ಸಾಧಿಸುವುದಿಲ್ಲ, ಆದರೆ ತಮ್ಮ ಅಧಿಕಾರಯುತ ನಡವಳಿಕೆಯಿಂದ ಬೇರೆಯವರ ಜೀವನದಲ್ಲಿ ಆಟವಾಡುತ್ತಾರೆ.

Written by - Puttaraj K Alur | Last Updated : Feb 15, 2022, 11:13 PM IST
  • ಜ್ಯೋತಿಷ್ಯವು ಪ್ರತಿಯೊಂದು ರಾಶಿಚಕ್ರದ ಶಕ್ತಿ ಮತ್ತು ದೋಷಗಳ ಬಗ್ಗೆ ಹೇಳುತ್ತದೆ
  • ಕೆಲವು ರಾಶಿಯ ಜನರು ಹಗೆತನ ಸಾಧಿಸುವಲ್ಲಿ ತುಂಬಾ ನಿಪುಣರಾಗಿರುತ್ತಾರೆ
  • ಮೇಷ ರಾಶಿಯ ಜನರು ಸಾಮಾನ್ಯವಾಗಿ ತಮ್ಮನ್ನು ಇತರರಿಗಿಂತ ಶ್ರೇಷ್ಠರೆಂದು ಪರಿಗಣಿಸುತ್ತಾರೆ
Be Careful: ಈ 4 ರಾಶಿಯ ಜನರು ಕೊನೆ ಉಸಿರು ಇರುವವರೆಗೂ ಹಗೆತನ ಸಾಧಿಸುತ್ತಾರೆ title=
ಮೇಷ ರಾಶಿಯವರನ್ನು ಅಹಂಕಾರ ಸ್ವಭಾವದವರೆಂದು ಪರಿಗಣಿಸಲಾಗುತ್ತದೆ

ನವದೆಹಲಿ: ಜ್ಯೋತಿಷ್ಯವು ಪ್ರತಿಯೊಂದು ರಾಶಿಚಕ್ರದ ಶಕ್ತಿ ಮತ್ತು ದೋಷಗಳ ಬಗ್ಗೆ ಹೇಳುತ್ತದೆ. ಕೆಲವು ರಾಶಿಚಕ್ರದ ಜನರು ತುಂಬಾ ಭಾವನಾತ್ಮಕರಾಗಿರುತ್ತಾರೆ, ಆದರೆ ಕೆಲವರು ಅತ್ಯಂತ ಪ್ರಾಯೋಗಿಕ ರೀತಿಯಲ್ಲಿ ಬದುಕಲು ಇಷ್ಟಪಡುತ್ತಾರೆ. ಕೆಲ ರಾಶಿಯ ಜನರು ಸಾಹಸಮಯ ಪ್ರವೃತ್ತಿ ಹೊಂದಿರುತ್ತಾರೆ, ಆದರೆ ಕೆಲ ರಾಶಿಯವರು ಅಂಜುಬುರುಕವಾಗಿರುತ್ತಾರೆ. ಇದಲ್ಲದೆ ಕೆಲವು ರಾಶಿಯ ಜನರು ಹಗೆತನ ಸಾಧಿಸುವಲ್ಲಿ ನಿಪುಣರಾಗಿರುತ್ತಾರೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಮೇಷ ರಾಶಿ (Aries)

ಈ ರಾಶಿಚಕ್ರದ ಜನರನ್ನು ಅಹಂಕಾರದ ಸ್ವಭಾವದವರೆಂದು ಪರಿಗಣಿಸಲಾಗುತ್ತದೆ. ಮೇಷ ರಾಶಿಯ ಜನರು ಸಾಮಾನ್ಯವಾಗಿ ತಮ್ಮನ್ನು ಇತರರಿಗಿಂತ ಶ್ರೇಷ್ಠರೆಂದು ಪರಿಗಣಿಸುತ್ತಾರೆ. ಈ ಮನಸ್ಥಿತಿಯಿಂದಾಗಿ ಅವರು ಕೆಲವೊಮ್ಮೆ ಇತರರಿಗೆ ಅನ್ಯಾಯ ಮಾಡುತ್ತಾರೆ. ಈ ರಾಶಿಯ ಜನರು ಅಹಂಕಾರದಿಂದ ಉತ್ತಮ ಸ್ನೇಹಿತರಾಗುವುದಿಲ್ಲ. ಅಲ್ಲದೆ ಈ ರಾಶಿಯ ಜನರು ಬಹುಬೇಗ ಯಾರನ್ನಾದರೂ ಶತ್ರುವನ್ನಾಗಿ ಮಾಡುತ್ತಾರೆ.

