Karnataka Shakti Scheme: 300 ಕೋಟಿ ರೂ. ದಾಟಿದ ಮಹಿಳಾ ‘ಶಕ್ತಿ’ ಪ್ರದರ್ಶನ!

Karnataka Shakti Scheme: ಕಳೆದ ಜೂನ್ 11ರಿಂದ ಜುಲೈ 3ರವರೆಗೆ 2,95,18,38,306 ರೂ.ನಷ್ಟು ಉಚಿತ ಟಿಕೆಟ್‍ಗಳನ್ನು ಮಹಿಳೆಯರಿಗೆ ನೀಡಲಾಗಿದೆ. ಈವರೆಗೆ 10,54,45,047 ಮಹಿಳೆಯರು ಉಚಿತ ಸೌಲಭ್ಯ ಪಡೆದಿದ್ದಾರೆ.

Written by - Puttaraj K Alur | Last Updated : Jul 4, 2023, 07:57 PM IST
  • ರಾಜ್ಯ ಸರ್ಕಾರದ ‘ಶಕ್ತಿ' ಯೋಜನೆ ಮಂಗಳವಾರ 24ನೇ ದಿನಕ್ಕೆ ಕಾಲಿಟ್ಟಿದೆ
  • ರಾಜ್ಯದ ಮಹಿಳಾ "ಶಕ್ತಿ" ಸಂಚಾರ 300 ಕೋಟಿ ರೂ. ಮೌಲ್ಯ ದಾಟಿದೆ
  • ಕಳೆದ 24 ದಿನಗಳಲ್ಲಿ 10,54,45,047 ಮಹಿಳಾ ಪ್ರಯಾಣಿಕರು ಸಂಚಾರ
Karnataka Shakti Scheme: 300 ಕೋಟಿ ರೂ. ದಾಟಿದ ಮಹಿಳಾ ‘ಶಕ್ತಿ’ ಪ್ರದರ್ಶನ! title=
300 ಕೋಟಿ ರೂ. ದಾಟಿದ ಮಹಿಳಾ ‘ಶಕ್ತಿ’ ಪ್ರದರ್ಶನ!

ಬೆಂಗಳೂರು: ‘ಶಕ್ತಿ’ ಯೋಜನೆಡಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 4 ನಿಗಮಗಳ ಬಸ್‌ಗಳಲ್ಲಿ ಸಂಚರಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸೋಮವಾರ(ಜುಲೈ 3)ವೂ 67.15 ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ. ಯೋಜನೆ ಜಾರಿ ನಂತರದಿಂದ ಈವರೆಗೆ ಮಹಿಳಾ ಪ್ರಯಾಣಿಕರ ಟಿಕೆಟ್‌ ಮೌಲ್ಯ 300 ಕೋಟಿ ರೂ. ತಲುಪಿದೆ.  

ಮಹಿಳೆಯರಿಗೆ ಉಚಿತ ಸಾರಿಗೆ ಬಸ್ ಸೇವೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, 4 ನಿಗಮಗಳಲ್ಲೂ ‘ಶಕ್ತಿ’ ಪ್ರದರ್ಶನವಾಗುತ್ತಿದೆ. ನಿಗಮದ ಮಾಹಿತಿ ಪ್ರಕಾರ ಸೋಮವಾರ ಒಂದೇ ದಿನ ಸುಮಾರು 67,15,081 ಮಹಿಳೆಯರು ಉಚಿತವಾಗಿ ಬಸ್‍ನಲ್ಲಿ ಪ್ರಯಾಣಿಸಿದ್ದಾರೆ. ಇದರಲ್ಲಿ ಕೆಎಸ್‍ಆರ್‍ಟಿಸಿಯಲ್ಲಿ 21,50,178 ಮಹಿಳೆಯರು, ಬಿಎಂಟಿಸಿಯಲ್ಲಿ 20,27,323, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆಯಲ್ಲಿ 15,92,310 ಹಾಗೂ ಕರಾವಳಿ ಕರ್ನಾಟಕ ಸಾರಿಗೆಯಲ್ಲಿ 9,45,270 ಮಹಿಳೆಯರು ಪ್ರಯಾಣಿಸಿದ್ದಾರೆ.

