Health Tips: ಅತಿಯಾಗಿ ಟೀ ಕುಡಿಯುತ್ತೀರಾ? ಹಾಗಿದ್ದರೆ ಕಾದಿದೆ ನಿಮಗೆ ಅಪಾಯ..!

ಅತಿಯಾಗಿ ಟೀ ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆ ಉಂಟಾಗುತ್ತದೆ. ಇದು ನಿಮ್ಮ ಜೀರ್ಣಕ್ರಿಯೆಯನ್ನು ಹಾಳು ಮಾಡುತ್ತದೆ.

Written by - Puttaraj K Alur | Last Updated : Jun 8, 2022, 07:48 PM IST
  • ಟೀ-ಕಾಫಿ ಸೇವನೆ ಅತಿಯಾದರೆ ಅಪಾಯ ನಿಮ್ಮ ಬೆನ್ನೇರಿ ಕಾಡಲಿದೆ!
  • ಟೀ ಕುಡಿಯುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಯಿರಿ
  • ಅತಿಯಾಗಿ ಟೀ ಸೇವಿಸುವುದರಿಂದ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ
Health Tips: ಅತಿಯಾಗಿ ಟೀ ಕುಡಿಯುತ್ತೀರಾ? ಹಾಗಿದ್ದರೆ ಕಾದಿದೆ ನಿಮಗೆ ಅಪಾಯ..!  title=
ಟೀ ಕುಡಿಯುವುದರಿಂದ ಆಗುವ ದುಷ್ಪರಿಣಾಮ

ನವದೆಹಲಿ: ಟೀ ಭಾರತೀಯರ ನೆಚ್ಚಿನ ಪಾನೀಯಗಳಲ್ಲಿ ಒಂದಾಗಿದೆ. ಅದೇ ರೀತಿ ಬಹುತೇಕ ಜನರ ದಿನಚರಿಯು ಚಹಾದೊಂದಿಗೆ ಪ್ರಾರಂಭವಾಗುತ್ತದೆ. ಕೆಲವರು ತಿಂಡಿಗಳೊಂದಿಗೆ ಚಹಾ ಸೇವಿಸಿದರೆ, ಕೆಲವರಿಗೆ ಪದೇ ಪದೇ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ಅತಿಯಾಗಿ ಚಹಾ ಕುಡಿಯುವ ಅಭ್ಯಾಸವು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕ.

ದಿನಕ್ಕೆ 2 ಕಪ್ ಚಹಾ ಕುಡಿಯುವುದು ಕೆಟ್ಟ ಅಭ್ಯಾಸವಲ್ಲ. ಆದರೆ, ಇದಕ್ಕಿಂತ ಹೆಚ್ಚು ಚಹಾ ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ. ಹೀಗಾಗಿ ನೀವು ಈ ಕೆಟ್ಟ ಅಭ್ಯಾಸವನ್ನು ಬಿಡಬೇಕು. ಇಲ್ಲದಿದ್ದರೆ ನಿಮ್ಮ ಜೀವಕ್ಕೆ ಇದು ಕುತ್ತಾಗುತ್ತದೆ. ನೀವು ಪ್ರತಿದಿನ ಲವಲವಿಕೆಯಿಂದ ಇರಬೇಕೆಂದರೆ ಪ್ರತಿದಿನ ನಿಯಮಿತವಾಗಿ ಚಹಾ ಸೇವಿಸುವುದು ಉತ್ತಮ. ಇಲ್ಲದಿದ್ದರೆ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.

ಇದನ್ನೂ ಓದಿ: Urad Dal Side Effects : ಈ ಆರೋಗ್ಯ ಸಮಸ್ಯೆಗಳಿರುವವರು ಉದ್ದಿನಬೇಳೆ ತಿನ್ನಲೇಬಾರದು..!

ಹೆಚ್ಚು ಚಹಾ ಕುಡಿಯುವುದರ ಅಪಾಯ!

ಹೊಟ್ಟೆಗೆ ಹಾನಿಕಾರಕ

ಅತಿಯಾಗಿ ಟೀ ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆ ಉಂಟಾಗುತ್ತದೆ. ಇದು ನಿಮ್ಮ ಜೀರ್ಣಕ್ರಿಯೆಯನ್ನು ಹಾಳು ಮಾಡುತ್ತದೆ. ಅತಿಯಾಗಿ ಟೀ ಕುಡಿಯುವುದರಿಂದ ಗ್ಯಾಸ್, ಹೊಟ್ಟೆ ಉಬ್ಬುವುದು ಮತ್ತು ಮಲಬದ್ಧತೆಯಂತಹ ಸಮಸ್ಯೆಗಳು ಸಹ ಉಂಟಾಗಬಹುದು. ಹೀಗಾಗಿ ಇಂದೇ ಈ ಕೆಟ್ಟ ಅಭ್ಯಾಸವನ್ನು ಬಿಟ್ಟುಬಿಡಿ.

