ಐಪಿಎಸ್ ಅಧಿಕಾರಿ ಸೋಗಿನಲ್ಲಿ 1.75 ಕೋಟಿ ವಂಚಿಸಿದ ನಕಲಿ‌ ಎಸ್ಪಿ..!

ಬೆಂಗಳೂರು: ಇತ್ತೀಚೆಗೆ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಹೆಸರಿನಲ್ಲಿ ಲಕ್ಷಾಂತರ ಮೌಲ್ಯದ ಚಿನ್ನದ ಗಟ್ಟಿ ಎಗರಿಸಿದ್ದ ಬೆನ್ನಲ್ಲೇ ಮತ್ತೊಂದು ನಕಲಿ ಪೊಲೀಸ್ ವಂಚನೆ ಕಥೆ ಬಟಬಯಲಾಗಿದೆ‌. ಎಸ್ಪಿ ಎಂದು ಹೇಳಿಕೊಂಡು ವ್ಯಕ್ತಿಯೋರ್ವರಿಂದ 1.75 ಕೋಟಿ ರೂಪಾಯಿ ವಂಚಿಸಿದ್ದು, ಈ ಸಂಬಂಧ ತಲಘಟ್ಟಪುರ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Written by - VISHWANATH HARIHARA | Last Updated : Mar 14, 2023, 03:52 PM IST
  • ಎಸ್ಪಿ ಎಂದು ಹೇಳಿಕೊಂಡು ವ್ಯಕ್ತಿಯೋರ್ವರಿಂದ 1.75 ಕೋಟಿ ರೂಪಾಯಿ ವಂಚಿಸಿದ್ದು,
  • ಇದನ್ನ ನಂಬಿದ ವೆಂಕಟನಾರಾಯಣ ಹಣ ಅರೆಂಜ್ ಮಾಡಿ‌ ಕೊಟ್ಟಿದ್ದರು.
  • ಈ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಐಪಿಎಸ್ ಅಧಿಕಾರಿ ಸೋಗಿನಲ್ಲಿ 1.75 ಕೋಟಿ ವಂಚಿಸಿದ ನಕಲಿ‌ ಎಸ್ಪಿ..!           title=

ವಂಚನೆಗೊಳಗಾದ ವೆಂಕಟರಮಣಪ್ಪ ಎಂಬುವರು ನೀಡಿದ ದೂರಿನ ಮೇರೆಗೆ ನಕಲಿ ಎಸ್ಪಿ ಶ್ರೀನಿವಾಸ್ ವಿರುದ್ಧ  ಪ್ರಕರಣ ದಾಖಲಾಗಿದೆ. ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಾಡುವ ವೆಂಕಟರಮಣಪ್ಪಗೆ  2022ರಲ್ಲಿ ಶ್ರೀನಿವಾಸ್ ಪರಿಚಯವಾಗಿತ್ತು. ಈ ವೇಳೆ‌ ಬೆಂಗಳೂರಿನ ದಕ್ಷಿಣ ವಿಭಾಗದ ಎಎಸ್ಪಿ ಎಂದು ಪರಿಚಯಿಸಿಕೊಂಡಿದ್ದ ಈ ಆರೋಪಿ. ಕಾಲಕ್ರಮೇಣ ಇಬ್ಬರು ಆತ್ಮೀಯತೆ ಬೆಳೆದಿದೆ. ಜೊತೆಗೆ ಪೊಲೀಸ್ ಠಾಣೆಗೆ ಭೇಟಿ ನೀಡಿ ನಾ ಪ್ರೊಬೆಷನರಿ ಎಸ್ಪಿ ಆದಷ್ಟು ಬೇಗ ನಿಮ್ಮ ಡಿವಿಷನ್ ಗೆ ಬರ್ತಿನಿ ಎಂದಿದ್ದ. 

ಐಪಿಎಸ್ ಅಧಿಕಾರಿ ಎಂಬ ಕಾರಣಕ್ಕೆ ಸ್ವಲ್ಪ ಮಟ್ಟಿಗೆ ಆತ್ಮೀಯತೆ ಬೆಳೆದಿದ್ದು, ನಂತರ ವೆಂಕಟನಾರಾಯಣ , ಶ್ರೀನಿವಾಸ್ ಇನ್ನು ಹಲವರು ಸೇರಿ ಕಾರಿನಲ್ಲಿ ತಿರುಪತಿಗೆ ಹೋಗಿದ್ರಂತೆ. ಈ ವೇಳೆ  ತಾನು ಮೈಸೂರಿನಲ್ಲಿರುವ  ಲ್ಯಾಂಡ್ ಲಿಟಿಗೇಷನ್  ಹ್ಯಾಂಡಲ್ ಮಾಡುತ್ತಿದ್ದೇನೆ. ಸಕ್ಸಸ್ ಆದರೆ 450‌ ಕೋಟಿಯಲ್ಲಿ 250 ಕೋಟಿ ಬರುತ್ತೆ. ಎಲ್ಲಾ ಮುಗಿದು ಕೇಸ್ ರೆವಿನ್ಯೂ ಡಿಪಾರ್ಟ್ಮೆಂಟ್ ಬಳಿ ಇದೆ. ಹೀಗಾಗಿ 2.5‌ಕೋಟಿ ಹಣ ಬೇಕು ಅರೆಂಜ್ ಮಾಡಿ ಕೊಡಿ ಎಂದು ವೆಂಕಟನಾರಾಯಣ ಬಳಿ ಕೇಳಿದ್ದ. 

ಇದನ್ನೂ ಓದಿ-ಸಾಕಷ್ಟು ನಿಗೂಢವಾಯ್ತು ವಿ. ಸೋಮಣ್ಣನ ನಡೆ...! 

ಇದನ್ನ ನಂಬಿದ ವೆಂಕಟನಾರಾಯಣ ಹಣ ಅರೆಂಜ್ ಮಾಡಿ‌ ಕೊಟ್ಟಿದ್ದರು.  ದುಡ್ಡು ಸಿಗುತ್ತಿದ್ದಂತೆ ನಕಲಿ ಅಧಿಕಾರಿಯ ಅಸಲಿತ್ತು ಹೊರಬಿದ್ದಿದೆ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಶ್ರೀನಿವಾಸ್ ಎಸ್ಕೇಪ್ ಆಗಿದ್ದ . ಎಲ್ಲಿಯೂ ಸುಳಿವು ಬಿಡದ  ನಕಲಿ‌  ಅಧಿಕಾರಿ ಶ್ರೀನಿವಾಸ್ ಎಲ್ಲರಿಗೂ ಯಾಮಾರಿಸಿ‌ ಎಸ್ಕೇಪ್ ಆಗಿದ್ದಾನೆ.
ಇನ್ನು ತನ್ನ ಸ್ನೇಹಿತರಿಂದಲೂ ಹಣ ಪಡೆದ ಹಿನ್ನೆಲೆ ವೆಂಕಟನಾರಾಯಣ ಸಂಕಷ್ಟಕ್ಕೆ ಒಳಗಾಗಿದ್ದು ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಈ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

​ಇದನ್ನೂ ಓದಿ-ಉರಿಗೌಡ, ನಂಜೇಗೌಡ ದ್ವಾರ ವಿವಾದ : ಡಿಜಿಪಿ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು - ಡಿಕೆಶಿ ಆಗ್ರಹ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News