ಅಲೋವೇರಾ ಜೊತೆ ಈ ಎಲೆ ಮಿಕ್ಸ್‌ ಮಾಡಿ ಕೂದಲಿಗೆ ಹಚ್ಚಿದ್ರೆ ಕಪ್ಪು, ಸದೃಢ ಕೇಶರಾಶಿ ನಿಮ್ಮದಾಗುತ್ತವೆ..!

Hair care tips :  ಕೂದಲು ಉದುರುವಿಕೆಗೆ ಸರಿಯಾದ ಪೋಷಣೆಯ ಕೊರತೆ, ಕಳಪೆ ಆಹಾರ ಪದ್ದತಿ, ಹೆಚ್ಚುತ್ತಿರುವ ಮಾಲಿನ್ಯ.. ಇವು ಯಾವುದೇ ಕಾರಣವಾಗಿರಬಹುದು. ಇದರ ನಡುವೆ ಅನೇಕ ಜನರು ಕೂದಲಿನ ಸಮಸ್ಯೆಗಳು ನಿಯಂತ್ರಿಸಲು ಸಾಕಷ್ಟು ಪ್ರಯತ್ನಿಸಿದ್ದಾರೆ.. ಅಂತಹವರಿಗಾಗಿ ಇಲ್ಲಿದೆ.. ವಿಶೇಷ ಸಲಹೆ..
 

1 /6

ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಲ್ಲದೆ, ಅನೇಕ ಜನರು ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲಿನ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇದು ಸಂಭವಿಸಲು ಹಲವು ಕಾರಣಗಳಿವೆ. ಇಂದು ಮನೆ ಮದ್ದುಗಳನ್ನು ಬಳಸಿ ಕೇಶರಾಶಿಯ ಆರೋಗ್ಯ ಕಾಪಾಡುವುದು ಹೇಗೆ ಎಂಬವುದನ್ನು ತಿಳಿಯೋಣ..   

2 /6

ಅಧುನಿಕ ರಾಸಾಯನಿಕ ಸೇರಿದಂತೆ ವೈಧ್ಯರು ನೀಡಿದ ಔಷಧಿಗಳನ್ನು ಬಳಸಿದರೂ.. ಪರಿಹಾರ ಸಿಗುತ್ತಿಲ್ಲವೇ..? ಆದರೆ... ನಿಮ್ಮ ಕೂದಲ ಆರೈಕೆಯನ್ನು ಒಂದು ಎಲೆ ನಿಭಾಯಿಸುತ್ತದೆ ಅಂದರೆ ನೀವು ನಂಬಲೇಬೇಕು.. ಆ ಎಲೆ ಯಾವುದು? ಅದನ್ನು ಹೇಗೆ ಬಳಸುವುದು ಎಂದು ಈಗ ನೋಡೋಣ.  

3 /6

ಭೃಂಗರಾಜ್.. ಈ ಗಿಡದ ಹೆಸರು ಕೇಳಿರುತ್ತೀರಿ. ಈ ಸಸ್ಯದ ಎಲೆಗಳು ಮತ್ತು ಕಾಂಡವು ನಿಮ್ಮ ಕೂದಲು ದಪ್ಪ ಮತ್ತು ಕಪ್ಪಾಗಿ ಬೆಳೆಯಲು ಸಹಾಯ ಮಾಡುತ್ತದೆ. ಈ ಎಲೆಗಳ ರಸವನ್ನು ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ ಮತ್ತು ನಿಯಮಿತವಾಗಿ ಕೂದಲಿಗೆ ಹಚ್ಚುವುದರಿಂದ ಸದೃಢ ಕೇಶರಾಶಿಯನ್ನು ಪಡೆಯಬಹುದು..  

4 /6

ಉದ್ದ ಕೂದಲನ್ನು ಪಡೆಯಲು ಭೃಂಗರಾಜ ಎಲೆಯ ಪುಡಿಯನ್ನು ಅಲೋವೆರಾದೊಂದಿಗೆ ಬೆರೆಸಲಾಗುತ್ತದೆ. ಇದು ಕೂದಲಿನ ರಕ್ಷಣೆಗೆ ಸಹಾಯ ಮಾಡುತ್ತದೆ. ಬಿಳಿ ಕೂದಲು ಕಪ್ಪಾಗಲು ಇದು ಪ್ರಯೋಜನಕಾರಿ. ಅಲ್ಲದೆ, ಹೊಸ ಕೂದಲು ಬೆಳೆಯಲು ಮತ್ತು ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ.  

5 /6

ಭೃಂಗರಾಜ್ ಜೊತೆಗೆ.. ಅಲೋವೆರಾ ಜೆಲ್ ಮಿಕ್ಸ್‌ ಮಾಡಿ ಒಟ್ಟಿಗೆ ಹಚ್ಚಿದರೆ ತುಂಬಾ ಒಳ್ಳೆಯದು. ಅಲೋವೆರಾ ಜೆಲ್‌ನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ ಇದ್ದು ಕೂದಲಿಗೆ ಸಮೃದ್ಧ ಪೋಷಣೆ ನೀಡುತ್ತದೆ. ಇದರ ಉತ್ಕರ್ಷಣ ನಿರೋಧಕ ಗುಣಗಳು ಕೂದಲನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಅಲೋವೆರಾ ಜೆಲ್ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು ಅದು ಕೂದಲನ್ನು ಎಲ್ಲಾ ರೀತಿಯ ಸೋಂಕುಗಳಿಂದ ರಕ್ಷಿಸುತ್ತದೆ.  

6 /6

ಮಾಸ್ಕ್‌ ಮಾಡುವ ವಿಧಾನ : ಮೊದಲು ಒಂದು ಬಟ್ಟಲಿನಲ್ಲಿ ಅಲೋವೆರಾ ಜೆಲ್ ಮತ್ತು 1 ಟೀಚಮಚ ಭೃಂಗರಾಜ್ ಪುಡಿಯನ್ನು ಮಿಶ್ರಣ ಮಾಡಿ. ಈ ಎರಡನ್ನೂ ಕೂದಲಿಗೆ ಹಚ್ಚಿ. ನಂತರ 1 ರಿಂದ 2 ಗಂಟೆಗಳ ಕಾಲ ಬಿಡಿ. ನಂತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ. ವಾರಕ್ಕೆ ಕನಿಷ್ಠ 1 ರಿಂದ 2 ಬಾರಿ ಈ ರೀತಿ ಮಾಡಿದರೆ ಉತ್ತಮ.