ಎದೆಯುರಿ ಸಮಸ್ಯೆ

ಅನೇಕ ಜನರು ಸಾಮಾನ್ಯವಾಗಿ ಎದೆಯುರಿ, ಹೊಟ್ಟೆಯಲ್ಲಿ ಗ್ಯಾಸ್, ಅಜೀರ್ಣ ಮತ್ತು ಹುಳಿ ತೇಗು ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಾರೆ. ನೀವು ಹೆಚ್ಚು ಚಹಾವನ್ನು ಸೇವಿಸುವುದರಿಂದ ಇದು ಸಂಭವಿಸುತ್ತದೆ. ಇದು ನಿಮ್ಮ ಜೀರ್ಣಕ್ರಿಯೆಗೆ ಹೆಚ್ಚು ಹಾನಿಯನ್ನುಂಟುಮಾಡುತ್ತದೆ.

ಇದನ್ನೂ ಓದಿ: ಹಾರ್ಟ್ ಅಟ್ಯಾಕ್ ಅಪಾಯವನ್ನು ಕಡಿಮೆ ಮಾಡುತ್ತದೆ ಈ ಸೊಪ್ಪು ..!

ಹೆಚ್ಚು ಚಹಾ ಕುಡಿಯುವ ಅಭ್ಯಾಸ ಕಡಿಮೆ ಮಾಡುವ ಮಾರ್ಗ:

  1. ಚಹಾದ ಅತಿಯಾದ ಸೇವನೆಯನ್ನು ತಪ್ಪಿಸಲು ಸುಲಭವಾದ ಮಾರ್ಗವೆಂದರೆ ನಿಮಗೆ ಚಹಾ ಕುಡಿಯಬೇಕು ಅನಿಸಿದಾಗ ಅದರ ಬದಲಿಗೆ ಆರೋಗ್ಯಕರವಾದದ್ದನ್ನು ಕುಡಿಯಿರಿ. ನೀವು ಚಹಾದ ಬದಲಿಗೆ ಜ್ಯೂಸ್ ಅನ್ನು ಕುಡಿಯಬಹುದು.
  2.  ನಿಮಗೆ ಅತಿಯಾಗಿ ಚಹಾ ಸೇವಿಸುವ ಅಭ್ಯಾಸವಿದ್ದರೆ ಒಂದೇ ದಿನ ಬಿಡಬೇಡಿ. ಇದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಕಾರಕ. ಚಹಾವನ್ನು ಕ್ರಮೇಣವಾಗಿ ಬಿಡಲು ನೀವು ಪ್ರತಿದಿನ ಒಂದು ಕಪ್ ಚಹಾ ಕಡಿಮೆ ಮಾಡುತ್ತಾ ಬನ್ನಿ.
  3. ಚಹಾದ ಸೇವನೆ ಕಡಿಮೆ ಮಾಡಲು ನೀವು ದಿನವಿಡೀ ಹೆಚ್ಚು ದ್ರವಪದಾರ್ಥಗಳನ್ನು ಸೇವಿಸಬೇಕು. ಇದು ನಿಮ್ಮ ದೇಹದಲ್ಲಿ ಶಕ್ತಿಯನ್ನು ಉಳಿಸಿಕೊಳ್ಳುತ್ತದೆ ಮತ್ತು ನಿಮ್ಮ ಚಹಾದ ಹಂಬಲವನ್ನು ಕಡಿಮೆ ಮಾಡುತ್ತದೆ.
  4. ನಿಮಗೆ ನಿದ್ರಾಹೀನತೆ ಸಮಸ್ಯೆ ಇದ್ದರೆ ಅತಿಯಾಗಿ ಚಹಾ ಸೇವಿಸುವುದು ಸರಿಯಲ್ಲ. ನಿಮಗೆ ಉತ್ತಮ ನಿದ್ರೆ ಬರಬೇಕಾದರೆ ಚಹಾವನ್ನು ಕ್ರಮೇಣವಾಗಿ ಕಡಿಮೆ ಮಾಡುತ್ತಾ ಬನ್ನಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News