ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ: ರಾಜಕೀಯ ನಾಯಕರು ಏನ್ ಹೇಳ್ತಾರೆ?

ಈಗಾಗಲೇ 20 ರಾಜ್ಯಗಳಲ್ಲಿ ಅರಳಿರುವ ಕಮಲವನ್ನು ಕರ್ನಾಟಕದಲ್ಲೂ ಅರಳಿಸಲು ಬಿಜೆಪಿ ಮಿಷನ್ 150 ಗುರಿಯನ್ನು ಹೊಂದಿದೆ. ನಮಗೆ ಯಾವ ಮಿಷನ್ ಇಲ್ಲ, ಇರುವುದು ಕೇವಲ ವಿಶನ್ ಒಂದೇ ಎಂದು ಹೇಳುತ್ತಾ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಎರಡನೇ ಅವಧಿಗೆ ಮುಂದುವರೆಯುವ ವಿಶ್ವಾಸ ಹೊಂದಿದೆ.

Last Updated : Mar 27, 2018, 04:55 PM IST
ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ: ರಾಜಕೀಯ ನಾಯಕರು ಏನ್ ಹೇಳ್ತಾರೆ? title=

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಇದೀಗ ದಿನಗಣನೆ ಆರಂಭವಾಗಿದೆ. ರಾಜಕೀಯ ಪಕ್ಷಗಳು ಈಗಾಗಲೇ ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ರಾಷ್ಟ್ರೀಯ ಪಕ್ಷಗಳ ನಾಯಕರು ರಾಜ್ಯಕ್ಕೆ ಭೇಟಿ ನೀಡಿ ಮತದಾರರ ಓಲೈಕೆಯಲ್ಲಿ ತೊಡಗಿದ್ದಾರೆ. ಈಗಾಗಲೇ 20 ರಾಜ್ಯಗಳಲ್ಲಿ ಅರಳಿರುವ ಕಮಲವನ್ನು ಕರ್ನಾಟಕದಲ್ಲೂ ಅರಳಿಸಲು ಬಿಜೆಪಿ ಮಿಷನ್ 150 ಗುರಿಯನ್ನು ಹೊಂದಿದೆ. ನಮಗೆ ಯಾವ ಮಿಷನ್ ಇಲ್ಲ, ಇರುವುದು ಕೇವಲ ವಿಶನ್ ಒಂದೇ ಎಂದು ಹೇಳುತ್ತಾ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಎರಡನೇ ಅವಧಿಗೆ ಮುಂದುವರೆಯುವ ವಿಶ್ವಾಸ ಹೊಂದಿದೆ. ಇನ್ನು ಜೆಡಿಎಸ್ ಪ್ರಾದೇಶಿಕ ಪಕ್ಷವನ್ನು ರಾಜ್ಯದ ಜನ ಕೈಬಿಡುವುದಿಲ್ಲ ಎಂದು ನಂಬಿದ್ದಾರೆ...

ಇಂದು(ಮಾರ್ಚ್ 27) ಚುನಾವಣಾ ಆಯೋಗ ರಾಜ್ಯ ವಿಧಾನಸಭಾ ಚುನಾವಣಾ ದಿನಾಂಕವನ್ನು ಮೇ 12ಕ್ಕೆ ನಿಗದಿಗೊಳಿಸಿದೆ. ಇದೀಗ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ರಾಜಕೀಯ ನಾಯಕರು ಏನ್ ಹೇಳಿದ್ದಾರೆ ಅನ್ನೋದನ್ನ ನೋಡೋಣ...

ಮುಖ್ಯಮಂತ್ರಿ ಸಿದ್ಧರಾಮಯ್ಯ-

ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ-ಈಗಾಗಲೇ ಚುನಾವಣೆ ಘೋಷಣೆ ಆಗಿದೆ. ಮೇ.12ಕ್ಕೆ ಚುನಾವಣೆ ದಿನಾಂಕ ನಿಗದಿಯಾಗಿದೆ. ಮೇ.15ರಂದು ಚುನಾವಣೆ ಫಲಿತಾಂಶ  ಪ್ರಕಟ ಆಗುತ್ತೆ. ಮೇ.18ರಂದು ನನ್ನ ಹುಟ್ಟುಹಬ್ಬ ಇದೆ. ಆ ದಿನ ವಿಜೃಂಭಣೆಯಿಂದ ನಾಡಿನ ಜನತೆಯೊಂದಿಗೆ ಹುಟ್ಟುಹಬ್ಬ ಆಚರಣೆ ಮಾಡ್ತೀನಿ ಎನ್ನುವ ಮೂಲಕ ಚುನಾವಣೆಯಲ್ಲಿ ಜೆಡಿಎಸ್ ಜಯಭೇರಿ ಭಾರಿಸಲಿದೆ ಎಂದು ಭವಿಷ್ಯ ನುಡಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ- 
ರಾಜ್ಯದ ಜನ ಕಾಂಗ್ರೆಸ್ ಬಿಜೆಪಿ ಪಕ್ಷಗಳಿಗೆ ಪಾಠ ಕಲಿಸುತ್ತಾರೆ. ನಾನು ಮತಯಂತ್ರದ ಬಗ್ಗೆ ಯಾವುದೇ ಆರೋಪ ಮಾಡೋಲ್ಲ. ರಾಷ್ಟ್ರೀಯ ಪಕ್ಷಗಳು ಏನಾದ್ರು ಗಿಮಿಕ್ ಮಾಡಲಿ. ಆದ್ರೆ ಗೆಲ್ಲೋದು ಮಾತ್ರ ಜೆಡಿಎಸ್ ಪಕ್ಷವೇ.

ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್-

ಶೋಭಾ ಕರಂದ್ಲಾಜೆ-  

Trending News