ನಂದಿಗಿರಿಧಾಮ ಪ್ರದಕ್ಷಿಣೆ ಮಾಡಿದ್ರೆ ಕೈಲಾಸ ಪರ್ವತವನ್ನೇ ಸುತ್ತಿದಷ್ಟು ಪುಣ್ಯವಂತೆ!

Panchagiri Dhama: ತಣ್ಣನೆ ಬೀಸುವ ಚಳಿ ಚಳಿ ಗಾಳಿಯಲ್ಲಿ, ಹರಿ ನಾಮ ಸ್ಮರಣೆ ಮಾಡುತ್ತಾ......... ಕಾಲ್ನಡಿಗೆಯಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಪಂಚಗಿರಿಗಳ ಸಾಲಿನಲ್ಲಿ ಭಕ್ತರು ಪ್ರದಕ್ಷಿಣೆ ಹಾಕುತ್ತಿರುವುದು. ನಂದಿಬೆಟ್ಟದ ಮೇಲೆ ಯೋಗ ನಂದೀಶ್ವರ, ಬೆಟ್ಟದ ಕೆಳಗೆ ಭೋಗ ನಂದೀಶ್ವರ, ಇವರಿಬ್ಬರ ಮಧ್ಯೆ ವಿಶಾಲವಾಗಿ ಹರಡಿರುವ ಸ್ಕಂದಗಿರಿ, ದಿಬ್ಬಗಿರಿ, ಚಂದ್ರಗಿರಿ ಸೇರಿದಂತೆ ಐದು ಬೆಟ್ಟಗಳ ಸಾಲಿನ ನಡುವೆ ಭಕ್ತ ಸಮೂಹ, ಶಿವನನ್ನು ನೆನೆಯುತ್ತಾ  ಹಾಡು ಭಜನೆ ಮಾಡುತ್ತಾ  ಸಾಗ್ತಿದ್ರೆ ಕೈಲಾಸವೆ ಧರೆಗಿಳಿದಂತಾಗಿತ್ತು. 

Written by - Yashaswini V | Last Updated : Jul 11, 2023, 11:08 AM IST
  • ಪ್ರತಿ ವರ್ಷ ಆಷಾಡ ಮಾಸದ ಕೊನೆ ಸೋಮವಾರ ದಿನದಂದು ಈ ರೀತಿ ಗಿರಿಪ್ರದಕ್ಷಿಣೆ ಹಾಕುತ್ತಾರೆ.
  • ಹದಿನಾರು ಕಿ.ಮೀ ಕಾಲ್ನಡಿಗೆ ಮೂಲಕ ನಂದಿಗಿರಿಧಾಮ ಪ್ರದಕ್ಷಣೆ.
  • ರಾಜ್ಯದ ವಿವಿಧ ಮೂಲೆಗಳಿಂದ ಬಂದ ಸಾವಿರಾರು ಭಕ್ತಾದಿಗಳು.!
ನಂದಿಗಿರಿಧಾಮ ಪ್ರದಕ್ಷಿಣೆ ಮಾಡಿದ್ರೆ ಕೈಲಾಸ ಪರ್ವತವನ್ನೇ ಸುತ್ತಿದಷ್ಟು ಪುಣ್ಯವಂತೆ!  title=

Nandi Giridhama: ಭಕ್ತರ ಕೂಗಿಗೆ ಓಡೋಡಿ ಬರುವ ಭೋಲೇನಾಥ, ಕೈಲಾಸವಾಸಿ ಶಿವನನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಎಲ್ಲರಿಗೂ ಕೈಲಾಸ ಪರ್ವತವನ್ನು ಏರಿ, ಶಿವನ ದರ್ಶಣ ಪಡೆಯಲು ಸಾಧ್ಯವಾಗುವುದಿಲ್ಲ. ಅಂತಹವರು, ರಾಜ್ಯ ರಾಜಧಾನಿಯ ಪಕ್ಕದಲ್ಲಿಯೇ ಇರುವ ವಿಶ್ವಪ್ರಸಿದ್ಧ ಗಿರಿಧಾಮಗಳ್ಳಿ ಒಂದಾದ ನಂದಿಗಿರಿಧಾಮವನ್ನು ಪ್ರದಕ್ಷಿಣೆ ಹಾಕಿದರೆ ಅಷ್ಟೇ ಸಾಕು, ಕೈಲಾಸ ಪರ್ವತವನ್ನೇ ಸುತ್ತಿದಷ್ಟು ಪುಣ್ಯ ಸೀತುತ್ತಂತೆ. ಈ ರೀತಿ ನಂಬಿಕೆ ಇಟ್ಟಿರುವ ಸಾವಿರಾರು ಮಂದಿ ಶಿವನ ಭಕ್ತರು, ಬರೋಬ್ಬರಿ 16 ಕೀಲೋ ಮೀಟರ್ ಸುತ್ತಳತೆಯ ನಂದಿ ಗಿರಿಧಾಮವನ್ನು  ಪ್ರದಕ್ಷಿಣೆ ಹಾಕಿದ್ದಾರೆ. 

