ಈ ಬ್ಯೂಟಿ ಯಾರು ಅಂತ ಥಟ್‌ ಅಂತ ಹೇಳಿ ನೋಡೋಣ..! ಗೆಸ್‌ ಮಾಡಿ.. ಸರ್ಪ್ರೈಸ್‌ ಒಳಗೆ ಇದೆ..

Laila Movie poster : ಸೌತ್‌ ಸಿನಿರಂಗ ಸದಾ ಒಂದಲ್ಲ ಒಂದು ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕನಿಗೆ ಸರ್ಪ್ರೈಸ್‌ ನೀಡುತ್ತಲೇ ಇದೆ. ಹೊಸ ಹೊಸ ವಿಚಾರದೊಂದಿಗೆ ನಿರ್ದೇಶಕರು ಸಿನಿರಸಿಕರಿಗೆ ಔತಣ ನೀಡುತ್ತಲೇ ಇದ್ದಾರೆ.. ಇದೀಗ ಅಂತಹುದೇ ಒಂದು ಸಿನಿಮಾ ಆನ್‌ ಸ್ಕ್ರೀನ್‌ ಬರೋಕೆ ರೆಡಿಯಾಗುತ್ತಿದೆ...

Written by - Krishna N K | Last Updated : Jul 3, 2024, 05:54 PM IST
    • ನಿರ್ದೇಶಕರು ಒಂದಲ್ಲ ಒಂದು ವಿಭಿನ್ನ ಕಥೆಯೊಂದಿಗೆ ಬಂದು ಪ್ರೇಕ್ಷಕನಿಗೆ ಸರ್ಪ್ರೈಸ್‌ ನೀಡುತ್ತಿದ್ದಾರೆ.
    • ಒಂದೇ ರೀತಿಯ ಸಿನಿಮಾ ಮಾಡದೇ ವಿಭಿನ್ನ ಶೈಲಿಯ ಚಿತ್ರದತ್ತ ಗಮನಹರಿಸುತ್ತಿದ್ದಾರೆ
    • ಇದೀಗ ಅಂತಹುದೇ ಒಂದು ಸಿನಿಮಾ ಆನ್‌ ಸ್ಕ್ರೀನ್‌ ಬರೋಕೆ ರೆಡಿಯಾಗುತ್ತಿದೆ...
ಈ ಬ್ಯೂಟಿ ಯಾರು ಅಂತ ಥಟ್‌ ಅಂತ ಹೇಳಿ ನೋಡೋಣ..! ಗೆಸ್‌ ಮಾಡಿ.. ಸರ್ಪ್ರೈಸ್‌ ಒಳಗೆ ಇದೆ.. title=
Vishwak sen

Vishwak sen Laila movie first look : ಟಾಲಿವುಡ್‌ ಯಂಗ್ ಹೀರೋ ವಿಶ್ವಕ್ ಸೇನ್ ಒಂದರ ನಂತರ ಒಂದು ಹಿಟ್‌ ಸಿನಿಮಾ ನೀಡುತ್ತಿದ್ದಾರೆ.. ಒಂದೇ ರೀತಿಯ ಸಿನಿಮಾ ಮಾಡದೇ ವಿಭಿನ್ನ ಶೈಲಿಯ ಚಿತ್ರದತ್ತ ಗಮನಹರಿಸುತ್ತಿದ್ದಾರೆ. ಗಾಮಿ ಮತ್ತು ಗ್ಯಾಂಗ್ಸ್ ಆಫ್ ಗೋದಾವರಿ ಸೇರಿದಂತೆ ಈ ವರ್ಷ ಹಲವು ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.

ಗಾಮಿ ಚಿತ್ರದಲ್ಲಿ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಅಘೋರಿಯ ಪಾತ್ರದಲ್ಲಿ ವಿಶ್ವಕ್ ನಟಿಸಿದ್ದರು. ಗ್ಯಾಂಗ್ಸ್ ಆಫ್ ಗೋದಾವರಿಯಲ್ಲಿ ವಿಶ್ವಕ್ ನೆಗಟಿವ್‌ ಪಾತ್ರದ ಮೂಲಕ ಅಬ್ಬರಿಸಿದ್ದರು. ಈ ಸಿನಿಮಾ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಬ್ಲಾಕ್ಬಸ್ಟರ್‌ ಹಿಟ್‌ ಆಗಲಿಲ್ಲ ಅಂದ್ರೂ, ಕಲೆಕ್ಷನ್‌ ವಿಚಾರದಲ್ಲಿ ಯಾವುದೇ ಸಮಸ್ಯೆ ಇದ್ದಂತಿಲ್ಲ. 

ಇದನ್ನೂ ಓದಿ: ಸಿನಿಮಾ ಶೂಟಿಂಗ್‌ ವೇಳೆ ಸಲ್ಮಾನ್ ಖಾನ್ ಹತ್ಯೆಗೆ ಸಂಚು..? ಬಯಲಾಯ್ತು ರೋಚಕ ಸತ್ಯ..!

ಜುಲೈ 3 ರಂದು ಹೈದರಾಬಾದ್‌ನಲ್ಲಿ ವಿಶ್ವಕ್ ಹೊಸ ಸಿನಿಮಾ ಅನೌನ್ಸ್‌ ಮಾಡಲಾಯಿತು. ಚಿತ್ರಕ್ಕೆ ಲೈಲಾ ಅಂತ ಟೈಟಲ್‌ ನೀಡಲಾಗಿದೆ.. ಲೈಲಾ ಸಿನಿಮಾ ಬಿಡುಗಡೆ ಕಾರ್ಯಕ್ರಮದಲ್ಲಿ ವಿಶ್ವಕ್ ಸೇನ್, ನಾಯಕಿ ಆಕಾಂಕ್ಷಾ ಶರ್ಮಾ ಸೇರಿದಂತೆ ನಿರ್ದೇಶಕ ನಿರ್ಮಾಪಕರು, ಯೂನಿಟ್ ಸದಸ್ಯರು ಮತ್ತು ಟಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು. 

ಜೊತೆಗೆ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಪೋಸ್ಟರ್‌ನಲ್ಲಿ ವಿಶ್ವಕ್ ಮಹಿಳೆಯ ಗೆಟಪ್‌ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಲೈಲಾ ಚಿತ್ರವನ್ನು ರಾಮ್ ನಾರಾಯಣ್ ನಿರ್ದೇಶಿಸುತ್ತಿದ್ದು, ಗಿಬ್ರಾನ್ ಸಂಗೀತ ನೀಡಲಿದ್ದಾರೆ. ಶೈನ್ ಸ್ಕ್ರೀನ್ಸ್ ಬ್ಯಾನರ್ ಅಡಿಯಲ್ಲಿ ಸಾಹು ಗರಪತಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಮೂವಿ 2025 ಫೆಬ್ರವರಿ 14 ರಂದು ಪ್ರೇಮಿಗಳ ದಿನದಂದು ರಿಲೀಸ್‌ ಆಗಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News