ದರ್ಶನ್ ಒಳ್ಳೆಯವರು, ಅವರು ನಿರಪರಾಧಿಯಾಗಿ ಹೊರಬರುತ್ತಾರೆ..! ನಟ ನಾಗ ಶೌರ್ಯ

Naga Shourya on Darshan case : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಕ್ರೂರವಾಗಿ ಚಿತ್ರಹಿಂಸೆ ನೀಡಿ ಕೊಂದು ಕಾಲುವೆಗೆ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ 17 ಆರೋಪಿಗಳು ನ್ಯಾಯಂಗ ಬಂಧನದಲ್ಲಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಟಾಲಿವುಡ್‌ ನಟ ನಾಗ ಶೌರ್ಯ ಧ್ವನಿ ಎತ್ತಿದ್ದು, ದರ್ಶನ್‌ ಪರ ಮಾತನಾಡಿದ್ದಾರೆ..

Written by - Krishna N K | Last Updated : Jun 28, 2024, 01:43 PM IST
    • ರೇಣುಕಾಸ್ವಾಮಿ ಹತ್ಯೆ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಮೂಡಿಸಿದ್ದು ಗೊತ್ತೇ ಇದೆ.
    • ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಟ ದರ್ಶನ್‌, ಪವಿತ್ರ ಗೌಡ ಬಂಧನವಾಗಿದೆ
    • ದರ್ಶನ್‌ ಪ್ರಕರಣಕ್ಕೆ ಸಂಬಂಧಿಸಿ ತೆಲುಗು ನಟ ನಾಗ ಶೌರ್ಯ ಪ್ರತಿಕ್ರಿಯೆ ನೀಡಿದ್ದಾರೆ.
ದರ್ಶನ್ ಒಳ್ಳೆಯವರು, ಅವರು ನಿರಪರಾಧಿಯಾಗಿ ಹೊರಬರುತ್ತಾರೆ..! ನಟ ನಾಗ ಶೌರ್ಯ title=
Naga Shaurya

Darshan murder case : ರೇಣುಕಾಸ್ವಾಮಿ ಹತ್ಯೆ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಮೂಡಿಸಿದ್ದು ಗೊತ್ತೇ ಇದೆ. ಈ ಪ್ರಕರಣದಲ್ಲಿ ಹೀರೋ ದರ್ಶನ್, ಅವರ ಗೆಳತಿ ನಟಿ ಪವಿತ್ರಾ ಗೌಡ ಸೇರಿ ಹದಿನೇಳು ಮಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪವಿತ್ರ ಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೆ ದರ್ಶನ್ ಗ್ಯಾಂಗ್‌ ಜತೆಗೂಡಿ ರೇಣುಕಾಸ್ವಾಮಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಕಿಡ್ನಾಪ್ ಮಾಡಿ ಬರ್ಬರವಾಗಿ ಚಿತ್ರಹಿಂಸೆ ನೀಡಿ ಕೊಂದು ಕಾಲುವೆಗೆ ಎಸೆದಿರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಇನ್ನು ಈ ಪ್ರಕರಣದ ಕುರಿತು ಈಗಾಗಲೇ ಹಲವು ಸಿನಿಮಾ ಸೆಲೆಬ್ರಿಟಿಗಳು ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ. ಇದೀಗ ತೆಲುಗು ನಟ ನಾಗ ಶೌರ್ಯ ಮಾತನಾಡಿದ್ದಾರೆ.

ಇದನ್ನೂ ಓದಿ: ಕೆಜಿಎಫ್, ಕಾಟೇರ, ಕಾಂತಾರ ಬಾಕ್ಸ್ ಆಫೀಸ್ ದಾಖಲೆಗಳನ್ನು ಧ್ವಂಸ ಮಾಡಿ ಕಲ್ಕಿ ಗಳಿಸಿದ್ದೇಷ್ಟು..? 

