ನಾಳೆ ಬಾರ್ಬಡೋಸ್‌ನಿಂದ ಭಾರತಕ್ಕೆ ಮರಳಲಿದ್ದಾರೆ ಬ್ಯೂ ಬಾಯ್ಸ್‌..!

Team India Players: ಟಿ 20 ವಿಶ್ವಕಪ್ 2024ರ ವಿಜೇತ ಟೀಮ್ ಇಂಡಿಯಾ ಗುರುವಾರ ಬೆಳಿಗ್ಗೆ ಭಾರತವನ್ನು ತಲುಪುವ ಸಾಧ್ಯತೆಯಿದೆ ಎಂದು ವರಿದಿಯಾಗಿದೆ. ವಾಸ್ತವವಾಗಿ, ವಿಶ್ವಕಪ್ ನಂತರ ಭಾರತ ತಂಡ ಕಳೆದ ಸೋಮವಾರ ಮನೆಗೆ ಮರಳಬೇಕಿತ್ತು. ಆದರೆ ಭಾರೀ ಬಿರುಗಾಳಿಯಿಂದಾಗಿ ಸಂಚಾರ ಸ್ಥಗಿತಗೊಂಡ ಕಾರಣ ರೋಹಿತ್‌ ಪಡೆ ಭಾರತಕ್ಕೆ ಹಿಂದಿರುಗಲು ಸಾಧ್ಯವಾಗದೆ ಅಲ್ಲೇ ಉಳಿಯಬೇಕಾಯಿತು.
 

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಟಿ 20 ವಿಶ್ವಕಪ್ 2024ರ ವಿಜೇತ ಟೀಮ್ ಇಂಡಿಯಾ ಗುರುವಾರ ಬೆಳಿಗ್ಗೆ ಭಾರತವನ್ನು ತಲುಪುವ ಸಾಧ್ಯತೆಯಿದೆ ಎಂದು ವರಿದಿಯಾಗಿದೆ. ವಾಸ್ತವವಾಗಿ, ವಿಶ್ವಕಪ್ ನಂತರ ಭಾರತ ತಂಡ ಕಳೆದ ಸೋಮವಾರ ಮನೆಗೆ ಮರಳಬೇಕಿತ್ತು. ಆದರೆ ಭಾರೀ ಬಿರುಗಾಳಿಯಿಂದಾಗಿ ಸಂಚಾರ ಸ್ಥಗಿತಗೊಂಡ ಕಾರಣ ರೋಹಿತ್‌ ಪಡೆ ಭಾರತಕ್ಕೆ ಹಿಂದಿರುಗಲು ಸಾಧ್ಯವಾಗದೆ ಅಲ್ಲೇ ಉಳಿಯಬೇಕಾಯಿತು.  

2 /5

ಟಿ20 ವಿಶ್ವಕಪ್ 2024ರ ಫೈನಲ್ ನಡೆದ ಬಾರ್ಬಡೋಸ್‌ಗೆ ಚಂಡಮಾರುತ ಅಪ್ಪಳಿಸಿದ ಕಾರಣ ಸಂಚಾರ ಸ್ಥಗಿತ ಗೊಂಡಿದೆ. ಬೆರಿಲ್ ಚಂಡಮಾರುತದಿಂದಾಗಿ ಕಳೆದ ನಾಲ್ಕು ದಿನಗಳಿಂದ ಈ ಪ್ರದೇಶದಲ್ಲಿ ವಿಮಾನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಮುನ್ನೆಚ್ಚರಿಕೆಯ ದೃಷ್ಟಿಯಿಂದ ಆ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಇದೇ ಕಾರಣದಿಂದ ಇದೀಗ ಟೀಂ ಇಂಡಿಯಾ ಆಟಗಾರರು ಭಾರತಕ್ಕೆ ಮರಳಲಾಗದೆ ಅಲ್ಲಿಯೇ ಟಿಕಾಣಿ ಊಡುವಂತೆ ಮಾಡಿದೆ.  

3 /5

ಬಾರ್ಬಡೋಸ್ ವಿಮಾನ ನಿಲ್ದಾಣವನ್ನು ಮೂರು ದಿನಗಳ ಕಾಲ ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಮಂಗಳವಾರ ಮತ್ತೆ ತೆರೆಯಲಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಭಾರತದ ಆಟಗಾರರು ಹೋಟೆಲ್‌ನಲ್ಲಿಯೇ ಉಳಿದುಕೊಂಡಿದ್ದಾರೆ. ಇನ್ನೂ ಈ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಕರ್ಫ್ಯೂ ಜಾರಿಯಲ್ಲಿರುವ ಕಾರಣ ಭಾರತದ ಆಟಗಾರರು ಮತ್ತು ಅವರ ಕುಟುಂಬ ಸದಸ್ಯರು ಮನೆಗೆ ಮರಳಲಾಗದೆ ತೀವ್ರ ತೊಂದರೆ ಎದುರಿಸುತ್ತಿದ್ದಾರೆ .  

4 /5

ಹೋಟೆಲ್‌ನಲ್ಲಿ ಸಿಬ್ಬಂದಿ ಕೊರತೆಯಿಂದ ಭಾರತೀಯ ಆಟಗಾರರು ಸರದಿ ಸಾಲಿನಲ್ಲಿ ನಿಂತು ಪೇಪರ್ ಪ್ಲೇಟ್‌ಗಳಲ್ಲಿ ಊಟ ಮಾಡುವ ಪರಿಸ್ಥಿತಿ ಎದುರಾಗಿದ್ದು, ವಿಶ್ವಕಪ್‌ಗೆ ತೆರಳಿದ್ದ ಭಾರತೀಯ ಮಾಧ್ಯಮ ಪ್ರತಿನಿಧಿಗಳು ಈ ಕುರಿತ ವರದಿ ಮಾಡಿದ್ದಾರೆ. ಮಂಗಳವಾರದಿಂದ ಚಂಡಮಾರುತದ ಪ್ರಭಾವ ಕಡಿಮೆಯಾದ ಹಿನ್ನೆಲೆಯಲ್ಲಿ ಭಾರತೀಯ ಆಟಗಾರರನ್ನು ಮರಳಿ ಕರೆತರಲು ಬಿಸಿಸಿಐ ವಿಶೇಷ ವ್ಯವಸ್ಥೆ ಮಾಡಿಕೊಂಡಿದೆ.   

5 /5

ಭಾರತೀಯ ಆಟಗಾರರಿಗಾಗಿ ಬಾರ್ಬಡೋಸ್‌ಗೆ ವಿಶೇಷ ವಿಮಾನವನ್ನು ಕಳುಹಿಸಲಾಗಿದೆ. ಇನ್ನೂ ಈ ವಿಮಾನ, ವಿಮಾನ ನಿಲ್ದಾಣಕ್ಕೆ ಬುಧವಾರ ಸಂಜೆ ಬಂದು ತಲುಪಲಿದೆ. ಭಾರತ ತಂಡಕ್ಕೆ ಅದ್ಧೂರಿ ಸ್ವಾಗತ ನೀಡಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಇರುವುದರಿಂದ ದೆಹಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.