ಇದನ್ನೂ ಓದಿ: ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ..! ಹೆಚ್ಚುವರಿ ದಟ್ಟಣೆ ಕಡಿಕೆ ಮಾಡಲು ವಿಶೇಷ ರೈಲುಗಳ ಸೇವೆ ವಿಸ್ತರಣೆ

ಜುಲೈ 3ರಂದು ಒಟ್ಟಾರೆ 1,18,21,391 ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಈ ಪೈಕಿ 67,15,841 ಕಳೆದರೆ ಉಳಿದವರು (ಶೇ.45ರಷ್ಟು) ಹಣ ಕೊಟ್ಟು ಪ್ರಯಾಣಿಸಿದ್ದಾರೆ. ಇನ್ನು ಕಳೆದ ಜೂನ್ 11ರಿಂದ ಜುಲೈ 3ರವರೆಗೆ 2,95,18,38,306 ರೂ.ನಷ್ಟು ಉಚಿತ ಟಿಕೆಟ್‍ಗಳನ್ನು ಮಹಿಳೆಯರಿಗೆ ನೀಡಲಾಗಿದೆ. ಈವರೆಗೆ 10,54,45,047 ಮಹಿಳೆಯರು ಉಚಿತ ಸೌಲಭ್ಯ ಪಡೆದಿದ್ದಾರೆ.

ಜುಲೈ 3ರಂದು ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ವಿವರ

KSRTC – 21,50,178

ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 6,96,88,028 ರೂ. ಆಗುತ್ತದೆ

ಬಿಎಂಟಿಸಿ- 20,27,323

ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 2,70,97,866 ರೂ. ಆಗುತ್ತದೆ

ವಾಯುವ್ಯ ಸಾರಿಗೆ- 15,92,310

ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 4,36,20,674 ರೂ. ಆಗುತ್ತದೆ

ಕಲ್ಯಾಣ ಕರ್ನಾಟಕ ಸಾರಿಗೆ – 9,45,270

ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 3,41,211,30 ರೂ. ಆಗುತ್ತದೆ.

ಒಟ್ಟು ಪ್ರಯಾಣ ‌ಮಾಡಿದ‌ ಮಹಿಳೆಯರ ಸಂಖ್ಯೆ- 67,15,081

ಒಟ್ಟು ಮಹಿಳೆಯರ ಪ್ರಯಾಣ ದ ಮೌಲ್ಯ - 17,45,27,698 ರೂ. ಆಗುತ್ತದೆ

ಜೂನ್ 11 ರಿಂದ ಜುಲೈ 3ರವರೆಗೂ ಪ್ರಯಾಣ ಮಾಡಿದ ಮಹಿಳೆಯರ ಸಂಖ್ಯೆ- 12,37,71,430

ಒಟ್ಟು 10 ದಿನಗಳ ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 295,18,38,306 ರೂ. ಆಗಿದೆ.

ಇದನ್ನೂ ಓದಿ: Karnataka Assembly Session: ವಿಧಾನಸಭೆಯಲ್ಲಿ ಗದ್ದಲ, ಕೋಲಾಹಲ, BJP ಸದಸ್ಯರಿಂದ ಆಕ್ರೋಶ!

ಉಚಿತ ಬಸ್ ಪ್ರಯಾಣ ಯೋಜನೆ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಒಂದೊಂದೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. 5 ಗ್ಯಾರಂಟಿಗಳ ಪೈಕಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ನೀಡುವ ‘ಶಕ್ತಿ ಯೋಜನೆ’ ಸಹ ಒಂದು. ಜೂನ್‌ 11ರಿಂದ ಈ ಯೋಜನೆ ಜಾರಿಯಾಗಿದ್ದು, ರಾಜ್ಯದ ಎಲ್ಲಾ ಮಹಿಳೆಯರಿಗೂ ಉಚಿತ್‌ ಬಸ್‌ ಪ್ರಯಾಣದ ಅವಕಾಶ ನೀಡಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News