ಈ ಪ್ರಕರಣದಲ್ಲಿ ದರ್ಶನ್‌ಗೆ ಶಿಕ್ಷೆಯಾಗಬೇಕು ಎಂದು ಹಲವು ನಟರು ಹೇಳಿದರೆ, ಇನ್ನು ಕೆಲವರು ದರ್ಶನ್‌ಗೆ ಬೆಂಬಲ ನೀಡುತ್ತಿದ್ದಾರೆ. ರೇಣುಕಾಸ್ವಾಮಿ ಹತ್ಯೆಯ ಜೊತೆಗೆ ಈ ಹಿಂದೆ ದರ್ಶನ್ ಅವರ ಹಲವು ವಿವಾದಗಳೂ ಇದೀಗ ಹೊರ ಬರುತ್ತಿವೆ. ಈ ಕ್ರಮದಲ್ಲಿ ಇತ್ತೀಚೆಗೆ ಟಾಲಿವುಡ್ ಹೀರೋ ನಾಗಶೌರ್ಯ ದರ್ಶನ್ ಅವರನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದಾರೆ.

ಮೃತರ ಕುಟುಂಬದ ಬಗ್ಗೆ ಕೇಳಿ ನನ್ನ ಹೃದಯ ಒಡೆದಿದೆ. ಈ ಕಷ್ಟದ ಸಮಯದಲ್ಲಿ ನಾನು ಅವರಿಗೆ ದೇವರು ಶಕ್ತಿಯನ್ನು ನೀಡಲಿ ಅಂತ ಬಯಸುತ್ತೇನೆ. ದರ್ಶನ್ ಕನಸಿನಲ್ಲಿಯೂ ಯಾರಿಗೂ ತೊಂದರೆ ಕೊಡುವುದಿಲ್ಲ. ಅವರು ತಮ್ಮ ಒಳ್ಳೆಯತನದಿಂದ ಅನೇಕ ಜನರಿಗೆ ಸಹಾಯ ಮಾಡಿದ್ದಾರೆ. ಅಗತ್ಯವಿರುವವರಿಗೆ ಸಹಾಯ ಮಾಡುವಲ್ಲಿ ಅವರು ಯಾವಾಗಲೂ ಮುಂದಾಳತ್ವ ವಹಿಸುತ್ತಾರೆ. 

ಇದನ್ನೂ ಓದಿ: ನಟ ಪ್ರಭಾಸ್ ಮೊದಲ ಸಿನಿಮಾದ ಸಂಭಾವನೆ ಎಷ್ಟು ಗೊತ್ತೆ..? ತಿಳಿದ್ರೆ ಇಷ್ಟೇನಾ ಅಂತೀರಾ..!

ನನಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ಶೀಘ್ರದಲ್ಲೇ ಸತ್ಯಾಂಶಗಳು ಹೊರಬರಲಿವೆ. ದರ್ಶನ್ ಮೇಲಿನ ಆರೋಪಗಳ ಸತ್ಯಾಸತ್ಯತೆ ಬಗ್ಗೆ ತೀರ್ಮಾನಕ್ಕೆ ಬರುವ ಮುನ್ನ ಟೀಕೆ ಮಾಡುವುದು ಸರಿಯಲ್ಲ. ದರ್ಶನ್ ನಿರಪರಾಧಿಯಾಗಿ ಹೊರಬರುತ್ತಾರೆ ಎಂಬ ನಂಬಿಕೆ ಇದೆ. ನಿಜವಾದ ಅಪರಾಧಿಗಳು ಖಂಡಿತಾ ಕಾನೂನಿನ ಮುಂದೆ ಬರುತ್ತಾರೆ. ಈ ಸುಳ್ಳು ಆರೋಪಗಳಿಂದ ದರ್ಶನ್ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಈ ಸಂಕಷ್ಟದ ಸಂದರ್ಭದಲ್ಲಿ ಅವರ ಖಾಸಗಿತನಕ್ಕೆ ಭಂಗ ತರಬೇಡಿ’ ಎಂದು ನಾಗಶೌರ್ಯ ಪೋಸ್ಟ್ ಮಾಡಿದ್ದಾರೆ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News