SBI Recruitment 2024: SBI ಬ್ಯಾಂಕ್​​ನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ

SBI Recruitment 2024: ಒಟ್ಟು 31 ಡಿಫೆನ್ಸ್​ ಬ್ಯಾಂಕಿಂಗ್ ಅಡ್ವೈಸರ್ & ಚಾರ್ಟರ್ಡ್​ ಅಕೌಂಟೆಂಟ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ನಾಳೆ(ಜೂನ್ 27)ಯೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಆನ್​​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. 

Written by - Puttaraj K Alur | Last Updated : Jun 26, 2024, 08:18 PM IST
  • ನೀವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿದ್ದೀರಾ..?
  • ಡಿಗ್ರಿ ಪಾಸಾಗಿದ್ರೆ ಇಲ್ಲಿದೆ ನೋಡಿ ಬಂಪರ್ ಉದ್ಯೋಗಾವಕಾಶ
  • ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾದಲ್ಲಿ ವಿವಿಧ ಹುದ್ದೆಗಳ ನೇಮಕಾತಿ
SBI Recruitment 2024: SBI ಬ್ಯಾಂಕ್​​ನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ title=
SBI Recruitment 2024

SBI Recruitment 2024: ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 31 ಡಿಫೆನ್ಸ್​ ಬ್ಯಾಂಕಿಂಗ್ ಅಡ್ವೈಸರ್ & ಚಾರ್ಟರ್ಡ್​ ಅಕೌಂಟೆಂಟ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ನಾಳೆ(ಜೂನ್ 27)ಯೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಆನ್​​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

ಹುದ್ದೆಯ ಮಾಹಿತಿ: ಡಿಫೆನ್ಸ್​ ಬ್ಯಾಂಕಿಂಗ್ ಅಡ್ವೈಸರ್ 1, ಸರ್ಕಲ್ ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್ 1, ಸರ್ಕಲ್ ಡಿಫೆನ್ಸ್​ ಬ್ಯಾಂಕಿಂಗ್ ಅಡ್ವೈಸರ್ 1, ಸೀನಿಯರ್ ವೈಸ್ ಪ್ರೆಸಿಡೆಂಟ್(ಇನ್​ಫ್ರಾಸ್ಟ್ರಕ್ಚರ್ ಸೆಕ್ಯುರಿಟಿ & ಸ್ಪೆಷಲ್ ಪ್ರಾಜೆಕ್ಟ್​) 1, ಸೀನಿಯರ್ ವೈಸ್ ಪ್ರೆಸಿಡೆಂಟ್ (ಇನ್ಫರ್ಮೇಶನ್ ಸೆಕ್ಯುರಿಟಿ ಆಪರೇಶನ್ಸ್) 1, ಸಪೋರ್ಟ್​ ಆಫೀಸರ್- ಟ್ರೇಡ್ ಫೈನಾನ್ಸ್​ 7, ಕ್ಲೈಮೇಟ್ ರಿಸ್ಕ್​ ಸ್ಪೆಷಲಿಸ್ಟ್​ 2, ಮಾರ್ಕೆಟ್ ರಿಸ್ಕ್​ ಸ್ಪೆಷಲಿಸ್ಟ್ 3, ಚಾರ್ಟರ್ಡ್​ ಅಕೌಂಟೆಂಟ್​ 9, ರಿಸರ್ಚ್ ಅನಾಲಿಸ್ಟ್ ಫಾರೆಕ್ಸ್​ 1, ರಿಸರ್ಚ್​ ಅನಾಲಿಸ್ಟ್​ ಈಕ್ವಿಟಿ 2 ಮತ್ತು ರಿಸರ್ಚ್​ ಅನಾಲಿಸ್ಟ್ ಪ್ರೈವೇಟ್ ಈಕ್ವಿಟಿ 2 ಹುದ್ದೆಗಳು ಖಾಲಿ ಇವೆ. 

ಇದನ್ನೂ ಓದಿ: Om Birla: ಲೋಕಸಭೆಯ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ

