Virat Kohli: ವಿಶ್ವ ಕ್ರಿಕೆಟ್’ನಲ್ಲಿ ಅನೇಕ ವೇಗದ ಬೌಲರ್’ಗಳಿದ್ದಾರೆ. ಪ್ರತಿಯೊಬ್ಬ ಆಟಗಾರನೂ ತಮ್ಮ ಬೌಲಿಂಗ್ ಮೂಲಕ ಬ್ಯಾಟ್ಸ್’ಮನ್ ಅನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸುತ್ತಾರೆ. ಆದರೆ ಕೆಲ ಬ್ಯಾಟ್ಸ್’ಮನ್’ಗಳು ಮಾತ್ರ ಬೌಲರ್’ಗಳನ್ನೇ ನಡುಗಿಸುವುದನ್ನು ನೋಡಿರಬಹುದು. ಅಂತಹ ಚಾಣಾಕ್ಷರದಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು.
ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಬ್ಯಾಟಿಂಗ್’ಗೆ ಬಂದರೆ ಸಾಕು ಬೌಲರ್’ಗಳಲ್ಲಿ ನಡುಕ ಹುಟ್ಟುತ್ತದೆ. ಎಷ್ಟೇ ಸ್ಪೀಡ್ ಆಗಿ ಬೌಲಿಂಗ್ ಮಾಡಿದ್ರೂ ಕೇರ್ ಮಾಡದ ಕೊಹ್ಲಿ, ಸಿಕ್ಸರ್-ಬೌಂಡರಿಗಳ ಸುರಿಮಳೆಗೈಯುತ್ತಾರೆ. ಅಂದಹಾಗೆ ಈ ರೀತಿ ಬೌಲಿಂಗ್ ಎದುರಿಸಲು ಓರ್ವ ವ್ಯಕ್ತಿ ಕಾರಣ ಎಂದು ವಿರಾಟ್ ಈ ಹಿಂದೆ ಹೇಳಿದ್ದರು.
ಇದನ್ನೂ ಓದಿ: ಈ ಪ್ರಾಣಿಯ ಹಾಲು ಕುಡಿದ ತಕ್ಷಣ ಕಡಿಮೆಯಾಗುತ್ತೆ ಡೆಂಘೀ ಜ್ವರ!
ವೇಗದ ಬೌಲರ್’ಗಳನ್ನು ಇಷ್ಟೊಂದು ಸುಲಭವಾಗಿ ಎದುರಿಸಲು ಕಾರಣವೇನು? ಇವರ ಈ ಯಶಸ್ಸಿನ ಹಿಂದೆ ಇರುವ ವ್ಯಕ್ತಿ ಯಾರೆಂಬುದನ್ನು ಸ್ವತಃ ಕೊಹ್ಲಿಯೇ ಹೇಳಿದ್ದಾರೆ. ಅಂದಹಾಗೆ ಅವರು ಬೇರೆ ಯಾರೂ ಅಲ್ಲ, ಟೀಂ ಇಂಡಿಯಾ ನೆಟ್ ಬೌಲರ್, ಥ್ರೋಡೌನ್ ಸ್ಪೆಷಲಿಸ್ಟ್ ರಘು. ಇವರಿಂದಾಗಿಯೇ ನಾನು ವೇಗದ ಬೌಲರ್’ಗಳನ್ನು ಲೆಕ್ಕಿಸುವುದಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.
ಅಭ್ಯಾಸದ ವೇಳೆ ನೆಟ್’ನಲ್ಲಿ ಗಂಟೆಗೆ 150 ಕಿ.ಮೀ ವೇಗದ ಎಸೆತಗಳನ್ನು ಎದುರಿಸುತ್ತೇವೆ. ಇವರ ಬೌಲಿಂಗ್ ಎದುರಿಸಿದ ನಂತರ, ವೇಗದ ಬೌಲರ್’ಗಳೆಲ್ಲಾ ನನಗೆ ಮಧ್ಯಮ ವೇಗದಂತೆ ತೋರುತ್ತದೆ. ಹಾಗಾಗಿಯೇ ವೇಗಿಗಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಿದೆ. ನೆಟ್ಸ್ನಲ್ಲಿ ರಘು ಅವರ ಥ್ರೋಡೌನ್ ಎಸೆತಗಳು ಅದ್ಭುತವಾಗಿದೆ' ಎಂದು ಕೊಹ್ಲಿ ತಮ್ಮ ಯಶಸ್ಸಿನ ರಹಸ್ಯದ ಹಿಂದಿನ ವ್ಯಕ್ತಿಯ ಬಗ್ಗೆ ಹೇಳಿದ್ದಾರೆ.
ಇದನ್ನೂ ಓದಿ: ನಮ್ಮ ಕಾಲದಲ್ಲಿ ಯಾವುದೇ ಹಗರಣಗಳಾಗಿಲ್ಲ: ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ
ರಘು ಕಳೆದ ಕೆಲವು ವರ್ಷಗಳಿಂದ ಟೀಂ ಇಂಡಿಯಾದ ಥ್ರೋಡೌನ್ ಸ್ಪೆಷಲಿಸ್ಟ್ ಬೌಲರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕರ್ನಾಟಕದ ಕುಮಟಾ ಮೂಲದವರಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