ಹೀಗೆ...  ತಣ್ಣನೆ ಬೀಸುವ ಚಳಿ ಚಳಿ ಗಾಳಿಯಲ್ಲಿ, ಹರಿ ನಾಮ ಸ್ಮರಣೆ ಮಾಡುತ್ತಾ......... ಕಾಲ್ನಡಿಗೆಯಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಪಂಚಗಿರಿಗಳ ಸಾಲಿನಲ್ಲಿ ಭಕ್ತರು ಪ್ರದಕ್ಷಿಣೆ ಹಾಕುತ್ತಿರುವುದು. ನಂದಿಬೆಟ್ಟದ ಮೇಲೆ ಯೋಗ ನಂದೀಶ್ವರ, ಬೆಟ್ಟದ ಕೆಳಗೆ ಭೋಗ ನಂದೀಶ್ವರ, ಇವರಿಬ್ಬರ ಮಧ್ಯೆ ವಿಶಾಲವಾಗಿ ಹರಡಿರುವ ಸ್ಕಂದಗಿರಿ, ದಿಬ್ಬಗಿರಿ, ಚಂದ್ರಗಿರಿ ಸೇರಿದಂತೆ ಐದು ಬೆಟ್ಟಗಳ ಸಾಲಿನ ನಡುವೆ ಭಕ್ತ ಸಮೂಹ, ಶಿವನನ್ನು ನೆನೆಯುತ್ತಾ  ಹಾಡು ಭಜನೆ ಮಾಡುತ್ತಾ  ಸಾಗ್ತಿದ್ರೆ ಕೈಲಾಸವೆ ಧರೆಗಿಳಿದಂತಾಗಿತ್ತು. ಇನ್ನೂ ಮಕ್ಕಳಿಂದ ವೃದ್ದರವರೆಗೂ  16 ಕೀಲೋ ಮೀಟರ್ ಸುತ್ತಳತೆಯ ನಂದಿಗಿರಿಧಾಮವನ್ನು ಪ್ರದಕ್ಷಣೆ ಹಾಕಿ ಶಿವನ ಭಕ್ತರು ಸಂತಸ ಹಂಚಿಕೊಂಡರು. 

ಇದನ್ನೂ ಓದಿ- ಭಾರತದಲ್ಲಿ ನೀವು ಭೇಟಿ ನೀಡಲೇಬೇಕಾದ ನಿಗೂಢ ದೇವಾಲಯಗಳಿವು..!

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಬಾಗೇಪಲ್ಲಿ, ಗುಡಿಬಂಡೆ, ಬೆಂಗಳೂರು ಗ್ರಾಮಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಸೇರಿದಂತೆ ನೆರೆಯ ಆಂಧ್ರದ ಹಿಂದೂಪುರ, ಅನಂತಪುರದಿಂದಲೂ ಭಕ್ತ ಸಮೂಹ ನಂದಿಹಿಲ್ಸ್ ನ  ಗಿರಿಪ್ರದಕ್ಷಣೆಗೆ  ಹರಿದು ಬಂದಿತ್ತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರಲ್ಲಿ ದೇವಾಂಗ ಜನಾಂಗಕ್ಕೆ ಸೇರಿದ  ಭಕ್ತ ಸಮೂಹ ಹೆಚ್ಚಾಗಿತ್ತು. ಪ್ರತಿ ವರ್ಷ ಆಷಾಡ ಮಾಸದ ಕೊನೆ ಸೋಮವಾರ ದಿನದಂದು ಈ  ರೀತಿ ಗಿರಿಪ್ರದಕ್ಷಿಣೆ ಹಾಕುತ್ತಾರೆ. ಪ್ರತಿದಿನ ಮನೆಯ ಬಳಿ ಒಂದು ಕೀಲೋ ಮೀಟರ್ ವಾಕಿಂಗ್ ಮಾಡಲು ಬೇಸರ ಮಾಡಿಕೊಳ್ಳುವ ಮಹಿಳೆಯರಂತೂ... ಮುಗಬಿದ್ದು 16 ಕೀಲೋ ಮೀಟರ್ ಪ್ರದಕ್ಷಣೆ ಹಾಕಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ- ಭಾರತದ ಪ್ರಸಿದ್ಧ ಜೈನ ದೇವಾಲಯಗಳಿವು..ಒಮ್ಮೆ ಬೇಟಿ ನೀಡಿ

ಶಿವನ ಭಕ್ತರಿಗೆ ಬೇಸರವಾಗದಿರಲಿ ಎಂದು ಆಗಾಗ ತುಂತುರು ಮಳೆ ಸುರಿದು, ರಸ್ತೆ ತಂಪಾಗುವಂತೆ ಮಾಡಿದ್ದು ವಿಶೇಷವಾಗಿತ್ತು. ಇನ್ನೂ ನಂದಿಯ ಶ್ರೀ ಭೋಗನಂಧಿಶ್ವರ ಸ್ವಾಮಿ ದೇವಸ್ಥಾನದಿಂದ ಹೊರಟು ಮತ್ತೆ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಮಾಡುವುದರ ಮೂಲಕ ಗಿರಿಪ್ರದಕ್ಷಣೆ ಮುಕ್ತಾಯ ಮಾಡಿದರು. 

ಈ ಸುಂದರ ಕ್ಷಣವನ್ನು ಕಣ್ತುಂಬಿಕೊಳ್ಳಲು ಈ ವಿಡಿಯೋವನ್ನು ವೀಕ್ಷಿಸಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News