ಇದನ್ನೂ ಓದಿ: ರತ್ನದ ಉಂಗುರ ತೊಟ್ಟರೂ ಅದೃಷ್ಟ ಬದಲಾಗುತ್ತಿಲ್ಲ.. ಹಾಗಾದರೆ ಖಂಡಿತ ಈ ಕೆಲಸ ಮಾಡಿ

ಸಿಂಹ ರಾಶಿ (Leo)

ಸಿಂಹ ರಾಶಿಯ ಜನರು ಮೊದಲಿಗೆ ಯಾರೊಂದಿಗೂ ದ್ವೇಷ ಸಾಧಿಸುವುದಿಲ್ಲ, ಆದರೆ ತಮ್ಮ ಅಧಿಕಾರಯುತ ನಡವಳಿಕೆಯಿಂದ ಬೇರೆಯವರ ಜೀವನದಲ್ಲಿ ಆಟವಾಡುತ್ತಾರೆ. ನಂತರ ಅವರನ್ನು ಶತ್ರುವನ್ನಾಗಿ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಈ ರಾಶಿಯವರು ಯಾರನ್ನಾದರೂ ಶತ್ರುವನ್ನಾಗಿ ಮಾಡಿಕೊಂಡರೆ ಕೊನೆ ಉಸಿರು ಇರುವವರೆಗೂ ಹಗೆತನ ಸಾಧಿಸುತ್ತಾರೆ. ಆಮೇಲೆ ಏನೇ ಆಗಲಿ ತಲೆಕೆಡಿಸಿಕೊಳ್ಳುವುದಿಲ್ಲ. ಕೋಪಗೊಂಡ ನಂತರ ಈ ರಾಶಿಚಕ್ರದ ಜನರು ಆಕ್ರಮಣಕಾರಿ, ನೀಚ, ಸ್ವಾರ್ಥಿ ಮತ್ತು ಅತಿಸೂಕ್ಷ್ಮರಾಗುತ್ತಾರೆ.

ವೃಶ್ಚಿಕ ರಾಶಿ  (Scorpio)

ವೃಶ್ಚಿಕ ರಾಶಿಯ ಜನರು ಸಾಮಾನ್ಯವಾಗಿ ತಮ್ಮನ್ನು ತಾವು ಕೆಟ್ಟವರನ್ನಾಗಿಸಿಕೊಳ್ಳಲು ಇಷ್ಟಪಡುತ್ತಾರೆ. ಆದರೆ ಏನಾದರೂ ಮಾತಾಡಿ ಬೇರೆಯವರ ಮೇಲೆ ಕೋಪ ಮಾಡಿಕೊಂಡರೆ ಸೇಡು ತೀರಿಸಿಕೊಳ್ಳಲು ಯಾವ ಮಟ್ಟಕ್ಕೆ ಬೇಕಾದರೂ ಹೋಗಬಹುದು. ಅವರು ತಮ್ಮ ಕೆಲಸದಲ್ಲಿ ಯಾರ ಹಸ್ತಕ್ಷೇಪವನ್ನು ಇಷ್ಟಪಡುವುದಿಲ್ಲ. ಯಾರಾದರೂ ತಮ್ಮ ಕೆಲಸದಲ್ಲಿ ಹಸ್ತಕ್ಷೇಪ ಮಾಡಿದರೆ ದ್ವೇಷ ಸಾಧಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಈ ರಾಶಿಯ ಜನರೊಂದಿಗೆ ಎಚ್ಚರಿಕೆಯಿಂದ ಮಾತನಾಡಬೇಕು. ಅಲ್ಲದೆ ಅವರಿಂದ ಸರಿಯಾದ ಅಂತರವನ್ನು ಕಾಯ್ದುಕೊಳ್ಳಬೇಕು.

ಇದನ್ನೂ ಓದಿ: ಶನಿ-ಗುರು ಸೇರಿದಂತೆ ಈ ಗ್ರಹಗಳಲ್ಲಿ ಹಿಮ್ಮುಖ ಚಲನೆ: ನಿಮ್ಮ ಜೀವನದ ಮೇಲೆ ಏನು ಪರಿಣಾಮ..?

ಧನು ರಾಶಿ (Sagittarius)

ಧನು ರಾಶಿ ಜನರು ದೀರ್ಘಕಾಲದವರೆಗೆ ಯಾರನ್ನೂ ದ್ವೇಷಿಸುವುದಿಲ್ಲ. ಅವರು ದ್ವೇಷವನ್ನು ಸಹಿಸುವುದಿಲ್ಲ, ಆದ್ದರಿಂದ ಈ ರಾಶಿಚಕ್ರದ ಜನರು ಯಾರ ಮೇಲೂ ಸೇಡು ತೀರಿಸಿಕೊಳ್ಳಲು ಹೆಚ್ಚು ಸಮಯ ಕಳೆಯುವುದಿಲ್ಲ. ಅಲ್ಲದೆ ಈ ರಾಶಿಚಕ್ರದ ಜನರು ಸ್ನೇಹಿತರನ್ನು ಮಾಡಿಕೊಳ್ಳಲು ಅಥವಾ ಪ್ರಯಾಣಿಸಲು ತಮ್ಮ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಇವರ ಗಮನವು ವೃತ್ತಿ ಮತ್ತು ಉದ್ಯೋಗದ ಮೇಲಿರುತ್ತದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News