ವಿದ್ಯಾರ್ಹತೆ: ಡಿಫೆನ್ಸ್​ ಬ್ಯಾಂಕಿಂಗ್ ಅಡ್ವೈಸರ್‌, ಸರ್ಕಲ್ ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್, ಸರ್ಕಲ್ ಡಿಫೆನ್ಸ್​ ಬ್ಯಾಂಕಿಂಗ್ ಅಡ್ವೈಸರ್, ಮತ್ತು ಸಪೋರ್ಟ್​ ಆಫೀಸರ್- ಟ್ರೇಡ್ ಫೈನಾನ್ಸ್​ ನಿಯಮಾನುಸಾರ ವಿದ್ಯಾರ್ಹತೆ ಹೊಂದಿರಬೇಕು. ಸೀನಿಯರ್ ವೈಸ್ ಪ್ರೆಸಿಡೆಂಟ್(ಇನ್​ಫ್ರಾಸ್ಟ್ರಕ್ಚರ್ ಸೆಕ್ಯುರಿಟಿ & ಸ್ಪೆಷಲ್ ಪ್ರಾಜೆಕ್ಟ್​)ಗೆ ಬಿಇ/ಬಿ.ಟೆಕ್, ಎಂ.ಟೆಕ್, ಎಂ.ಎಸ್ಸಿ, ಎಂಸಿಎ, ಸೀನಿಯರ್ ವೈಸ್ ಪ್ರೆಸಿಡೆಂಟ್(ಇನ್ಫರ್ಮೇಶನ್ ಸೆಕ್ಯುರಿಟಿ ಆಪರೇಶನ್ಸ್​)ಗೆ ಬಿಇ/ಬಿ.ಟೆಕ್, ಎಂ.ಟೆಕ್, ಎಂ.ಎಸ್ಸಿ, ಎಂಸಿಎ, ಕ್ಲೈಮೇಟ್ ರಿಸ್ಕ್​ ಸ್ಪೆಷಲಿಸ್ಟ್‌ಗೆ ಸ್ನಾತಕೋತ್ತರ ಪದವಿ, ಎಂಬಿಎ, ಮಾರ್ಕೆಟ್ ರಿಸ್ಕ್​ ಸ್ಪೆಷಲಿಸ್ಟ್‌ಗೆ ಸಿಎ, ICWA, ಎಂಬಿಎ, ಚಾರ್ಟರ್ಡ್​ ಅಕೌಂಟೆಂಟ್​- ಸಿಎ, ರಿಸರ್ಚ್ ಅನಾಲಿಸ್ಟ್‌ಗೆ ಫಾರೆಕ್ಸ್​- ಎಂಬಿಎ, ಪಿಜಿಡಿಬಿಎಂ, ಸಿಎಫ್​ಎ, ಸಿಎ, ICWA, ಪದವಿ, ರಿಸರ್ಚ್​ ಅನಾಲಿಸ್ಟ್​ ಈಕ್ವಿಟಿಗೆ ಎಂಬಿಎ, ಪಿಜಿಡಿಬಿಎಂ, ಸಿಎಫ್​ಎ, ಸಿಎ, ICWA, ಪದವಿ ಮತ್ತು ರಿಸರ್ಚ್​ ಅನಾಲಿಸ್ಟ್ ಪ್ರೈವೇಟ್ ಈಕ್ವಿಟಿಗೆ ಎಂಬಿಎ, ಪಿಜಿಡಿಬಿಎಂ, ಸಿಎಫ್​ಎ, ಸಿಎ, ICWA, ಪದವಿ ಹೊಂದಿರಬೇಕು.

