ಜೆಡಿಎಸ್ ನಲ್ಲಿ ಪ್ರಜ್ವಲ್ ರೇವಣ್ಣನಿಗೆ ಕೊನೆಗೂ ಸಿಕ್ಕಿತು ಸ್ಥಾನ !

        

Last Updated : Nov 27, 2017, 12:55 PM IST
ಜೆಡಿಎಸ್ ನಲ್ಲಿ  ಪ್ರಜ್ವಲ್ ರೇವಣ್ಣನಿಗೆ ಕೊನೆಗೂ ಸಿಕ್ಕಿತು ಸ್ಥಾನ ! title=

ಬೆಂಗಳೂರು : ಕರ್ನಾಟಕ ಪ್ರದೇಶ ಜಾತ್ಯತೀತ ಜನತಾದಳದ ಯುವ ನಾಯಕ ಎಂದೇ ಖ್ಯಾತಿ ಪಡೆದಿದ್ದ ಪ್ರಜ್ವಲ್ ರೇವಣ್ಣ ಅವರಿಗೆ ಕೊನೆಗೂ ಪಕ್ಷದಲ್ಲಿ ಸ್ಥಾನ ದೊರೆತಿದೆ. ಅವರನ್ನು ಜೆಡಿಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆದೇಶ ಹೊರಡಿಸಿದ್ದಾರೆ.

ಹೆಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ಆಗಿಂದಾಗೆ ತಮ್ಮ ವಿವಾದಿತ ಹೇಳಿಕೆಯಿಂದಾಗಿ ಸುದ್ದಿಯಲ್ಲಿದ್ದರು. ಅಲ್ಲದೆ ಜೆಡಿಎಸ್ ಯುವನಾಯಕ ಎಂದೂ ಗುರುತಿಸಲ್ಪಟ್ಟಿದ್ದರು. ಆದರೆ ಇದುವರೆಗೂ ಅವರಿಗೆ ಪಕ್ಷದಲ್ಲಿ ಯಾವುದೇ ಹುದ್ದೆ ನೀಡಿರಲಿಲ್ಲ. ಆದರೀಗ ಪ್ರಜ್ವಲ್ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡುವ ಮೂಲಕ ಜೆಡಿಎಸ್ ನಲ್ಲಿ ಒಂದು ಸ್ಥಾನ ಸಿಕ್ಕಂತಾಗಿದೆ.

Trending News