ವಯೋಮಿತಿ: ಡಿಫೆನ್ಸ್​ ಬ್ಯಾಂಕಿಂಗ್ ಅಡ್ವೈಸರ್‌ಗೆ 62 ವರ್ಷ, ಸರ್ಕಲ್ ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್‌ಗೆ 60 ವರ್ಷ, ಸರ್ಕಲ್ ಡಿಫೆನ್ಸ್​ ಬ್ಯಾಂಕಿಂಗ್ ಅಡ್ವೈಸರ್‌ಗೆ 60 ವರ್ಷ, ಸೀನಿಯರ್ ವೈಸ್ ಪ್ರೆಸಿಡೆಂಟ್(ಇನ್​ಫ್ರಾಸ್ಟ್ರಕ್ಚರ್ ಸೆಕ್ಯುರಿಟಿ & ಸ್ಪೆಷಲ್ ಪ್ರಾಜೆಕ್ಟ್​)ಗೆ 36 ರಿಂದ 50 ವರ್ಷ, ಸೀನಿಯರ್ ವೈಸ್ ಪ್ರೆಸಿಡೆಂಟ್(ಇನ್ಫರ್ಮೇಶನ್ ಸೆಕ್ಯುರಿಟಿ ಆಪರೇಶನ್ಸ್​)ಗೆ 36ರಿಂದ 50 ವರ್ಷ, ಸಪೋರ್ಟ್​ ಆಫೀಸರ್‌ಗೆ ಟ್ರೇಡ್ ಫೈನಾನ್ಸ್​-65 ವರ್ಷ, ಕ್ಲೈಮೇಟ್ ರಿಸ್ಕ್​ ಸ್ಪೆಷಲಿಸ್ಟ್‌ಗೆ 25ರಿಂದ 40 ವರ್ಷ, ಮಾರ್ಕೆಟ್ ರಿಸ್ಕ್​ ಸ್ಪೆಷಲಿಸ್ಟ್‌ಗೆ 28ರಿಂದ 40 ವರ್ಷ, ಚಾರ್ಟರ್ಡ್​ ಅಕೌಂಟೆಂಟ್‌ಗೆ 25ರಿಂದ 35 ವರ್ಷ, ರಿಸರ್ಚ್ ಅನಾಲಿಸ್ಟ್‌ಗೆ ಫಾರೆಕ್ಸ್​- 24ರಿಂದ 36 ವರ್ಷ, ರಿಸರ್ಚ್​ ಅನಾಲಿಸ್ಟ್​ ಈಕ್ವಿಟಿಗೆ 24ರಿಂದ 36 ವರ್ಷ, ರಿಸರ್ಚ್​ ಅನಾಲಿಸ್ಟ್ ಪ್ರೈವೇಟ್ ಈಕ್ವಿಟಿಗೆ 24ರಿಂದ 36 ವರ್ಷ ಮತ್ತು ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ: ಡಿಫೆನ್ಸ್​ ಬ್ಯಾಂಕಿಂಗ್ ಅಡ್ವೈಸರ್- ವಾರ್ಷಿಕ ಪ್ಯಾಕೇಜ್ 34 ಲಕ್ಷದ 50 ಸಾವಿರ, ಸರ್ಕಲ್ ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್-ವಾರ್ಷಿಕ ಪ್ಯಾಕೇಜ್ 24 ಲಕ್ಷದ 50 ಸಾವಿರ, ಸರ್ಕಲ್ ಡಿಫೆನ್ಸ್​ ಬ್ಯಾಂಕಿಂಗ್ ಅಡ್ವೈಸರ್- ವಾರ್ಷಿಕ ಪ್ಯಾಕೇಜ್ 24 ಲಕ್ಷದ 50 ಸಾವಿರ, ಸೀನಿಯರ್ ವೈಸ್ ಪ್ರೆಸಿಡೆಂಟ್(ಇನ್​ಫ್ರಾಸ್ಟ್ರಕ್ಚರ್ ಸೆಕ್ಯುರಿಟಿ & ಸ್ಪೆಷಲ್ ಪ್ರಾಜೆಕ್ಟ್​)-ವಾರ್ಷಿಕ ಪ್ಯಾಕೇಜ್ 75 ಲಕ್ಷ, ಸೀನಿಯರ್ ವೈಸ್ ಪ್ರೆಸಿಡೆಂಟ್ (ಇನ್ಫರ್ಮೇಶನ್ ಸೆಕ್ಯುರಿಟಿ ಆಪರೇಶನ್ಸ್​)- ವಾರ್ಷಿಕ ಪ್ಯಾಕೇಜ್ 75 ಲಕ್ಷ, ಸಪೋರ್ಟ್​ ಆಫೀಸರ್- ಟ್ರೇಡ್ ಫೈನಾನ್ಸ್​- ಮಾಸಿಕ ₹ 45,000-65,000, ಕ್ಲೈಮೇಟ್ ರಿಸ್ಕ್​ ಸ್ಪೆಷಲಿಸ್ಟ್​- ಮಾಸಿಕ ₹ 63,840-78,230, ಮಾರ್ಕೆಟ್ ರಿಸ್ಕ್​ ಸ್ಪೆಷಲಿಸ್ಟ್- ಮಾಸಿಕ ₹ 63,840-78,230, ಚಾರ್ಟರ್ಡ್​ ಅಕೌಂಟೆಂಟ್​- ಮಾಸಿಕ ₹ 48,170-49,910, ರಿಸರ್ಚ್ ಅನಾಲಿಸ್ಟ್- ಫಾರೆಕ್ಸ್​-ವಾರ್ಷಿಕ ಪ್ಯಾಕೇಜ್ 24 ಲಕ್ಷ, ರಿಸರ್ಚ್​ ಅನಾಲಿಸ್ಟ್​ ಈಕ್ವಿಟಿ- ವಾರ್ಷಿಕ ಪ್ಯಾಕೇಜ್ 24 ಲಕ್ಷ ಮತ್ತು ರಿಸರ್ಚ್​ ಅನಾಲಿಸ್ಟ್ ಪ್ರೈವೇಟ್ ಈಕ್ವಿಟಿ- ವಾರ್ಷಿಕ ಪ್ಯಾಕೇಜ್ 24 ಲಕ್ಷ ರೂ. ವೇತನ ನೀಡಲಾಗುತ್ತದೆ. 

ಇದನ್ನೂ ಓದಿ: ತಿರುಪತಿ ಭಕ್ತರಿಗೆ ಸಿಹಿ ಸುದ್ದಿ..! ಮಕ್ಕಳಿಗೆ ತಿಮ್ಮಪ್ಪನ ದರ್ಶನ ಉಚಿತ.. ವಯಸ್ಸು ಇಷ್ಟಾಗಿರಬೇಕು..

ಉದ್ಯೋಗದ ಸ್ಥಳ: ಕರ್ನಾಟಕ ಸೇರಿದಂತೆ ಭಾರತದಾದ್ಯಂತ

ಅರ್ಜಿ ಶುಲ್ಕ: SC/ST/OBC/PwBD ಅಭ್ಯರ್ಥಿಗಳು ಯಾವುದೇ ರೀತಿಯ ಅರ್ಜಿ ಶುಲ್ಲ ಇರುವುದಿಲ್ಲ. Gen/OBC/EWS ಅಭ್ಯರ್ಥಿಗಳು 750 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕು. 

ಆಯ್ಕೆ ಪ್ರಕ್ರಿಯೆ: ಶಾರ್ಟ್​ಲಿಸ್ಟಿಂಗ್, ಸಂವಹನ ಮತ್ತು ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. 

ಅರ್ಜಿ ಸಲ್ಲಿಸುವುದು ಹೇಗೆ?: ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು SBIನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ತಿಳಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News